ಕರ್ನಾಟಕ

karnataka

ETV Bharat / state

ರಾಜ್ಯಕ್ಕೆ ಬರಲು, ಹೊರಹೋಗಲು 'ಸೇವಾಸಿಂಧು': ಈ ವೆಬ್​ಸೈಟ್​ನಲ್ಲಿ ನೋಂದಣಿ​ ಕಡ್ಡಾಯ! - ಸಚಿವ ಸುರೇಶ್​ ಕುಮಾರ್​

ವಿವಿಧ ರಾಜ್ಯಗಳಲ್ಲಿ ಉಳಿದುಕೊಂಡಿರುವ ವಲಸೆ ಕಾರ್ಮಿಕರು ತಮ್ಮ ತವರು ರಾಜ್ಯಗಳಿಗೆ ತೆರಳಲು ಕೇಂದ್ರ ಸರ್ಕಾರ ಈಗಾಗಲೇ ಅನುಮತಿ ನೀಡಿದ್ದು, ಅದಕ್ಕಾಗಿ ಕೆಲವೊಂದು ನಿಮಯ ಪಾಲನೆ ಮಾಡಬೇಕಾದ ಅನಿವಾರ್ಯತೆ ನಿರ್ಮಾಣಗೊಂಡಿದೆ.

Minister Suresh Kumar
Minister Suresh Kumar

By

Published : May 2, 2020, 6:13 PM IST

ಬೆಂಗಳೂರು: ರಾಜ್ಯದಲ್ಲಿರುವ ವಲಸೆ ಕಾರ್ಮಿಕರು ಹೊರಹೋಗಲು ಹಾಗೂ ಬೇರೆ ರಾಜ್ಯಗಳಲ್ಲಿರುವ ವಲಸೆ ಕಾರ್ಮಿಕರು ಕರ್ನಾಟಕಕ್ಕೆ ಬರಲು ಸೇವಾ ಸಿಂಧು ವೆಬ್​ಸೈಟ್​​ನಲ್ಲಿ ರಿಜಿಸ್ಟರ್​ ಮಾಡಿಕೊಳ್ಳುವುದು ಕಡ್ಡಾಯ ಎಂದು ರಾಜ್ಯ ಹಣಕಾಸು ಸಚಿವ ಸುರೇಶ್​ ಕುಮಾರ್​ ಹೇಳಿದ್ದಾರೆ.

ರಾಜ್ಯ ಸರ್ಕಾರದ ಸೇವಾ ಸಿಂಧು ವೆಬ್​ಸೈಟ್​ ಮೂಲಕ ವಲಸಿಗರು ಯಾವ ಸ್ಥಳಕ್ಕೆ ತೆರಳಬೇಕು ಎಂಬುದರ ಮಾಹಿತಿ ಭರ್ತಿ ಮಾಡುವುದರಿಂದ ಅವರು ಯಾವ ಸ್ಥಳಕ್ಕೆ ತೆರಳಬೇಕು ಎಂಬುದರ ಮಾಹಿತಿ ಸುಲಭವಾಗಿ ತಿಳಿದುಕೊಳ್ಳಬಹುದಾಗಿದೆ.

ವಲಸೆ ಕಾರ್ಮಿಕರು, ವಿದ್ಯಾರ್ಥಿಗಳು ಹಾಗೂ ಪ್ರವಾಸಿಗರು ತಾವು ಎಲ್ಲಿಗೆ ಹೋಗಬೇಕು ಹಾಗೂ ಎಲ್ಲಿಂದ ಬರಬೇಕು ಎಂಬ ಮಾಹಿತಿ ಭರ್ತಿ ಮಾಡುವುದರಿಂದ ಆ ಊರುಗಳಿಗೆ ತೆರಳಲು ವ್ಯವಸ್ಥೆ ಮಾಡುವುದು ಸರ್ಕಾರಕ್ಕೆ ಸುಲಭವಾಗಲಿದೆ ಎಂದು ಅವರು ತಿಳಿಸಿದ್ದಾರೆ.

ABOUT THE AUTHOR

...view details