ಕರ್ನಾಟಕ

karnataka

ETV Bharat / state

ಸತ್ಯಮೇವ ಜಯತೆಯಲ್ಲಿ ನರಹಂತಕ ವೀರಪ್ಪನ್ ಬಗ್ಗೆ ಟ್ರೇಲರ್ ಮಾತ್ರ... ಪಿಕ್ಚರ್ ಬಾಕಿ ಇದೆ: ಶಂಕರ ಬಿದರಿ - ನರಹಂತಕ ವೀರಪ್ಪನ್ ಕಾರ್ಯಾಚರಣೆ

ಶಂಕರ್ ಬಿದರಿಯವರು ಸತ್ಯಮೇವ ಜಯತೆ ಎಂಬ ಆತ್ಮಚರಿತ್ರೆ ಬರೆದಿದ್ದಾರೆ. ಅದರಲ್ಲಿ ನೂರಾರು ಪೊಲೀಸ್​ ಸಾಹಸ ಪ್ರಕರಣಗಳ ಬಗ್ಗೆ ಮಾಹಿತಿ ಇದೆ.

ಶಂಕರ್​ ಬಿದರಿ
ಶಂಕರ್​ ಬಿದರಿ

By

Published : Sep 28, 2022, 8:39 PM IST

Updated : Sep 29, 2022, 3:25 PM IST

ಬೆಂಗಳೂರು:ಪೊಲೀಸ್ ಇಲಾಖೆಯಲ್ಲಿ ಐಪಿಎಸ್ ಅಧಿಕಾರಿಯಾಗಿ ನಾಲ್ಕು ದಶಕಗಳ ಕಾಲ ಸುದೀರ್ಘ ಸೇವೆ ಸಲ್ಲಿಸಿದ ದಕ್ಷ ಮತ್ತು ದಿಟ್ಟ ಪೊಲೀಸ್ ಅಧಿಕಾರಿಯೆಂದು ಹೆಸರುಗಳಿಸಿದ್ದ ಶಂಕರ ಬಿದರಿಯವರು '' ಸತ್ಯಮೇವ ಜಯತೇ '' ಎನ್ನುವ ತಮ್ಮ ಆತ್ಮ ಚರಿತ್ರೆ ಬರೆದಿದ್ದು, ಇದೇ ಅಕ್ಟೋಬರ್​ 2 ರಂದು ಗಾಂಧಿಜಯಂತಿ ದಿನ ಆಟೋ ಬಯೋಗ್ರಫಿ ಬಿಡುಗಡೆಯಾಗಲಿದೆ.

ಆತ್ಮಚರಿತ್ರೆಯಲ್ಲಿ ನೂರಾರು ಪೊಲೀಸ್ ಸಾಹಸ ಪ್ರಕರಣಗಳ ಬಗ್ಗೆ ಮಾಹಿತಿ ಇದೆ. ನರಹಂತಕ ವೀರಪ್ಪನ್ ವಿರುದ್ದ ನಡೆಸಿದ ಕಾರ್ಯಾಚರಣೆಯ ರಹಸ್ಯಮಯ ಕುತೂಹಲ ಘಟನೆಗಳಲ್ಲದೇ ಹತ್ತು ಹಲವು ರೋಚಕ ಅಪರಾಧ ಚಟುವಟಿಕೆಗಳನ್ನು ಪ್ರಸ್ಥಾಪಿಸಿದ್ದಾರೆ.

ಈಟಿವಿ ಭಾರತಕ್ಕೆ ನೀಡಿದ ವಿಶೇಷ ಸಂದರ್ಶನದಲ್ಲಿ ಶಂಕರ ಬಿದರಿಯವರು ಆತ್ಮ ಚರಿತ್ರೆ ಬಗ್ಗೆ ಹಲವಾರು ಮಾಹಿತಿಗಳನ್ನು ಹಂಚಿಕೊಂಡಿದ್ದು, ಇದೊಂದು ಪೊಲೀಸ್ ಇಲಾಖೆಗೆ ಉತ್ತಮ ಮಾರ್ಗದರ್ಶಕ ಕೈಪಿಡಿಯಾಗಲಿದೆ ಎಂದು ಹೇಳಿದ್ದಾರೆ.

