ಕರ್ನಾಟಕ

karnataka

ETV Bharat / state

ಪೌರಕಾರ್ಮಿಕರಿಗ ಉಚಿತ ರೇಷನ್ ವಿತರಿಸಿದ ಶಾಕಂಬರಿ ನಗರ ಕಾರ್ಪೋರೇಟರ್ - ಶಾಕಂಬರಿ ನಗರ ವಾರ್ಡ್ ನಂ 169ರ ಕಾರ್ಪೋರೇಟರ್

ಕೊರೊನಾದಿಂದಾಗಿ ಬಡ ಕೂಲಿ ಕಾರ್ಮಿಕರಿಗೆ ಇನ್ನಿಲ್ಲದ ಸಮಸ್ಯೆಯುಂಟಾಗಿದೆ. ಈ ಹಿನ್ನೆಲೆ ನಗರದ ಶಾಕಂಬರಿ ನಗರ ವಾರ್ಡ್ ನಂ.169ರ ಕಾರ್ಪೋರೇಟರ್ ಮಾಲತಿ ಸೋಮಶೇಖರ್ ಸುಮಾರು 50ಕ್ಕೂ ಹೆಚ್ಚು ಪೌರ ಕಾರ್ಮಿಕರಿಗೆ ಉಚಿತವಾಗಿ ರೇಷನ್ ಹಂಚಿದ್ದಾರೆ.

Shakambari city corporator distributed free ration to civilian workers
ಪೌರ ಕಾರ್ಮಿಕರಿಗ ಉಚಿತ ರೇಷನ್ ವಿತರಿಸಿದ ಶಾಕಂಬರಿ ನಗರ ಕಾರ್ಪೋರೆಟರ್

By

Published : Apr 2, 2020, 9:23 PM IST

ಬೆಂಗಳೂರು: ಕೊರೊನಾ ವೈರಸ್ ಹರಡದಂತೆ ತಡೆಯಲು ದೇಶದಾದ್ಯಂತ ಲಾಕ್​ಡೌನ್ ನಿಯಮ ಜಾರಿ ಮಾಡಲಾಗಿದೆ. ಇದರಿಂದ ಅಸಂಘಟಿತ ವಲಯದ ಕಾರ್ಮಿಕರು ಹಾಗೂ ಬಡವರು ಆಹಾರವಿಲ್ಲದೆ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.

ಪೌರಕಾರ್ಮಿಕರಿಗ ಉಚಿತ ರೇಷನ್ ವಿತರಿಸಿದ ಶಾಕಂಬರಿ ನಗರ ಕಾರ್ಪೋರೇಟರ್

ಈ ಹಿನ್ನೆಲೆ ‌ನಗರದ ಶಾಕಂಬರಿ ನಗರ ವಾರ್ಡ್ ನಂ.169ರ ಕಾರ್ಪೋರೇಟರ್ ಮಾಲತಿ ಸೋಮಶೇಖರ್ ಸುಮಾರು 50ಕ್ಕೂ ಹೆಚ್ಚು ಪೌರಕಾರ್ಮಿಕರಿಗೆ ಉಚಿತವಾಗಿ ರೇಷನ್ ಹಂಚಿದ್ದಾರೆ. ಪ್ರತಿನಿತ್ಯ ತಮ್ಮ ಜೀವವನ್ನೇ ಪಣಕ್ಕಿಟ್ಟು ನಗರವನ್ನು ಸ್ವಚ್ಛ ಮಾಡುತ್ತಿರುವ ಪೌರಕಾರ್ಮಿಕರಿಗೆ ಅಕ್ಕಿ, ಎಣ್ಣೆ, ಬೇಳೆಯನ್ನು ವಿತರಿಸುವ ಮೂಲಕ ಮಾನವೀಯತೆ ಮೆರೆದಿದ್ದಾರೆ. ಅಲ್ಲದೆ ಇದೇ ವೇಳೆ ಪ್ರತಿಯೊಬ್ಬರ ನಡುವೆ ಅಂತರ ಕಾಯ್ದುಕೊಂಡು ಸುರಕ್ಷತೆಯಿಂದ ಕೆಲಸ ಮಾಡುವಂತೆ ಪೌರಕಾರ್ಮಿಕರಿಗೆ ಹೇಳಿದ್ದಾರೆ.

ABOUT THE AUTHOR

...view details