ಕರ್ನಾಟಕ

karnataka

ETV Bharat / state

ಶ್ವಾಸಕೋಶ ಸಮಸ್ಯೆಗೆ ಶಸ್ತ್ರಚಿಕಿತ್ಸೆ ಇಲ್ಲದೇ ಪರಿಹಾರ; ದೇಶದಲ್ಲಿ‌ ಹೈದರಾಬಾದ್ ಬಳಿಕ ಬೆಂಗಳೂರಿಗೆ ಪರಿಚಯ - ಡಾ ಗೋವಿಂದಯ್ಯ ಯತೀಶ್

ಬೆಂಗಳೂರಿನ ಅಪೋಲೋ ಆಸ್ಪತ್ರೆಯಲ್ಲಿ ಅಸ್ತಮಾ ಸೇರಿದಂತೆ ವಿವಿಧ ಉಸಿರಾಟದ ಸಮಸ್ಯೆ ಹೊಂದಿರುವ ನಾಗರಿಕರಿಗೆ ಪರಿಹಾರ ಕಲ್ಪಿಸುವ ನಿಟ್ಟಿನಲ್ಲಿ ವಿನೂತನ ಚಿಕಿತ್ಸಾ ವಿಧಾನವನ್ನು ಆರಂಭಿಸಲಾಗಿದೆ.

ಅಪೋಲೋ ಆಸ್ಪತ್ರೆ
ಅಪೋಲೋ ಆಸ್ಪತ್ರೆ

By

Published : Sep 27, 2022, 8:11 PM IST

Updated : Sep 27, 2022, 9:23 PM IST

ಬೆಂಗಳೂರು: ಅಸ್ತಮಾ ಸೇರಿದಂತೆ ವಿವಿಧ ಉಸಿರಾಟದ ಸಮಸ್ಯೆ ಹೊಂದಿರುವ ನಾಗರಿಕರಿಗೆ ಪರಿಹಾರ ಕಲ್ಪಿಸುವ ವಿನೂತನ ಚಿಕಿತ್ಸಾ ವಿಧಾನವನ್ನು ಅಪೋಲೋ ಆಸ್ಪತ್ರೆ ಬೆಂಗಳೂರಿನಲ್ಲಿ ಆರಂಭಿಸಿದೆ.

ಉಸಿರಾಟದ ಸಮಸ್ಯೆ ಹೊಂದಿರುವವರಿಗೆ ಪರಿಹಾರ ಒದಗಿಸುವ ನಿಟ್ಟಿನಲ್ಲಿ ದೇಶದಲ್ಲೇ ಹೈದರಾಬಾದ್ ನಂತರ ಕರ್ನಾಟಕದಲ್ಲಿ ಆರಂಭವಾಗುತ್ತಿದ್ದು, ಉಸಿರಾಡಲು ತುಂಬಾ ಸಮಸ್ಯೆ ಅನುಭವಿಸುತ್ತಿರುವವರಿಗಾಗಿ ಸಿವಿಯರ್ ಏರ್ ಕ್ಲಿನಿಕ್ ಆರಂಭಿಸಿದೆ. ಈ ಚಿಕಿತ್ಸೆ ಮೂಲಕ ಉಸಿರಾಟವನ್ನು ಸುಗಮವಾಗಿಸುವ ಕಾರ್ಯಕ್ಕೆ ಅವಕಾಶ ಮಾಡಿಕೊಡಲಾಗುತ್ತದೆ. ಕೋವಿಡ್ ನಂತರದ ದಿನಗಳಲ್ಲಿ ಸಾಕಷ್ಟು ಮಂದಿ ಉಸಿರಾಟದ ಹಾಗೂ ಶ್ವಾಸಕೋಶದ ಸೋಂಕಿನಿಂದ ಬಳಲುತ್ತಿದ್ದು, ಇದಕ್ಕೊಂದು ಪರಿಹಾರ ಹುಡುಕುವ ಕಾರ್ಯ ಆಗಿದೆ.