ಪ್ರ. ಆತ್ಮಚರಿತ್ರೆಯ ವಿಶೇಷತೆಗಳೇನು..?

ಉತ್ತರ - ಪೊಲೀಸ್ ಇಲಾಖೆಯಲ್ಲಿ ತಾವು ಸಲ್ಲಿಸಿದ ಸುದೀರ್ಘ ಸೇವೆಯ ಸಂದರ್ಭದಲ್ಲಿ ನಿಭಾಯಿಸಿದ ಕ್ಲಿಷ್ಟಕರ ಅಪರಾಧ ಚಟುವಟಿಕೆಗಳ ಬಗ್ಗೆ ಹೆಚ್ಚಿನ ಬೆಳಕು ಚೆಲ್ಲಲಾಗಿದೆ. ಸತ್ಯಮೇವ ಜಯತೇ ಎಂದು ಹೆಸರಿಡಲಾಗಿದ್ದು, ಈ ಪುಸ್ತಕ 730 ಪುಟಗಳನ್ನು ಹೊಂದಿದೆ. ನಲವತ್ತು ವರ್ಷಗಳ ಪೊಲೀಸ್​ ಇಲಾಖೆ ಸೇವೆಯಲ್ಲಿ 40 ದಿನ ಸಹ ರಜೆ ಪಡೆಯದೇ ಕೆಲಸ ಮಾಡಿದ್ದೇನೆ.

ನಿವೃತ್ತ ಡಿಜೆ ಐಜಿ ಶಂಕರ್ ಬಿದರಿ ಅವರ ಸಂದರ್ಶನ

ಕರ್ತವ್ಯದ ವೇಳೆಯಲ್ಲಿ ಎಲ್ಲಾ ಎಡರು - ತೊಡರುಗಳನ್ನು ಎದುರಿಸಿ ಪ್ರತಿಕೂಲ ವಾತಾವರಣವನ್ನು ಅನುಕೂಲಕರ ಪರಿಸ್ಥಿತಿಯನ್ನಾಗಿ ಬದಲಾಯಿಸಿಕೊಂಡು ಕಾರ್ಯನಿರ್ವಹಿಸಲಾಗಿದೆ. ಆತ್ಮಚರಿತ್ರೆಯಲ್ಲಿ ಇದ್ದದ್ದು ಇದ್ದ ಹಾಗೆ ಬರೆಯಲಾಗಿದೆ. ಯಾವುದೇ ವರ್ಣನೆ, ಉತ್ಪೇಕ್ಷೆಗಳಿಲ್ಲದ ಕೃತಿ ಇದಾಗಿದೆ ಎಂದರು.

ನಿವೃತ್ತ ಡಿಜೆ ಐಜಿ ಶಂಕರ್ ಬಿದರಿ ಅವರ ಸಂದರ್ಶನ

ಪ್ರ. ನರಹಂತಕ ವೀರಪ್ಪನ್ ಕಾರ್ಯಾಚರಣೆ ಬಗ್ಗೆ ಏನು ಬರೆದಿದ್ದೀರಿ ..?

