ಬೆಂಗಳೂರು: ಕೊರೊನಾ ವೈರಸ್ನಿಂದ ದೇಶದಲ್ಲೆಡೆ ಲಾಕ್‌ಡೌನ್ ಇದ್ದ ಕಾರಣ ವಾಯು ಮಾಲಿನ್ಯ ಸಂಪೂರ್ಣ ನಿಯಂತ್ರಣಕ್ಕೆ ಬಂದಿದೆ. ಇದೇ ರೀತಿಯಲ್ಲಿ ವಾಯು ಮಾಲಿನ್ಯ ನಿಯಂತ್ರಣ ಮುಂದುವರೆಯಬೇಕಿದ್ದರೆ ಲಾಕ್‌ಡೌನ್ ತೆರವಾದ ಬಳಿಕವೂ ಸಾರ್ವಜನಿಕರು ಕಾರು, ಬೈಕು ಸೇರಿದಂತೆ ಇತರೆ ಇಂಧನಯುಕ್ತ ವಾಹನ ಬಳಸದೇ ಬೈಸಿಕಲ್ ಬಳಸುವತ್ತ ಜಾಗೃತರಾಗಬೇಕು. ಇದರಿಂದ ವಾತಾವರಣ ಶುದ್ಧವಾಗಿರುತ್ತೆ ಎಂಬ ನಿಟ್ಟಿನಲ್ಲಿ ಸೈಕ್ಲಿಸ್ಟ್ ಸಾಫ್ಟ್‌ವೇರ್ ಎಂಜಿನಿಯರ್ ಸತ್ಯ ಶಂಕರನ್ ಜಾಗೃತಿ ಮೂಡಿಸುತ್ತಿದ್ದಾರೆ.
ಸೈಕ್ಲಿಸ್ಟ್ ಸಾಫ್ಟ್‌ವೇರ್ ಎಂಜಿನಿಯರ್ ಸತ್ಯ ಶಂಕರನ್ ಸೈಕ್ಲಿಸ್ಟ್ ಸಾಫ್ಟ್‌ವೇರ್ ಎಂಜಿನಿಯರ್ ಸತ್ಯ ಶಂಕರನ್ ಸೈಕ್ಲಿಸ್ಟ್ ಹಾಗೂ ನರಶಸ್ತ್ರ ತಜ್ಞರಾದ ಡಾ. ಅರವಿಂದ ತೇಜ ಅವರ ತಂಡ #ResetWithCycling ಎಂಬ ನೂತನ ಅಭಿಯಾನದ ಮೂಲಕ ಜನರಲ್ಲಿ ಜಾಗೃತಿ ಮೂಡಿಸುವ ಕೆಲಸಕ್ಕೆ ಕೈ ಹಾಕಿದೆ. ಲಾಕ್‌ಡೌನ್ ಇದ್ದ ಕಾರಣ ಈಗ ನಮ್ಮ ಪರಿಸರ ತುಂಬಾ ತಿಳಿಯಾಗಿದೆ. ಈಗ ಅದನ್ನು ಕಾಪಡಿಕೊಂಡು ಹೋಗುವ ಸುವರ್ಣಾವಕಾಶ ನಮಗೆ ಸಿಕ್ಕದೆ.
ಸೈಕಲ್ ಜಾಥಾದ ಮೂಲಕ ಜಾಗೃತಿ ಮೂಡಿಸುತ್ತಿರುವ ಟೆಕ್ಕಿ ಶಂಕರನ್ ಆ ನಿಟ್ಟಿನಲ್ಲಿ ಜನರು ಕಾರ್, ಬೈಕ್ ಹಾಗೂ ಪ್ರೈವೇಟ್ ವೆಹಿಕಲ್ ಬಳಸದೆ ಸೈಕಲ್ಗೆ ಆದ್ಯತೆ ಕೊಟ್ಟರೆ ನಮ್ಮ ಪರಿಸರವು ಶುದ್ಧವಾಗಿರುತ್ತೆ. ಅಲ್ಲದೆ ನಮ್ಮ ಆರೋಗ್ಯವೂ ಚೆನ್ನಾಗಿರುತ್ತದೆ ಎಂದು ಸೈಕ್ಲಿಸ್ಟ್ ಸತ್ಯ ಶಂಕರನ್ ಈಟಿವಿ ಭಾರತ ಮೂಲಕ ಮನವಿ ಮಾಡಿದ್ದಾರೆ. ಲಾಕ್‌ಡೌನ್‌ನಿಂದಾಗಿ ಇಡೀ ದೇಶದ ವಾತಾವರಣ ಸಂಪೂರ್ಣ ನಿಯಂತ್ರಣಕ್ಕೆ ಬಂದಿದೆ. ಪ್ರಸ್ತುತ ಕೆಲವೆಡೆ ಲಾಕ್‌ಡೌನ್ ಸಡಿಲಿಕೆಗೆ ಅವಕಾಶ ನೀಡಲಾಗಿದೆ. ಇದರಿಂದ ಮತ್ತೆ ವಾಯು ಮಾಲಿನ್ಯ ಉಂಟಾಗಿ ಪರಿಸರ ನಾಶವಾಗಬಹುದು. ಇದಕ್ಕೆ ಅವಕಾಶ ನೀಡಬಾರದು. ಹೇಗೋ ಲಾಕ್‌ಡೌನ್‌ನಿಂದಾಗಿ ಸ್ವಚ್ಛ ವಾತಾವರಣ ನಿರ್ಮಾಣವಾಗಿದೆ. ಇದನ್ನು ನಾವುಗಳು ಮುಂದುವರೆಸಿಕೊಂಡು ಹೋಗುವತ್ತ ಎಲ್ಲರೂ ಕೈ ಜೋಡಿಸುವಂತೆ ಮನವಿ ಮಾಡಿದ್ದಾರೆ.
