ಬೆಂಗಳೂರು: ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯವೆಸಗಿದ್ದ ಎನ್ನಲಾದ ಆರೋಪಿಯನ್ನು ತಲಘಟ್ಟಪುರ ಪೊಲೀಸರು ಬಂಧಿಸಿದ್ದಾರೆ. ಬಂಧಿತ ಆರೋಪಿಯನ್ನು ವೇಣುಗೋಪಾಲ್ ಎಂದು ಗುರುತಿಸಲಾಗಿದೆ.
ತಲಘಟ್ಟಪುರದಲ್ಲಿ ಅಪ್ರಾಪ್ತೆ ಕುಟುಂಬ ವಾಸವಾಗಿದ್ದು, ಜೀವನಕ್ಕಾಗಿ ಪೋಷಕರು ಅಲ್ಲಿ ಕೂಲಿ ಕೆಲಸ ಮಾಡುತ್ತಿದ್ದರು. ಸಂಬಂಧಿಕ ಆಗಿದ್ದ ಆರೋಪಿ ನಿನ್ನೆ ರಾತ್ರಿ ಬಾಲಕಿಯನ್ನು ನಿರ್ಜನ ಪ್ರದೇಶಕ್ಕೆ ಕರೆದೊಯ್ದಿದ್ದು, ಅತ್ಯಾಚಾರ ಎಸಗಿದ್ದಾನೆ ಎಂದು ಸಂತ್ರಸ್ತೆ ಕುಟುಂಬ ಆರೋಪಿಸಿದೆ.
ಪರಿಶೀಲನೆ:ತಲಘಟ್ಟಪುರದಲ್ಲಿ ನಿನ್ನೆ ರಾತ್ರಿ ಹೊಯ್ಸಳ ಪೊಲೀಸರು ಬೀಟ್ನಲ್ಲಿದ್ದರು. ಈ ವೇಳೆ ಅನುಮಾನಾಸ್ಪದವಾಗಿ ಹುಡುಗ-ಹುಡುಗಿ ಓಡಾಡುತ್ತಿರುವುದನ್ನು ಗಮನಿಸಿದ್ದಾರೆ. ರಾತ್ರಿ ಮೂರು ನಾಲ್ಕು ಗಂಟೆ ಸಂದರ್ಭದಲ್ಲಿ ನಿರ್ಜನ ಪ್ರದೇಶದಲ್ಲಿದ್ದ ಅವರನ್ನು ವಿಚಾರಿಸಿದ ಪೊಲೀಸರಿಗೆ ಸಾಕಷ್ಟು ಅನುಮಾನ ಬಂದಿತ್ತು.
ಹೀಗಾಗಿ ಅವರನ್ನು ಪೊಲೀಸ್ ಠಾಣೆಗೆ ಕರೆತಂದು ವಿಚಾರಣೆ ನಡೆಸಿದ್ದು, ಬಾಲಕಿ ಆರೋಪಿಯ ಸಂಬಂಧಿ ಎಂದು ಹೇಳಲಾಗುತ್ತಿದೆ. ಅದರ ಬಗ್ಗೆ ಪರಿಶೀಲನೆ ನಡೆಸಲಾಗ್ತಿದೆ. ಈ ಬಗ್ಗೆ ತಲಘಟ್ಟಪುರ ಪೊಲೀಸ್ ಠಾಣೆ ದೂರು ಕೂಡ ದಾಖಲಾಗಿದೆ ಎಂದು ದಕ್ಷಿಣ ವಿಭಾಗ ಡಿಸಿಪಿ ಕೃಷ್ಣಕಾಂತ್ ತಿಳಿಸಿದ್ದಾರೆ.
ಓದಿ:Kalburgi Rape and murder Case: ಅಶ್ಲೀಲ ವಿಡಿಯೋಗಳನ್ನು ನೋಡಿ ಪ್ರಚೋದನೆಗೊಂಡು ಕೃತ್ಯ!