ಬೆಂಗಳೂರು :ರಾಜಧಾನಿಯಲ್ಲಿ ಶರನ್ನವರಾತ್ರಿ ಸಂಭ್ರಮ ಕಳೆಗಟ್ಟಿದೆ. ಪ್ರಸಿದ್ಧ ಗಂಗಮ್ಮ ದೇವಿ ದೇವಸ್ಥಾನದಲ್ಲಿ ನಿತ್ಯ ವಿಶೇಷಾಲಂಕಾರ ಹೋಮ-ಹವನಗಳಿಂದ ದೇವಿಯನ್ನು ಆರಾಧಿಸಲಾಗುತ್ತಿದೆ.
ನಗರದ ಮಲ್ಲೇಶ್ವರದ ಗಂಗಮ್ಮ ದೇವಿ ದೇವಸ್ಥಾನದಲ್ಲಿ ನವರಾತ್ರಿ ಪ್ರಯುಕ್ತ ಶುಕ್ರವಾರ ವಿಶೇಷ ಪೂಜೆ ನೆಡೆಯಿತು. ಕೋವಿಡ್ ಮಾರ್ಗಸೂಚಿಗಳನ್ನು ದಸರಾ ಹಬ್ಬದ ಪ್ರಯುಕ್ತ ಸಡೆಲಿಸಲಾಗಿರುವುದರಿದ ಅಪಾರ ಭಕ್ತ ಸಮೂಹವೇ ನೆರೆದಿತ್ತು.
ಅ.7 ರಿಂದ 15ರವರೆಗೆ ಶರನ್ನವರಾತ್ರಿ ಉತ್ಸವ ನಗರದಲ್ಲಿ ಅತ್ಯಂತ ವಿಜೃಂಭಣೆಯಿಂದ ಆಚರಿಸಲಾಗುತ್ತದೆ. ನಿನ್ನೆ ಗಣಪತಿ ಅನುಗ್ರಹ ಹೋಮದ ಜೊತೆಗೆ ಅರಿಶಿಣ-ಕುಂಕುಮ ಅಲಂಕಾರ ಮಾಡಲಾಗಿತ್ತು. ಇಂದು ದೇವಿಗೆ ಹಣ್ಣಿನಿಂದ ಅಲಂಕರಿಸಿ ಹೋಮ ಕೈಗೊಳ್ಳಲಾಯಿತು ಎಂದು ದೇವಸ್ಥಾನದ ಕಾರ್ಯದರ್ಶಿ ಕೆ.ಚಂದ್ರಶೇಖರ್ ಈಟಿವಿ ಭಾರತಕ್ಕೆ ತಿಳಿಸಿದರು.