ಉತ್ತರ..ಕಾಡುಗಳ್ಳ ವೀರಪ್ಪನ್ ಬಗ್ಗೆ 140 ಕ್ಕು ಹೆಚ್ಚು ಪುಟಗಳ ಬಗ್ಗೆ ಮಾಹಿತಿ ಇದೆ. ಅತಿ ಹೆಚ್ಚಿನ ವಿವರಗಳನ್ನು ನೀಡಲಾಗಿಲ್ಲ . ವೀರಪ್ಪನ್ ಬಗ್ಗೆಯೇ ಮೂರು ಸಂಪುಟಗಳಲ್ಲಿ ಪ್ರತ್ಯೇಕ ಪುಸ್ತಕ ಪ್ರಕಟಿಸುವ ಉದ್ದೇಶವಿದೆ. ವೀರಪ್ಪನ್ ಕಾರ್ಯಾಚರಣೆ ಬಗ್ಗೆ ನನಗೆ ಗೊತ್ತಿರುವಷ್ಟು ಮಾಹಿತಿ ಬೆರೆಯವರಿಗೆ ತಿಳಿದಿಲ್ಲ. ಹಾಗಾಗಿ ಸುಮಾರು 1500 ಪುಟಗಳ ಪುಸ್ತಕವನ್ನು ಮುಂದಿನ ದಿನಗಳಲ್ಲಿ ಕನ್ನಡ, ಇಂಗ್ಲಿಷ್, ಮರಾಠಿ ಭಾಷೆಗಳಲ್ಲಿ ಪ್ರಕಟಿಸುವ ಯೋಚನೆ ಇದೆ.

ನಿವೃತ್ತ ಡಿಜೆ ಐಜಿ ಶಂಕರ್ ಬಿದರಿ ಅವರ ಸಂದರ್ಶನ

ಪ್ರ. ಆತ್ಮಚರಿತ್ರೆಯಲ್ಲಿ ರಾಜಕಾರಣದ ಬಗ್ಗೆ ನಿಮ್ಮ ಅನುಭವ..?

ಉ..ರಾಜಕಾರಣದ ಬಗ್ಗೆ ಹೆಚ್ಚಿನದೇನನ್ನೂ ಬರೆದಿಲ್ಲ. ಈಗಿನ ರಾಜಕಾರಣ ನನ್ನನ್ನು ಭ್ರಮನಿರಸನಗೊಳಿಸಿದೆ. ರಾಜಕೀಯದಲ್ಲಿ ಹೊಂದಾಣಿಕೆ ಮಾಡಿಕೊಳ್ಳಬೇಕಾಗುತ್ತದೆ. ಅದು ನನಗೆ ಕಷ್ಟವಾಗಿದ್ದರಿಂದ ಯಾವುದೇ ರಾಜಕೀಯ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳದೇ ತಟಸ್ಥನಾಗಿದ್ದೇನೆ.

ಪ್ರ. ಈ ಬಯೋಗ್ರಫಿ ಪೊಲೀಸ್ ಇಲಾಖೆಗೆ ಹೇಗೆ ಮಾರ್ಗದರ್ಶಕವಾಗಿದೆ...?

ಉ.. ತಿಪಟೂರಿನಲ್ಲಿ ಆರಂಭಗೊಂಡ ತಮ್ಮ ಪೊಲೀಸ್ ಇಲಾಖೆಯ ಸೇವೆ ರಾಜ್ಯ ಪೊಲೀಸ್ ಮಹಾನಿರ್ದೇಶಕರಾಗುವ ತನಕ ಅವಿರತವಾಗಿ ನಡೆದಿದೆ. ಈ ಅವಧಿಯಲ್ಲಿ ಮಂಡ್ಯ, ಚಿತ್ರದುರ್ಗ, ಧಾರವಾಡ, ಬಳ್ಳಾರಿ ಜಿಲ್ಲೆಯ ಎಸ್ಪಿಯಾಗಿ, ವೀರಪ್ಪನ್ ವಿರುದ್ಧದ ಕಾರ್ಯಾಚರಣೆಯ ಎಸ್​ಟಿಎಫ್ ನ ಮುಖ್ಯಸ್ಥರಾಗಿ, ರೈಲ್ವೆ ಪೊಲೀಸ್ ಮುಖ್ಯಸ್ಥರಾಗಿ, ಬೆಂಗಳೂರು ಪೊಲೀಸ್ ಆಯುಕ್ತರಾಗಿ, ಡಿಜಿಪಿಯಾಗಿ ಸೇವೆ ಸಲ್ಲಿಸುವ ಸಂದರ್ಭದಲ್ಲಿ ಪಡೆದ ಅನುಭವಗಳ ಬಗ್ಗೆ ಸತ್ಯವಾದ ಮತ್ತು ಸಂಪೂರ್ಣ ಮಾಹಿತಿ ಇದೆ.