ಅಪೋಲೋ ಆಸ್ಪತ್ರೆಯ ಮುಖ್ಯಸ್ಥ ಡಾ ಗೋವಿಂದಯ್ಯ ಯತೀಶ್ ಅವರು ಮಾತನಾಡಿದರು

ಸಿಒಪಿಡಿಗೆ ಈಗ ಹೊಸ ಚಿಕಿತ್ಸಾ ಪದ್ಧತಿ: ಅಸ್ತಮಾ, ಸಿಒಪಿಡಿ ಸಮಸ್ಯೆ ಸೇರಿದಂತೆ ವಿವಿಧ ರೀತಿಯ ಸಮಸ್ಯೆಗಳಿಗೆ ಒಂದೇ ಸೂರಿನ ಅಡಿ ಚಿಕಿತ್ಸೆ ನೀಡುವ ವ್ಯವಸ್ಥೆ ಇದಾಗಿದೆ. ಅಸ್ತಮಾ ಹಾಗೂ ಸಿಒಪಿಡಿ ಸಮಸ್ಯೆ ಉಲ್ಬಣಗೊಂಡಿರುವ ರೋಗಿಗಳಿಗೆ ಇದು ರಾಮಬಾಣವಾಗಿದೆ. ಉಸಿರಾಟದ ಸಮಸ್ಯೆಗೆ ಔಷಧ ನೀಡುವುದು ಒಂದು ಪರಿಹಾರ ಕ್ರಮವಾದರೆ ಚಿಕಿತ್ಸೆ ಮತ್ತೊಂದು ವಿಧದ ಕ್ರಮವಾಗಿದೆ. ಸಿಒಪಿಡಿಗೆ ಈಗ ಹೊಸ ಚಿಕಿತ್ಸಾ ಪದ್ಧತಿ ಬಂದಿದೆ. ಇಂಟರ್ವೇರ್ ಫಾರ್ ಥೆರಪಿ ಹೆಸರಿನಲ್ಲಿ ಇದನ್ನು ಆರಂಭಿಸಲಾಗುತ್ತಿದೆ.

ಅಪೋಲೋ ಆಸ್ಪತ್ರೆ ನೂತನವಾಗಿ ಆರಂಭಿಸಿರುವ ಚಿಕಿತ್ಸಾ ವಿಧಾನದ ಕುರಿತು ಮಾಹಿತಿ ನೀಡಿದ ಅಪೋಲೊ ಆಸ್ಪತ್ರೆ ಜಯನಗರದ ಮುಖ್ಯಸ್ಥ ಡಾ ಗೋವಿಂದಯ್ಯ ಯತೀಶ್ ಅಸ್ತಮಾ ಹಾಗೂ ಸಿಒಪಿಡಿ ಸಮಸ್ಯೆ ಇರುವವರಲ್ಲಿ ಶ್ವಾಸಕೋಶ ಊದಿಕೊಳ್ಳುತ್ತದೆ. ಜಾಸ್ತಿ ಊದಿಕೊಂಡಾಗ ಶ್ವಾಸಕೋಶದ ಕೆಲ ಸಣ್ಣ ಪುಟ್ಟ ಅಂಗಾಂಗಗಳು ಸಂಕುಚಿತಗೊಳ್ಳುತ್ತವೆ. ಆಗ ಉಸಿರಾಟಕ್ಕೆ ಇನ್ನಷ್ಟು ಸಮಸ್ಯೆ ಎದುರಾಗುತ್ತದೆ.

ಬೆಂಗಳೂರು ಸಹ ಸೇರ್ಪಡೆ: ಹಿಂದೆಲ್ಲಾ ಶಸ್ತ್ರ ಚಿಕಿತ್ಸೆ ನಡೆಸಿ ಊದಿಕೊಂಡಿರುವ ಬಲೂನ್​ ಅನ್ನು ತೆಗೆಯುತ್ತಿದ್ದರು. ಆದರೆ, ಈ ನೂತನ ಚಿಕಿತ್ಸಾ ವಿಧಾನದಲ್ಲಿ ನಾವು ಶಸ್ತ್ರಚಿಕಿತ್ಸೆ ನಡೆಸಿ ಬಲೂನ್​ ಅನ್ನು ತೆಗೆಯುವ ಬದಲು ಬ್ರಾಂಕೋಸ್ಕೋಪ್ ಮೂಲಕ ಅತ್ಯಂತ ತೆಳುವಾದ ಶ್ವಾಸಕೋಶದ ಒಳಭಾಗವನ್ನು ಸುಡುವ ಕಾರ್ಯ ಮಾಡಲಾಗುತ್ತದೆ.

ಆಗ ಊದಿಕೊಂಡಿರುವುದು ಸಂಕುಚಿತವಾದಾಗ ಉಳಿದ ಅಂಗಾಂಗಗಳ ಕಾರ್ಯನಿರ್ವಹಣೆ ಸಮರ್ಪಕವಾಗಿ ಆಗಿ ಸಮಸ್ಯೆ ನಿವಾರಣೆಯಾಗುತ್ತದೆ. ಈ ಒಂದು ವಿಧಾನ ಇದುವರೆಗೂ ಹೈದರಾಬಾದ್​ನಲ್ಲಿ ಮಾತ್ರ ಲಭ್ಯವಿತ್ತು. ಇದೀಗ ದೇಶದ ಎರಡನೇ ನಗರವಾಗಿ ಬೆಂಗಳೂರು ಸಹ ಸೇರ್ಪಡೆಯಾಗಿದೆ ಎಂದರು.

