ಬೆಂಗಳೂರು: ಅಪರಿಚಿತ ವ್ಯಕ್ತಿಯೊಬ್ಬ ಮಹಿಳಾ ಪೊಲೀಸ್ ಸಬ್ ಇನ್ಸ್ಪೆಕ್ಟರ್ಗೆ ಲೈಂಗಿಕ ಕಿರುಕುಳ ನೀಡಿರುವ ಪ್ರಕರಣ ದಾಖಲಾಗಿದೆ.
ರಾಜಧಾನಿಯ ಪೊಲೀಸ್ ಠಾಣೆಯಲ್ಲಿ ಪಿಎಸ್ಐ ಆಗಿ ಕಾರ್ಯನಿರ್ವಹಿಸುತ್ತಿರುವ ಸೌಮ್ಯ (ಹೆಸರು ಬದಲಿಸಲಾಗಿದೆ) ಎಂಬುವವರಿಗೆ ಜ.7 ರ ರಾತ್ರಿ ಅಪರಿಚಿತ ವ್ಯಕ್ತಿಯೊಬ್ಬ ವಾಟ್ಸ್ಆ್ಯಪ್ ಮೂಲಕ ಅಶ್ಲೀಲ ಚಿತ್ರಗಳನ್ನು ಕಳುಹಿಸಿ, ಸೌಮ್ಯ ಅವರ ಮೊಬೈಲ್ ಗೆ ಕರೆ ಮಾಡಿ ಲಾಡ್ಜ್ ಗೆ ಬರ್ತಿರಾ .. ಹಣ ಎಷ್ಟಾದರೂ ಪರವಾಗಿಲ್ಲ ಎಂದು ಆಹ್ವಾನಿಸಿದ್ದಾನೆ. ಇದರಿಂದ ಅಕ್ರೋಶಗೊಂಡು ನಾನು ಯಾರು ಗೊತ್ತಾ ಎಂದು ಸೌಮ್ಯ ಪ್ರತಿರೋಧ ವ್ಯಕ್ತಪಡಿಸಿದ್ದಾರೆ. ಇದಕ್ಕೆ ಪ್ರತಿಕಿಯಿಸಿದ ಆ ವ್ಯಕ್ತಿ ನೀವೂ ಯಾರು ಅಂತಾ ನನಗೆ ಗೊತ್ತು.. ನಿಮಗೆ ಗಂಡ ಇಲ್ಲ ಎಂಬುವುದೂ ನನಗೆ ಗೊತ್ತು.. ನಿಮ್ಮ ಬಗ್ಗೆ ಹೋಮ್ ಗಾರ್ಡ್ ಪುಟ್ಟಮ್ಮ ಎಲ್ಲವನ್ನೂ ಹೇಳಿದ್ದಾಳೆ.. ನಾನು ಕರೆದಲ್ಲಿ ಬರದೆ ಹೋದರೆ ಮಾನ ಹರಾಜು ಹಾಕುವೆ ಎಂದು ಧಮಕಿ ಹಾಕಿ ಆಶ್ಲೀಲ ಚಿತ್ರಗಳನ್ನು ಕಳುಹಿಸಿದ್ದಾನೆ.