ಕರ್ನಾಟಕ

karnataka

ETV Bharat / state

ರಾಘವೇಂದ್ರ ಸಹಕಾರಿ ಬ್ಯಾಂಕ್​ ಹಗರಣದ ತನಿಖೆ ಸಿಬಿಐಗೆ ವಹಿಸಲು ಸರ್ಕಾರದ ತೀರ್ಮಾನ: ಡಾ.ಶಂಕರ ಗುಹಾ ಹೇಳಿದ್ದೇನು.? - ಠೇವಣಿದಾರರ ಹಿತರಕ್ಷಣಾ ವೇದಿಕೆ

ಶ್ರೀ ರಾಘವೇಂದ್ರ ಸಹಕಾರ ಬ್ಯಾಂಕ್​ ಮತ್ತು ವಸಿಷ್ಠ ಬ್ಯಾಂಕ್​ ಹಗರಣ - ಪ್ರಕರಣ ಸಿಬಿಐಗೆ ವಹಿಸಲು ಸರ್ಕಾರ ತೀರ್ಮಾನ.

shankar-guha
ಡಾ.ಶಂಕರ ಗುಹಾ

By

Published : Jan 18, 2023, 3:16 PM IST

Updated : Jan 18, 2023, 4:48 PM IST

ಡಾ.ಶಂಕರ ಗುಹಾ ಪ್ರತಿಕ್ರಿಯೆ

ಬೆಂಗಳೂರು: ಶ್ರೀ ರಾಘವೇಂದ್ರ ಕೋ ಆಪರೇಟಿವ್ ಸೊಸೈಟಿ ಹಾಗೂ ವಸಿಷ್ಠ ಬ್ಯಾಂಕ್​ ಹಗರಣದ ತನಿಖೆ ಸರ್ಕಾರ ಸಿಬಿಐಗೆ ವಹಿಸಲು ತೀರ್ಮಾನಿಸಿರುವುದು ಸ್ವಾಗತ. ಎರಡೂವರೆ ವರ್ಷದ ಹೋರಾಟಕ್ಕೆ ಒಂದು ಹಂತದಲ್ಲಿ ಜಯ ಸಿಕ್ಕಿದೆ ಎಂದು ಶ್ರೀ ಗುರು ರಾಘವೇಂದ್ರ ಕೋ- ಆಪರೇಟಿವ್ ಬ್ಯಾಂಕ್ ಷೇರುದಾರರು ಮತ್ತು ಠೇವಣಿದಾರರ ಹಿತರಕ್ಷಣಾ ವೇದಿಕೆ ಅಧ್ಯಕ್ಷ ಡಾ.ಶಂಕರ ಗುಹಾ ಹೇಳಿದ್ದಾರೆ.

ವಿಧಾನಸೌಧದಲ್ಲಿ ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಅವರು, ನಿನ್ನೆ ಸಹಕಾರ ಸಚಿವ ಎಸ್​.ಟಿ ಸೋಮಶೇಖರ್​ ರಾಘವೇಂದ್ರ ಬ್ಯಾಂಕ್ ಹಗರಣ ಜೊತೆ ವಸಿಷ್ಠ ಬ್ಯಾಂಕ್ ಹಗರಣವನ್ನು ಸಿಬಿಐ ತನಿಖೆಗೆ ನೀಡುವ ಬಗ್ಗೆ ತಿಳಿಸಿದ್ದಾರೆ. ಇದರ ಜೊತೆ 120 ಸೊಸೈಟಿಗಳು ಹಗರಣದಲ್ಲಿ ಸಿಲುಕಿದೆ. ಸೊಸೈಟಿ ಮಾಲೀಕರು ಲೋನ್ ಪಡೆದು ಪರಾರಿಯಾಗಿದ್ದು, ಬೇಲ್ ಮೇಲೆ ಹೊರಗಿದ್ದಾರೆ. ಕಣ್ವ ಬ್ಯಾಂಕ್ ಕೂಡ ತನಿಖೆ ಮಾಡಬೇಕು ಎಂದು ಆಗ್ರಹಿಸಿದರು. ಸಂಸದ ತೇಜಸ್ವಿ ಸೂರ್ಯ ಹಾಗೂ ಶಾಸಕ ರವಿಸುಬ್ರಹ್ಮಣ್ಯ ನಾವೇ ದುಡ್ಡು ಕೊಡಿಸಿದೆವು ಅನ್ನೋ ರೀತಿ ಪ್ರಚಾರ ಮಾಡಿಕೊಂಡಿದ್ರು.

850 ಕೇಸ್ ತನಿಖೆಗೆ ಸಿಐಡಿಗೆ ಹೋಗಿದೆ: ನಮ್ಮ ದುಡ್ಡು ನಮಗೆ ಕೊಟ್ಟಿದ್ದಾರೆ, ಇದಕ್ಕೆ ಅವರಿಗೆ ಶಬ್ಬಾಶ್​ಗಿರಿ ಹೇಳಬೇಕಿಲ್ಲ. ಈ ಬಗ್ಗೆ ಇದುವರೆಗೂ ಇಬ್ಬರೂ ಯಾವುದೇ ಹೇಳಿಕೆ ನೀಡಿಲ್ಲ. ಸಿಬಿಐ ತನಿಖೆಯಿಂದ ಅವರಿಗೆ ಭಯ ಆಗಿದೆಯೋ ಏನೋ ಗೊತ್ತಿಲ್ಲ ಎಂದು ಟೀಕಿಸಿದರು. 29 ಕೋಟಿ ದುಡ್ಡು ಹಂಚಿರುವುದಾಗಿ ಹೇಳಿದ್ದಾರೆ. ಯಾರಿಗೆ ನೀಡಿದ್ದಾರೆ ಲೀಸ್ಟ್ ನೀಡಲಿ. 850 ಕೇಸ್ ತನಿಖೆಗೆ ಸಿಐಡಿಗೆ ಹೋಗಿದೆ. ಅದರಲ್ಲಿ 28 ಕೇಸ್ ಮಾತ್ರ ತನಿಖೆ ಮಾಡಲಾಗಿದೆ. ವಿನಿವಿಂಕ್ ಶಾಸ್ತ್ರಿ ಕಾಲದಿಂದ ಹಿಡಿದು ಇಲ್ಲಿವರೆಗೂ ಏನೂ ಆಗಿಲ್ಲ.

