ಕರ್ನಾಟಕ

karnataka

ETV Bharat / state

ಸಿಲಿಕಾನ್​​ ಸಿಟಿಯಲ್ಲಿ ಸರಣಿ ಸರಗಳ್ಳತನ‌: ಏಳು ಮಂದಿ ಕಳ್ಳರ ಬಂಧನ - chain snatching

ಮಹಿಳೆಯರ ಸರ ಎಗರಿಸಿ ಎಸ್ಕೇಪ್ ಆಗುತ್ತಿದ್ದ ಕುಖ್ಯಾತ ಸರಗಳ್ಳರನ್ನು ಅವರು ಧರಿಸಿದ್ದ ಬಟ್ಟೆಯ ಮೇಲಿದ್ದ ಲೋಗೋಗಳನ್ನ ಆಧರಿಸಿ ಬಂಧಿಸಿರುವ ಘಟನೆ ಸಿಲಿಕಾನ್​ ಸಿಟಿಯಲ್ಲಿ ನಡೆದಿದೆ.

ಸಿಲಿಕಾನ್ ಸಿಟಿಯಲ್ಲಿ ಸರಣಿ ಸರಗಳ್ಳತನ‌: ಏಳು ಮಂದಿ ಕಳ್ಳರ ಬಂಧನ

By

Published : Aug 24, 2019, 5:59 PM IST

ಬೆಂಗಳೂರು: ಮಹಿಳೆಯರ ಸರಗಳ್ಳತನ ಮಾಡುತ್ತಿದ್ದ ಏಳು ಮಂದಿ ಕುಖ್ಯಾತ ಸರಗಳ್ಳರನ್ನ ಪುಲಿಕೇಶಿನಗರ ಪೊಲೀಸರು ಬಂಧಿಸಿದ್ದಾರೆ.

ಸರಗಳ್ಳತನ, ಮೊಬೈಲ್ ಕಳ್ಳತನ, ರಾಬರಿ ಸೇರಿದಂತೆ ಹಲವು ಪ್ರಕರಣಗಳಲ್ಲಿ ಭಾಗಿಯಾಗಿದ್ದ ಸೈಯ್ಯದ್ ಮೋಷಿನ್, ಅಬ್ದುಲ್ ಸೈಯಿದ್, ಮಜಾಯಿದ್ ಪಾಷಾ, ಮಹಮ್ಮದ್ ಯೂಸುಫ್, ಮುಕ್ರಂ, ಇರ್ಫಾನ್ ಹಾಗೂ ಎಹಸಾನ್ ಬಂಧಿತರು.

ಸಿಲಿಕಾನ್ ಸಿಟಿಯಲ್ಲಿ ಸರಣಿ ಸರಗಳ್ಳತನ‌: ಏಳು ಮಂದಿ ಕಳ್ಳರ ಬಂಧನ

ಬಟ್ಟೆಯ ಮೇಲಿದ್ದ ಲೋಗೋ ಆಧರಿಸಿ ಬಂಧನ:

ಆರೋಪಿಗಳು ವಾಕಿಂಗ್ ತೆರಳುತ್ತಿದ್ದ ಮಹಿಳೆಯರ ಸರ ಎಗರಿಸಿ ಎಸ್ಕೇಪ್ ಆಗಿದ್ದರು. ಘಟನೆ ಸಂಬಂಧ ಪುಲಿಕೇಶಿನಗರ ಪೊಲೀಸ್ ಠಾಣೆಯಲ್ಲಿ ಕೆಲ ಪ್ರಕರಣಗಳು ದಾಖಲಾಗಿದ್ದವು. ತನಿಖೆ ಆರಂಭಿಸಿದ ಪೊಲೀಸರು, ಕೃತ್ಯ ಸೆರೆಯಾಗಿದ್ದ ಸಿಸಿಟಿವಿ ದೃಶ್ಯಗಳಲ್ಲಿ ಆರೋಪಿಗಳ ಬಟ್ಟೆ ಮೇಲಿದ್ದ ಲೋಗೋ ಹಾಗೂ ಹೆಲ್ಮೆಟ್​ಗಳನ್ನ ಆಧರಿಸಿ ಆರೋಪಿಗಳನ್ನ ಬಂಧಿಸಿದ್ದಾರೆ.

ಬಂಧಿತರ ವಿರುದ್ಧ ಕಮರ್ಷಿಯಲ್ ಸ್ಟ್ರೀಟ್ ಸೇರಿದಂತೆ ನಗರದ ವಿವಿಧ ಠಾಣೆಗಳಲ್ಲಿ 17 ಪ್ರಕರಣಗಳು ದಾಖಲಾಗಿದ್ದವು. ಸದ್ಯ ಇವರಿಂದ 12 ಲಕ್ಷ ಮೌಲ್ಯದ 420 ಗ್ರಾಂ ಚಿನ್ನಾಭರಣಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ABOUT THE AUTHOR

...view details