ಬೆಂಗಳೂರು:ಹೊಸಕೋಟೆ ವಿಧಾನಸಭಾ ಕ್ಷೇತ್ರದ ಪಕ್ಷೇತರ ಶಾಸಕ ಶರತ್ ಬಚ್ಚೇಗೌಡ ಫೆಬ್ರವರಿ 25ರಂದು ಅಧಿಕೃತವಾಗಿ ಕಾಂಗ್ರೆಸ್ ಪಕ್ಷ ಸೇರ್ಪಡೆ ಆಗಿದ್ದಾರೆ.
ಸೇರ್ಪಡೆ ಖಚಿತವಾಗಿ ಆರು ತಿಂಗಳು ಕಳೆಯುತ್ತಾ ಬಂದಿದ್ದು, ಸೇರ್ಪಡೆಯ ಅಧಿಕೃತ ದಿನಾಂಕ ಪ್ರಕಟಿಸುವಲ್ಲಿ ಕೆಪಿಸಿಸಿ ಮಿನಮೇಷ ಎಣಿಸುತ್ತಿದ್ದು, ಕಳೆದ ವಾರವಷ್ಟೇ ಫೆಬ್ರವರಿ 26ರಂದು ಶರತ್ ಬಚ್ಚೇಗೌಡರನ್ನು ಕಾಂಗ್ರೆಸ್ಗೆ ಸೇರಿಸಿಕೊಳ್ಳಲು ನಿರ್ಧರಿಸಲಾಗಿತ್ತು. ಆದರೆ ಇದೀಗ ಒಂದು ದಿನ ಮುಂಚಿತವಾಗಿ ಸಮಾರಂಭ ಆಯೋಜಿಸಲು ತೀರ್ಮಾನಿಸಲಾಗಿದೆ. ಫೆಬ್ರವರಿ 25 ಸೇರ್ಪಡೆಗೆ ಉತ್ತಮ ದಿನ ಎಂದು ಸೂಚಿಸಿರುವ ಹಿನ್ನೆಲೆ ಅಂದೇ ಪಕ್ಷ ಸೇರ್ಪಡೆಯಾಗಲು ಶರತ್ ಬಚ್ಚೇಗೌಡ ಮನವಿ ಮಾಡಿಕೊಂಡಿದ್ದು, ಕಾಂಗ್ರೆಸ್ ರಾಜ್ಯ ನಾಯಕರು ಇದಕ್ಕೆ ಸಮ್ಮತಿ ಸೂಚಿಸಿದ್ದಾರೆ.