ಬೆಂಗಳೂರು: ನಗರದಲ್ಲಿ ಹೊರರಾಜ್ಯದ ಸಂಪರ್ಕದಿಂದ ಮೂವರಿಗೆ ಹಾಗೂ ಪಾದರಾಯನಪುರದ ನಾಲ್ವರಿಗೆ ಸೇರಿ ಒಟ್ಟು ಏಳು ಹೊಸ ಕೊರೊನಾ ಪ್ರಕರಣಗಳು ದೃಢಪಟ್ಟಿವೆ.
P-1495 ಇವರಿಗೆ 60 ವರ್ಷ ವಯಸ್ಸಾಗಿದ್ದು, ಆಂಧ್ರದ ಹಿಂದೂಪುರಂ ನಿವಾಸಿಯಾಗಿದ್ದಾರೆ. ಚಿಕಿತ್ಸೆಗಾಗಿ ಕರ್ನೂಲ್ಗೆ ಕೂಡಾ ಹೋಗಿದ್ದರು. ಆದರೆ, ಯಲಹಂಕ ನ್ಯೂ ಟೌನ್ನಲ್ಲಿ ದಾಖಲಾಗಲು ತಿಳಿಸಿದ್ದರಿಂದ ನಿನ್ನೆ ಬೆಳಗ್ಗೆ ಯಲಹಂಕದ ನವಚೇತನ ಆಸ್ಪತ್ರೆಯಲ್ಲಿ ದಾಖಲಾದರು. ಬಿ.ಪಿ, ಶುಗರ್, ನ್ಯೂಮೋನಿಯಾ ಸೇರಿದಂತೆ ಹಲವು ಕಾಯಿಲೆಗಳಿಂದ ಬಳಲುತ್ತಿದ್ದ ಈತನಿಗೆ ಕೊರೊನಾ ಪರೀಕ್ಷೆ ಕೂಡಾ ನಡೆಸಿದ್ದಾರೆ. ಈ ವೇಳೆ, ಕೋವಿಡ್-19 ಇರುವುದು ದೃಢಪಟ್ಟಿದೆ. ಕೂಡಲೇ ಕೋವಿಡ್ ಚಿಕಿತ್ಸೆಗೆ ಆಸ್ಪತ್ರೆಗೆ ದಾಖಲಿಸಲಾಗಿದ್ದು, ನವಚೇತನ ಆಸ್ಪತ್ರೆಯ 10 ಜನರನ್ನು ಕ್ವಾರಂಟೈನ್ ಮಾಡಲಾಗಿದೆ ಎಂದು ಯಲಹಂಕ ವಿಭಾಗದ ಆರೋಗ್ಯ ಅಧಿಕಾರಿ ಡಾ.ರಮೇಶ್ ತಿಳಿಸಿದ್ದಾರೆ.