ಸೈಕ್ಲಿಸ್ಟ್ ಸಾಫ್ಟ್‌ವೇರ್ ಎಂಜಿನಿಯರ್ ಸತ್ಯ ಶಂಕರನ್ ಪ್ರತಿಯೊಬ್ಬ ನಾಗರಿಕರೂ ಕೆಲವೊಂದು ಅವಶ್ಯಕ ಕೆಲಸಕ್ಕೆ ಕಾರ್, ಬೈಕ್ ಬಳಸುವ ಬದಲು ಸೈಕಲ್ ಬಳಸಿ. ಸೈಕಲ್ ನಾವು ಬಳಸುವ ಮೊಬೈಲ್ ಫೋನ್ ಬೆಲೆಗಿಂತ ಕಡಿಮೆ ಇದೆ. ಅದ್ದರಿಂದ ಜನರು ಜಾಗೃತರಾಗಬೇಕಿದೆ. ಈಗ ಪ್ರತಿಯೊಂದು ಮನೆಯಲ್ಲೂ ಮೊಬೈಲ್ ಫೋನ್ ಇದೆ. ಅದೇ ರೀತಿ ಪ್ರತಿ ಮನೆಯಲ್ಲೂ ಸೈಕಲ್ ಇರಬೇಕು. ಇದರಿಂದ ಪರಿಸರ ಶುದ್ಧವಾಗುತ್ತೆ. ಜೊತೆಗೆ ನಾವುಗಳು ಆರೋಗ್ಯವಾಗಿರುತ್ತೇವೆ ಎಂದಿದ್ದಾರೆ.
ಸದ್ಯ ಬೆಂಗಳೂರಿನಂತ ಸಿಟಿಗಳಲ್ಲಿ ವಾಹನ ದಟ್ಟಣೆ ಹೆಚ್ಚಾಗಿದೆ. ಇದರಿಂದ ಟ್ರಾಫಿಕ್ ಸಮಸ್ಯೆ ಹಾಗೂ ಪರಿಸರ ಕೂಡ ನಾಶವಾಗ್ತಿದೆ. ವಾಹನ ದಟ್ಟಣೆಯನ್ನು ಸರ್ಕಾರ ಕಂಟ್ರೋಲ್ ಮಾಡ್ತಿಲ್ಲ ಎಂದು ದೂರುವ ಬದಲು, ನಾವೇ ಸೈಕಲ್ ಬಳಸುವ ಮೂಲಕ ಪರಿಹಾರ ಕಂಡು ಕೊಳ್ಳಬಹುದಾಗಿದೆ.
ಪ್ರತಿಯೊಬ್ಬರೂ ಸೈಕಲ್ ಬಳಸಿದ್ರೆ ಸರ್ಕಾರ ತಾನಾಗೇ ಸೈಕಲ್ ಸವಾರರಿಗಾಗಿ ಸಪರೇಟ್ ಟ್ರ್ಯಾಕ್ ರೆಡಿ ಮಾಡುತ್ತೆ. ಇದರ ಜೊತೆ ಬೆಂಗಳೂರಿನಲ್ಲಿರುವ ಕಂಪನಿಗಳು ತಮ್ಮ ಉದ್ಯೋಗಿಗಳಿಗೆ ಲ್ಯಾಪ್ಟಾಪ್, ಮೊಬೈಲ್ ಕೊಡಿಸುವ ರೀತಿ ಸೈಕಲ್ ಕೊಡಿಸಬೇಕು. ನಮ್ಮ ಉದ್ಯೋಗಿಗಳು ಆಫೀಸಿಗೆ ಸೈಕಲ್ನಲ್ಲಿ ಬರ್ತಾರೆ, ಸಪರೇಟ್ ಟ್ರ್ಯಾಕ್ ಮಾಡಿ ಎಂದು ಮನವಿ ಮಾಡಿದ್ರೆ ಸರ್ಕಾರ ಖಂಡಿತಾ ಸ್ಪಂದಿಸುತ್ತೆ ಎಂದರು.
ಕೋಟ್ಯಂತರ ರೂಪಾಯಿ ಖರ್ಚ್ ಮಾಡಿ ಪಾರ್ಕಿಂಗ್ ಸ್ಲಾಟ್ ಕಟ್ಟಿಸುವ ಬದಲು ಸೈಕಲ್ ಸವಾರರಿಗೆ ಟ್ರ್ಯಾಕ್ ಮಾಡಿಕೊಟ್ರೆ ಸೈಕಲ್ ಬಳಕೆ ಮಾಡುವವರ ಸಂಖ್ಯೆ ಕೂಡ ಹೆಚ್ಚುತ್ತೆ. ಇದರಿಂದ ನಮ್ಮ ಪರಿಸರ ಸ್ಚಚ್ಛವಾಗಿರುತ್ತೆ. ಈ ನಿಟ್ಟಿನಲ್ಲಿ ನಾವು ಸೈಕ್ಲಿಂಗ್ ಜಾಥಾ ಮೂಲಕ ಜನರಲ್ಲಿ ಜಾಗೃತಿ ಮೂಡಿಸುವ ಕೆಸಕ್ಕೆ ಕೈ ಹಾಕಿದ್ದೇವೆ ಎಂದರು.