ಕರ್ನಾಟಕ

karnataka

ETV Bharat / state

ಸ್ಯಾಂಡಲ್​ವುಡ್​ಗೆ ಶಂಕ್ರಣ್ಣನ 'ಫ್ಯಾನ್' ಎಂಟ್ರಿ - Kannada news

ಚಿತ್ರದ ನಾಯಕ ಶಂಕರ್ ನಾಗ್ ಅವರ 'ಫ್ಯಾನ್' ಎಂಬುದು ಗಮನಾರ್ಹ. ಸದ್ಯ ಸ್ಯಾಂಡಲ್​ವುಡ್​ನಲ್ಲಿ ಶಂಕ್ರಣ್ಣನ ಜೀವನಕ್ಕೂ ಈ ಚಿತ್ರಕ್ಕೂ ಏನಾದರೂ ಸಂಬಂಧವಿದೆಯಾ ? ಅನ್ನೋ ಡೌಟ್ ಶುರುವಾಗಿದೆ.

ಸ್ಯಾಂಡಲ್ ವುಡ್ ಗೆ ಶಂಕ್ರಣ್ಣನ 'ಫ್ಯಾನ್' ಎಂಟ್ರೀ

By

Published : Jun 2, 2019, 9:48 AM IST

ಬೆಂಗಳೂರು : ಈ ಸಿನಿಮಾರಂಗವೇ ಹೀಗೆ ಯಾವಾಗ್ಲೂ ಏನಾದ್ರೂ ಒಂದು ವಿಶಿಷ್ಟವಾದ ಪ್ರಯೋಗದ ಮೂಲಕ ಜನರನ್ನ ನಿಬ್ಬೆರಗಾಗಿಸುವಂತೆ ಮಾಡುತ್ತೆ. ಸದ್ಯ ತನ್ನದೆಯಾದ ವಿಶಿಷ್ಟ ಕಥಾ ಹಂದರದ ಮೂಲಕ ಸ್ಯಾಂಡಲ್​ವುಡ್​ನಲ್ಲಿ ಕ್ರೀಯೆಟಿವ್ ಆಗಿ 'ಫ್ಯಾನ್​ ' ಸಿನಿಮಾ ಬರ್ತಿದೆ.

ರಂಗಭೂಮಿಯ ಮತ್ತು ರಿಯಾಲಿಟಿ ಶೋಗಳ ಎಳೆಯಿರುವ ಸಿನಿಮಾಗಳು ಈಗಾಗಲೇ ಬಂದಿದ್ದು, ಸದ್ಯ ಸಿರಿಯಲ್ ಟ್ರೆಂಡ್​ನ್ನು ಬಳಸಿಕೊಂಡ 'ಫ್ಯಾನ್' ಚಿತ್ರವೊಂದು ರೆಡಿಯಾಗಿ ತೆರೆಗೆ ಅಪ್ಪಳಿಸಲು ಸಿದ್ದವಾಗಿದ್ದು ಚಿತ್ರತಂಡ ಪೋಸ್ಟರ್ ಕೂಡ ಲಾಂಚ್ ಮಾಡಿದೆ.

ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ನಡೆದ ಪೋಸ್ಟರ್ ಲಾಂಚ್ ಕಾರ್ಯಕ್ರದಲ್ಲಿ ವಾಣಿಜ್ಯ ಮಂಡಳಿ ಅಧ್ಯಕ್ಷರಾದ ಚಿನ್ನೇಗೌಡ್ರು ಹಾಗೂ ಕಾರ್ಯದರ್ಶಿಗಳಾದ ಭಾಮ ಹರೀಶ್ ಚಿತ್ರದ ಪೋಸ್ಟರ್ ಲಾಂಚ್ ಮಾಡಿ ಚಿತ್ರತಂಡಕ್ಕೆ ವಿಶ್ ಮಾಡಿದ್ರು.