ಪ್ರ. ವೀರಪ್ಪನ್ ತಂಡದ ಬಲವನ್ನು ಕುಗ್ಗಿಸಿದ ಕೀರ್ತಿ ನಿಮ್ಮದು ಆ ಬಗ್ಗೆ ಏನು ಮಾಹಿತಿ ಇದೆ..?

ಉ..ನರಹಂತಕ ವೀರಪ್ಪನ್ ವಿರುದ್ಧ ಕಾರ್ಯಾಚರಣೆ ನಡೆಸಲು ಯಾವೊಬ್ಬ ಪೊಲೀಸ್ ಅಧಿಕಾರಿಯೂ ಹೋಗಲು ಆಸಕ್ತಿ ತೋರದಿದ್ದಾಗ ನಾನು ಜವಾಬ್ದಾರಿ ತಗೆದುಕೊಂಡು ಕಾಡಿಗೆ ಹೋದೆ. ಸುಮಾರು 200 ಕ್ಕೂ ಹೆಚ್ಚು ಇದ್ದ ವೀರಪ್ಪನ್ ತಂಡದ ಬಲವನ್ನು 7 ರಿಂದ 8 ಜನರಿರುವ ತಂಡಕ್ಕೆ ಕುಗ್ಗಿಸಲಾಯಿತು. ಕಾರ್ಯಾಚರಣೆ ವೇಳೆ ವೀರಪ್ಪನ್ ಕಡೆಯ ಹಲವರು ಪೊಲೀಸ್ ದಾಳಿಯಲ್ಲಿ ಮೃತಪಟ್ಟರು. ಬಹಳಷ್ಟು ವೀರಪ್ಪನ್ ಬಂಟರನ್ನು ಬಂಧಿಸಲಾಯಿತು. ಕೆಲವರು ಶರಣಾದರು.

ನಿವೃತ್ತ ಡಿಜೆ ಐಜಿ ಶಂಕರ್ ಬಿದರಿ ಅವರ ಸಂದರ್ಶನ

ಪ್ರ. ಮಂಡ್ಯ ಜಿಲ್ಲೆ ಗಲಭೆ ನಿಭಾಯಿಸಿದ್ದು ಹೇಗೆ..?

ಉ..1980ರ ದಶಕದಲ್ಲಿ ಮಂಡ್ಯ ಜಿಲ್ಲೆಯಲ್ಲಿ ಕಾನೂನು ಸುವ್ಯವಸ್ಥೆ ನಿಭಾಯಿಸುವುದು ಸುಲಭದ ಮಾತಾಗಿರಲಿಲ್ಲ. ಆ ಜಿಲ್ಲೆಯ ಎಸ್ಪಿಯಾಗಿ ವರ್ಗಾವಣೆಯಾಗಿದ್ದಾಗ ಹಲವಾರು ಸವಾಲುಗಳಿದ್ದವು. ಕಾನೂನು ಸುವ್ಯವಸ್ಥೆ ಹದಗೆಟ್ಟಿತ್ತು. ಪ್ರತಿ ತಾಲೂಕಿಗೆ ಒಬ್ಬ ಎಸ್ಪಿಯನ್ನು ಬಂದೋಬಸ್ತ್​ಗಾಗಿ ನಿಯೋಜಿಸಲಾಗಿತ್ತು.