ಚುನಾವಣೆ ಹತ್ತಿರ ಬಂದಿರುವುದರಿಂದ ಈಗ ತನಿಖೆಗೆ ನೀಡಿದ್ದಾರೆ. ಹಗರಣಕ್ಕೆ ಸಿಲುಕಿದ ಬಳಿಕ ರಾಘವೇಂದ್ರ ಬ್ಯಾಂಕ್​ನಲ್ಲಿ ಆರು ತಿಂಗಳು ಆಡಳಿತಾಧಿಕಾರಿ ಇರಲಿಲ್ಲ. ಈ ವೇಳೆ, ಹಲವು ದಾಖಲೆ ಕದಿಯಲಾಗಿದೆ. ಇದರ ಬಗ್ಗೆಯೂ ಸಿಬಿಐ ಉನ್ನತ ತನಿಖೆ ಮಾಡಬೇಕು. ಈಗಾಗಲೇ ಬ್ಯಾಂಕ್ ನಲ್ಲಿ ಡೆಪಾಸಿಟ್ ಮಾಡಿದ ಆನೇಕರು ಮೃತಪಟ್ಟಿದ್ದಾರೆ. ಆರು ತಿಂಗಳ ಒಳಗೆ ಎಲ್ಲರ ದುಡ್ಡು ಬರಬೇಕು ಎಂದು ಒತ್ತಾಯಿಸಿದರು.

ಇಲ್ಲಿ ಎಮರ್ಜೆನ್ಸಿ ಡೋರ್ ತೆಗೆದು ಹಣ ಕೊಡಿಸಿ: ’’ಸಂಸದ ತೇಜಸ್ವಿ ಸೂರ್ಯ ಹಾಗೂ ರವಿಸುಬ್ರಹ್ಮಣ್ಯ ಪ್ರಚಾರ ಪ್ರಿಯರು. ತೇಜಸ್ವಿ ಸೂರ್ಯ ಬಹಳ ಪ್ರಚಾರ ಪ್ರಿಯ. ನಿನ್ನೆ ಸಂಜೆ ಪ್ರಕರಣ ಸಿಬಿಐಗೆ ಕೊಟ್ಟ ಬಳಿಕ ಒಂದು ಹೇಳಿಕೆ ನೀಡಿಲ್ಲ' ಎಂದು ಡಾ ಶಂಕರ್​ ಗುಹಾ ಪ್ರತಿಕ್ರಿಯಿಸಿದರು.

ಮಾಜಿ ವಿಧಾನಪರಿಷತ್ ಸದಸ್ಯ ಅಶ್ವತ್ಥ ನಾರಾಯಣ ಅವರು 12 ಕೋಟಿ ರೂ. ಹಣ ಸಾಲ ಪಡೆದಿದ್ದಾರೆ. ಅದರಲ್ಲಿ 75ಲಕ್ಷ ಹಣ ಮಾತ್ರ ತೀರಿಸಿದ್ದಾರೆ. ಅವರ ಮೇಲೆ ಇಡಿ ಕೇಸ್ ಸಹ ಇದೆ. ಇನ್ನು ಶಾಸಕರು, ಸಂಸದರು ಬ್ಯಾಂಕಿನಲ್ಲಿರೋ ಹಣ ಅವರೇ ತೆಗೆದುಕೊಂಡಿದ್ದಾರೋ ಅಥವಾ ತೆಗೆದುಕೊಂಡವರನ್ನು ಕಾಪಾಡ್ತಿದ್ದಾರೋ ಗೊತ್ತಿಲ್ಲ ಎಂದು ಆರೋಪಿಸಿದ ಅವರು, 2019ರ ಎಲೆಕ್ಷನ್ ವೇಳೆ ಚರ್ಚೆ ಮಾಡಿ ಗೆದ್ದಿದ್ದರು. ಈಗ ಇದಕ್ಕೆ ತಾರ್ಕಿಕ ಅಂತ್ಯ ಸಿಗಬೇಕಿದೆ. ಹಣ ಕಳೆದುಕೊಂಡವರಿಗೆ ಹಣ ಕೊಡಿಸಬೇಕಿದೆ ಎಂದರು.

ಇದನ್ನೂ ಓದಿ:ಗುರು ರಾಘವೇಂದ್ರ ಕೋ ಆಪರೇಟಿವ್ ಅವ್ಯವಹಾರ ಪ್ರಕರಣ: ಬ್ಯಾಂಕ್ ಅಧ್ಯಕ್ಷನ ಬಂಧನ

Last Updated : Jan 18, 2023, 4:48 PM IST

ABOUT THE AUTHOR

...view details