ಕರ್ನಾಟಕ

karnataka

ETV Bharat / state

ಬೆಂಗಳೂರು ಗಲಭೆ: ತೀವ್ರವಾಗಿ  ಖಂಡಿಸಿದ ಖಂಡ್ರೆ, ದತ್ತ - ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ

ನಿನ್ನೆ ನಡೆದ ಘಟನೆಯಲ್ಲಿ ಸಾಕಷ್ಟು ದೊಡ್ಡ ಮಟ್ಟದ ನಷ್ಟವಾಗಿರುವುದು ಕೇಳಿ ಬಂದಿದೆ. ಇಂತಹ ಘಟನೆಗಳು ನಡೆದ ಸಂದರ್ಭಗಳಲ್ಲಿ ಆಯೋಗವನ್ನು ರಚಿಸಿ ತನಿಖೆ ಮಾಡುವ ಕಾರ್ಯ ಆಗಿದೆ. ಘಟನೆಯ ತನಿಖೆಯನ್ನು ಸರ್ಕಾರ ಸಮಗ್ರ ಆಯಾಮಗಳಲ್ಲಿ ನಡೆಸುವ ಕಾರ್ಯ ಮಾಡಬೇಕು ಎಂದು ವೈಎಸ್​​ವಿ ದತ್ತ ಒತ್ತಾಯಿಸಿದ್ದಾರೆ.

Former legislator YSV Datta
ಮಾಜಿ ಶಾಸಕ ವೈಎಸ್​​ವಿ ದತ್ತ

By

Published : Aug 12, 2020, 4:06 PM IST

ಬೆಂಗಳೂರು: ಶಾಸಕ ಅಖಂಡ ಶ್ರೀನಿವಾಸ್ ​ಮೂರ್ತಿ ಅವರ ಮನೆ ಮೇಲಿನ ದಾಳಿ ಖಂಡನೀಯ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ಅಭಿಪ್ರಾಯಪಟ್ಟಿದ್ದಾರೆ.

ವಿಧಾನಸೌಧದ ಮುಂಭಾಗ ಸುದ್ದಿಗಾರರ ಜೊತೆ ಮಾತನಾಡಿ, ಶಾಂತಿ ಕಾಪಾಡಲು ಎಲ್ಲರೂ ಮುಂದಾಗಬೇಕು. ಕಾನೂನು ಕೈಗೆತ್ತಿಕೊಳ್ಳಬಾರದು. ಕಾಂಗ್ರೆಸ್ ಯಾವತ್ತೂ ಶಾಂತಿಯ ಪರವಾಗಿದೆ. ನಾವು ಮೌನವಾಗಿಲ್ಲ. ಶಾಸಕನ ಮನೆ ಮೇಲಿನ ದಾಳಿ‌ ಸಹಿಸಲ್ಲ. ಶಾಂತಿ ನೆಲೆಸಲು ರಾಜ್ಯ ಸರ್ಕಾರ ಅಗತ್ಯ ಕ್ರಮ ತೆಗೆದುಕೊಳ್ಳಬೇಕು ಎಂದು ಹೇಳಿದರು.

ಮಾಜಿ ಶಾಸಕ ವೈಎಸ್​​ವಿ ದತ್ತ

ಮಾಜಿ ಶಾಸಕ ವೈಎಸ್​​ವಿ ದತ್ತ ಮಾತನಾಡಿ, ನಿನ್ನೆ ತಡರಾತ್ರಿ ನಗರದಲ್ಲಿ ನಡೆದಂತಹ ಗಲಭೆ ನಾಗರಿಕ ಸಮಾಜಕ್ಕೆ ಶೋಭೆ ತರುವಂತದ್ದಲ್ಲ. ಧರ್ಮ-ಧರ್ಮಗಳ ನಡುವೆ ಅಪನಂಬಿಕೆ ಹಾಗೂ ಅನುಮಾನವನ್ನು ಮೂಡಿಸುವಂತಹ ವ್ಯಕ್ತಿಗಳು, ಶಕ್ತಿಗಳು ಇರುವವರೆಗೂ ಇಂತಹ ಸನ್ನಿವೇಶಗಳು ಸೃಷ್ಟಿಯಾಗುತ್ತಿರುತ್ತದೆ. ಮನುಷ್ಯತ್ವ ಹಾಗೂ ಮಾನವೀಯತೆ ಮರೆತು ಧರ್ಮಕ್ಕೆ ಜೋತು ಬೀಳುವಂತಹ ಅವರು ಯಾವುದೇ ಧರ್ಮದವರಾಗಲಿ, ಧರ್ಮದ ಮೂಲಭೂತವಾದಿಗಳ ಆಗಿರಲಿ, ಇದು ಶೋಭೆ ತರುವಂತಹ ಕಾರ್ಯವಲ್ಲ ಎಂದರು.

ವೈಎಸ್​​ವಿ ದತ್ತ ಮತ್ತು ಈಶ್ವರ ಖಂಡ್ರೆ ಮಾತು

ಬೆಂಗಳೂರಿನ ಜನ ಸದಾ ಶಾಂತಿಪ್ರಿಯರು. ಇಂಥದ್ದೊಂದು ಘಟನೆ ನಡೆದಿರುವುದು ಖಂಡನೀಯ. ಯಾರೇ ಕೃತ್ಯ ಎಸಗಿದ್ದರೂ ಸರ್ಕಾರ ಅಂತವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. ಘಟನೆಗೆ ಕಾರಣರಾದ ತಪ್ಪಿತಸ್ಥರಿಗೆ ಸೂಕ್ತ ಶಿಕ್ಷೆ ಆಗಬೇಕು. ಘಟನೆಯಲ್ಲಿ ಸಾಕಷ್ಟು ದೊಡ್ಡ ಮಟ್ಟದ ನಷ್ಟವಾಗಿರುವುದು ಕೇಳಿ ಬಂದಿದೆ. ಇಂತಹ ಘಟನೆಗಳು ನಡೆದ ಸಂದರ್ಭಗಳಲ್ಲಿ ಆಯೋಗವನ್ನು ರಚಿಸಿ ತನಿಖೆ ಮಾಡುವ ಕಾರ್ಯ ಆಗಿದೆ. ಘಟನೆಯ ತನಿಖೆಯನ್ನು ಸರ್ಕಾರ ಸಮಗ್ರ ಆಯಾಮಗಳಲ್ಲಿ ನಡೆಸುವ ಕಾರ್ಯ ಮಾಡಬೇಕು ಎಂದು ಒತ್ತಾಯಿಸಿದ್ದಾರೆ.

ABOUT THE AUTHOR

...view details