ಕೋಮುಗಲಭೆ ನಿಭಾಯಿಸುವುದು ಸವಾಲಾಗಿತ್ತು. ಬೆಸ್ತರು ಮತ್ತು ಒಕ್ಕಲಿಗರ ನಡುವಿನ ಘರ್ಷಣೆ ನಿಯಂತ್ರಿಸುವುದು ಕಷ್ಟಕರವಾಗಿತ್ತು. ರೈತ ಸಂಘ ಬಹಳ ಬಲಿಷ್ಟವಾಗಿತ್ತು. ರೈತ ಸಂಘದ ಅನುಮತಿಯಿಲ್ಲದೇ ಯಾವೊಬ್ಬ ಸರ್ಕಾರಿ ಅಧಿಕಾರಿ/ ನೌಕರ ಹಳ್ಳಿ ಪ್ರವೇಶಿಸುವಂತಿರಲಿಲ್ಲ. ಗೋಲಿಬಾರ್​ನಲ್ಲಿ 7 ಜನ ಮೃತಪಟ್ಟ ಘಟನೆಯನ್ನು ಹೇಗೆ ನಿಭಾಯಿಸಲಾಯಿತು ಎನ್ನುವುದರ ಚಿತ್ರಣ ಆತ್ಮಚರಿತ್ರೆಯಲ್ಲಿದೆ.

ಪ್ರ... ನಿಮ್ಮ ಮೇಲೆ ಮಾರಣಾಂತಿಕ ಹಲ್ಲೆನಡೆಸಲಾಯಿತಂತೆ .. ಆ ಬಗ್ಗೆ ಏನು ಮಾಹಿತಿ ಇದೆ..?

ಉ.. ಪೊಲೀಸ್ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿರುವಾಗ ಹಲವಾರು ಬಾರಿ ತಮ್ಮ ಮೇಲೆ ದಾಳಿ ನಡೆಸಲಾಗಿದೆ. ಮಾರಣಾಂತಿಕ ಹಲ್ಲೆಗಳೂ ನಡೆದಿವೆ. ಪ್ರಾಣಾಪಾಯದಿಂದ ಪಾರಾದ ನಿದರ್ಶನಗಳೂ ಇವೆ. ಮಹಾಲಕ್ಷ್ಮಿ ರೈಲು ದರೋಡೆ ಪ್ರಕರಣ ಭೇದಿಸಿದ್ದು, ನಕ್ಸಲೀಯರಿಗೆ ಮದ್ದು ಗುಂಡು ಸರಬರಾಜು ಮಾಡುವವರನ್ನು ಸೆರೆಹಿಡಿದಿದ್ದು, ಬಳ್ಳಾರಿ ಜಿಲ್ಲೆಯಲ್ಲಿ ಭೀಮ್ಲಾ ನಾಯಕ್ ರೌಡಿ ತಂಡದ ಜತೆ ನಡೆದ ಕಾಳಗ, ದೊಡ್ಡ..ದೊಡ್ಡ ದರೋಡೆ, ಡಕಾಯಿತಿ ಪ್ರಕರಣಗಳನ್ನು ಭೇಧಿಸಿರುವುದು, ತುಮಕೂರು ಸಿದ್ಧಗಂಗಾ ಮಠದ ಉತ್ತರಾಧಿಕಾರಿ ವಿವಾದ ಬಗೆಹರಿಯದಿದ್ದರ ಬಗ್ಗೆಯೂ ಆಟೋ ಬಯೋಗ್ರಫಿಯಲ್ಲಿ ವಿವರಣೆಗಳಿವೆ.

ಓದಿ:ರಾಜ್ಯದಲ್ಲಿ ಪೇಮೆಂಟ್ ಸಿಎಂ ಯಾರಾದರೂ ಇದ್ರೆ, ಅದು ಸಿದ್ದರಾಮಣ್ಣ: ನಳೀನ್​ ಕುಮಾರ್ ಕಟೀಲ್​

Last Updated : Sep 29, 2022, 3:25 PM IST

ABOUT THE AUTHOR

...view details