ಬೆಂಗಳೂರು : ಪೋಷಕರಿಗೆ ವಿಡಿಯೋ ಸಂದೇಶ ಕಳುಹಿಸಿ ಅಪಾರ್ಟ್ಮೆಂಟ್ನ 23ನೇ ಮಹಡಿಯಿಂದ ಜಿಗಿದು ವಿದ್ಯಾರ್ಥಿಯೊಬ್ಬ ಆತ್ಮಹತ್ಯೆ ಮಾಡಿಕೊಂಡ ಘಟನೆ ಸೋಮವಾರ ಕೋಣನಕುಂಟೆ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಅಂಜನ್ (17) ಮೃತ ವಿದ್ಯಾರ್ಥಿ.
ಬೆಂಗಳೂರಿನಲ್ಲಿ 23ನೇ ಮಹಡಿಯಿಂದ ಜಿಗಿದು PUC ವಿದ್ಯಾರ್ಥಿ ಆತ್ಮಹತ್ಯೆ - ಬೆಂಗಳೂರಿನಲ್ಲಿ 23ನೇ ಮಹಡಿಯಿಂದ ಜಿಗಿದು ವಿದ್ಯಾರ್ಥಿ ಆತ್ಮಹತ್ಯೆ
ಖಾಸಗಿ ಕಾಲೇಜಿನಲ್ಲಿ ದ್ವಿತೀಯ ಪಿಯು ವ್ಯಾಸಂಗ ಮಾಡುತ್ತಿದ್ದ ವಿದ್ಯಾರ್ಥಿಯೊಬ್ಬ ಕೋಣನಕುಂಟೆಯ ಫಾಲ್ಕನ್ ಸಿಟಿ ಅಪಾರ್ಟ್ಮೆಂಟ್ನ 23ನೇ ಮಹಡಿಯಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
![ಬೆಂಗಳೂರಿನಲ್ಲಿ 23ನೇ ಮಹಡಿಯಿಂದ ಜಿಗಿದು PUC ವಿದ್ಯಾರ್ಥಿ ಆತ್ಮಹತ್ಯೆ ವಿದ್ಯಾರ್ಥಿ ಆತ್ಮಹತ್ಯೆ](https://etvbharatimages.akamaized.net/etvbharat/prod-images/768-512-14739783-thumbnail-3x2-mdmdm.jpg)
ವಿದ್ಯಾರ್ಥಿ ಆತ್ಮಹತ್ಯೆ
ಖಾಸಗಿ ಕಾಲೇಜಿನಲ್ಲಿ ದ್ವಿತೀಯ ಪಿಯು ವ್ಯಾಸಂಗ ಮಾಡುತ್ತಿದ್ದ ಅಂಜನ್, ಕೋಣನಕುಂಟೆಯ ಫಾಲ್ಕನ್ ಸಿಟಿ ಅಪಾರ್ಟ್ಮೆಂಟ್ನ 23ನೇ ಮಹಡಿಯಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಆತ್ಮಹತ್ಯೆಗೆ ಮುನ್ನ ಅಂಜನ್ ಸೆಲ್ಫಿ ವಿಡಿಯೋ ಚಿತ್ರೀಕರಿಸಿ ತಂದೆ ಹಾಗೂ ಇತರರಿಗೆ ಕಳುಹಿಸಿದ್ದ.
ವಿಡಿಯೋದಲ್ಲಿ ಕ್ಷಮಿಸಿ ಅಪ್ಪ, ನಾನು ನಿಮ್ಮನ್ನೆಲ್ಲಾ ಬಿಟ್ಟು ಹೋಗುತ್ತಿದ್ದೇನೆ’ ಎಂಬುದಾಗಿ ಹೇಳಿದ್ದ ಎನ್ನಲಾಗ್ತಿದೆ. ಆದ್ರೆ ಸಂಬಂಧಿಕರು ಸ್ಥಳಕ್ಕೆ ಬರುವಷ್ಟರಲ್ಲೇ ಆತ್ಮಹತ್ಯೆಗೆ ಶರಣಾಗಿದ್ದು, ನಿಖರ ಕಾರಣವೇನು ಎಂಬುದು ತನಿಖೆಯಿಂದ ತಿಳಿಯಬೇಕಿದೆ.