ಬೆಂಗಳೂರಿನ ಅಪೋಲೋ ಹಾಸ್ಪಿಟಲ್‌ನ ಪಲ್ಮನಾಲಜಿ ಎಂಡ್ ಕ್ರಿಟಿಕಲ್ ಕೇರ್ ವಿಭಾಗದ ಮುಖ್ಯಸ್ಥರಾದ ಡಾ. ರವೀಂದ್ರ ಎಂ. ಮೆಹ್ತಾ ಮಾತನಾಡಿ, ಅಸ್ತಮಾ ಸಮಸ್ಯೆಯಿಂದ ಬಳಲುತ್ತಿರುವವರು ಈ ಎರಡು ನೂತನ ತಂತ್ರಜ್ಞಾನದ ಸಹಕಾರದೊಂದಿಗೆ ಅತ್ಯಂತ ಪರಿಣಾಮಕಾರಿಯಾಗಿ ಚಿಕಿತ್ಸೆ ಪಡೆಯಬಹುದು. ಇಲ್ಲಿ ಯಾವುದೇ ಶಸ್ತ್ರ ಚಿಕಿತ್ಸೆ ನಡೆಯದ ಹಿನ್ನೆಲೆ ರೋಗಿ ಆಸ್ಪತ್ರೆ ವಾಸ ಸಹ ಕಡಿಮೆ ಇರುತ್ತದೆ. ವೆಚ್ಚ ಕೊಂಚ ಅಧಿಕ ಎನಿಸಿದರೂ, ಶೇಕಡ 70ರಿಂದ 80ರಷ್ಟು ಯಶಸ್ವಿ ಫಲಿತಾಂಶ ಇದರಿಂದ ನಿರೀಕ್ಷಿಸಬಹುದಾಗಿದೆ.

ಚಿಕಿತ್ಸೆ ವೆಚ್ಚ ಕಡಿಮೆ:ಅಪಾಯ ಸಾಧ್ಯತೆ ಬಹಳ ಕಡಿಮೆ ಇದ್ದು, ಚಿಕಿತ್ಸೆಗೆ ಒಳಗಾದವರು ಒಂದೇ ದಿನದ ಬಳಿಕ ಮನೆಗೆ ತೆರಳಿ ನಂತರದ ಒಂದೆರಡು ದಿನ ವಿಶ್ರಾಂತಿ ಪಡೆದರೂ ಸಾಕು. ಈ ತಂತ್ರಜ್ಞಾನ ಯುರೋಪ್ ಮತ್ತು ಅಮೆರಿಕಾದಂತಹ ರಾಷ್ಟ್ರಗಳಲ್ಲಿ ಇದುವರೆಗೂ ಲಭ್ಯವಿತ್ತು. ಇದೀಗ ಮಹಾನಗರದಲ್ಲೂ ಈ ಸೇವೆ ಸಿಗಲಿದೆ. ಬೆಂಗಳೂರು ತುಂಬಾ ತೇವಾಂಶದಿಂದ ಕೂಡಿರುವ ನಗರವಾಗಿದ್ದು, ಇಲ್ಲಿ ಅಸ್ತಮಾ ಸೇರಿದಂತೆ ಉಸಿರಾಟದ ಸಮಸ್ಯೆಯಿಂದ ಬಳಲುತ್ತಿರುವವರು ಹೆಚ್ಚು. ತಂತ್ರಜ್ಞಾನಕ್ಕೆ ಹೋಲಿಸಿದರೆ ಚಿಕಿತ್ಸೆ ವೆಚ್ಚ ಅಷ್ಟೇನೂ ದುಬಾರಿ ಅಲ್ಲ ಎಂದು ಹೇಳಿದರು.

ಓದಿ:ವಿಜ್ಞಾನ ಅಧ್ಯಾತ್ಮಿಕತೆ ಒಂದೇ ನಾಣ್ಯದ ಎರಡು ಮುಖ.. ಅಧ್ಯಾತ್ಮಿಕತೆ ವಿಜ್ಞಾನಕ್ಕೆ ಸ್ಪೂರ್ತಿ ಎಂದ ಸಿಎಂ

Last Updated : Sep 27, 2022, 9:23 PM IST

ABOUT THE AUTHOR

...view details