ಫ್ಯಾನ್​ ಚಿತ್ರದ ಪೋಸ್ಟರ್ ಲಾಂಚ್​
ಚಿತ್ರಕ್ಕೆ ದರ್ಶಿತ್ ಭಟ್ ಆಕ್ಷನ್ ಕಟ್ ಹೇಳಿದ್ದು ಸಾಕಷ್ಟು ಸೀರಿಯಲ್​​ನಲ್ಲಿ ನಿರ್ದೇಶಕರಾಗಿ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ, ಸದ್ಯ ಬಿಗ್ ಸ್ಕ್ರೀನ್ ಮೇಲೆ ಸೀರಿಯಲ್ ಕಥೆ ತರಲು ಮುಂದಾಗಿದ್ದಾರೆ. ಚಿತ್ರದ ಮತ್ತೊಂದು ವಿಶೇಷತೆ ಎನಪ್ಪಾ ಅಂದ್ರೆ, ಬಹುತೇಕ 'ಫ್ಯಾನ್' ಶೂಟಿಂಗ್ ನಟ ಶಂಕರ್ ನಾಗ ಅವರ ಹುಟ್ಟೂರಾದ ಹೊನ್ನಾವರದಲ್ಲೇ ಚಿತ್ರೀಕರಣವಾಗಿದೆ.

ಅಲ್ಲದೆ ಚಿತ್ರದಲ್ಲಿ ನಾಯಕ ನಟ ಶಂಕರ್ ನಾಗ್ ಅವರ 'ಫ್ಯಾನ್' ಎಂಬುದು ಗಮನಾರ್ಹ. ಸದ್ಯ ಸ್ಯಾಂಡಲ್​ವುಡ್​ನಲ್ಲಿ ಶಂಕ್ರಣ್ಣನ ಜೀವನಕ್ಕೂ ಈ ಚಿತ್ರಕ್ಕೂ ಏನಾದರೂ ಸಂಬಂಧವಿದೆಯಾ ? ಅನ್ನೋ ಡೌಟ್ ಶುರುವಾಗಿದೆ. ಅದ್ರೆ ಡೈರೆಕ್ಟರ್ ಮಾತ್ರ ಚಿತ್ರ ನೋಡಿ ಎಲ್ಲದಕ್ಕೂ ಉತ್ತರ ಸಿಗುತ್ತೆ ಅಂತಿದಾರೆ.

ಚಿತ್ರದಲ್ಲಿ ಶಂಕ್ರಣ್ಣ ಫ್ಯಾನ್ ಆಗಿ ಹೊಸ ಪ್ರತಿಭೆ ಆರ್ಯನ್ ನಟಿಸಿದ್ದು, ಈ ಚಿತ್ರದ ಮೂಲಕ ಚಂದನವನಕ್ಕೆ ಕಾಲಿಟ್ಟಿದ್ದಾರೆ. ಚಿತ್ರದ ನಾಯಕಿಯಾಗಿ ಅದ್ವಿತಿ ಶೆಟ್ಟಿ ಕಾಣಿಸಿಕೊಂಡ್ರೆ ಸೆಲೆಬ್ರೆಟಿ ನಾಯಕಿಯಾಗಿ ಸಮೀಕ್ಷಾ ಬಣ್ಣ ಹಚ್ಚಿದ್ದಾರೆ. ಇನ್ನೂ ಚಿತ್ರದಲ್ಲಿ ಬಹು ದೊಡ್ಡ ತಾರಾ ಬಳಗವಿದ್ದು, ತುಂಬಾ ದಿನಗಳ ನಂತ್ರ ವಿಜಯ್ ಕಾಶಿ ಕಮ್ ಬ್ಯಾಕ್ ಮಾಡಿದ್ದಾರೆ. ಚಿತ್ರದಲ್ಲಿ ಮಂಡ್ಯ ರಮೇಶ್, ಖ್ಯಾತ ತುಳು ನಟ ನವೀನ್ ಡಿ ಪಡೀಲ್, ರವಿಭಟ್, ಸಂಗೀತಾ ಭಟ್ ನಟಿಸಿದ್ದಾರೆ.

ABOUT THE AUTHOR

...view details