ಬೆಂಗಳೂರು: ಪರಿಸರ ಸಂರಕ್ಷಣೆಗೆ ಮುಂದಾಗಿರುವ ರಾಕಿಂಗ್ ಸ್ಟಾರ್ ಯಶ್ ಅಭಿಮಾನಿಗಳ ಅಭಿಯಾನಕ್ಕೆ ಮಾಸ್ಟರ್ ಪೀಸ್ ಬೆಡಗಿ ಶಾನ್ವಿ ಶ್ರೀವಾತ್ಸವ್ ಸಾಥ್ ಕೊಟ್ಟಿದ್ದಾರೆ.
ರಾಕಿಂಗ್ ಸ್ಟಾರ್ ಅಭಿಮಾನಿಗಳಿಗೆ ಸಾಥ್ ನೀಡಿದ ಮಾಸ್ಟರ್ ಪೀಸ್ ಬೆಡಗಿ.. - bangalore news
ಪರಿಸರ ಸಂರಕ್ಷಣೆಗೆ ಮುಂದಾಗಿರುವ ರಾಕಿಂಗ್ ಸ್ಟಾರ್ ಯಶ್ ಅಭಿಮಾನಿಗಳ ಅಭಿಯಾನಕ್ಕೆ ಮಾಸ್ಟರ್ ಪೀಸ್ ಬೆಡಗಿ ಶಾನ್ವಿ ಶ್ರೀವಾತ್ಸವ್ ಸಾಥ್ ಕೊಟ್ಟಿದ್ದಾರೆ.
ರಾಕಿಂಗ್ ಸ್ಟಾರ್ ಹುಟ್ಟುಹಬ್ಬಕ್ಕೆ 50 ದಿನಗಳು ಇರೋವಾಗ್ಲೇ ಅವರ ಅಭಿಮಾನಿಗಳು ಇಂದಿನಿಂದ ಜನವರಿ 8ರವರೆಗೂ ಪರಿಸರ ಸಂರಕ್ಷಣೆ ಅಭಿಯಾನ ಮಾಡ್ತಿದ್ದಾರೆ. ಈ ಅಭಿಯಾನಕ್ಕೆ ಮಾಸ್ಟರ್‌ಪೀಸ್ ನಾಯಕಿ ಶಾನ್ವಿ ಶ್ರೀವಾತ್ಸವ್ ಸಾಥ್ ಕೊಟ್ಟಿದ್ದಾರೆ. ಅಖಿಲ ಕರ್ನಾಟಕ ರಾಕಿಂಗ್ ಸ್ಟಾರ್ ಯಶ್ ಅಭಿಮಾನಿ ಬಳಗದ ಆಹ್ವಾನದಂತೆ 5 BOSS 0 ಪೋಸ್ಟರ್ನ ತಮ್ಮ ಫೇಸ್ಬುಕ್,ಟ್ವಿಟರ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡುವ ಜೊತೆಗೆ ಈ ಪೋಸ್ಟರ್ ಕಾನ್ಸೆಪ್ಟ್ ನನಗೆ ಸಖತ್ ಇಷ್ಟವಾಯ್ತು. ಪರಿಸರ ಮಾಲಿನ್ಯದ ಮೇಲೆ ಕೋಪಗೊಂಡಿರೋ ಯಶ್ ಸರ್ ಅವರ ಮೈಮನಸ್ಸು ಹಸಿರುಮಯವಾಗಿರುವಂತೆ ಡಿಸೈನ್ ಮಾಡಿರೋ ರೀತಿ ಇಂಟ್ರೆಸ್ಟಿಂಗ್ ಅನ್ನಿಸ್ತಿದೆ.
ಯಶ್ ಅವರ ಅಭಿಮಾನಿಗಳ ಈ ಅಭಿಯಾನದಲ್ಲಿ ನಾನು ಸಹ ಭಾಗಿಯಾಗಿದ್ದೀನಿ. ನೀವು ಭಾಗಿಯಾಗಿ. ನಾವೆಲ್ಲರೂ ಹಸಿರು ಬೆಳೆಸೋಣ ಪರಿಸರ ಉಳಿಸೋಣ. ಜೈ ಹಿಂದ್,ಜೈ ಕರ್ನಾಟಕ ಮಾತೆ ನಿಮ್ಮ ಶಾನ್ವಿ ಶ್ರೀವಾತ್ಸವ್ ಅಂತಾ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಿದ್ದಾರೆ.