ಬೆಂಗಳೂರು: 'ಪ್ರವಾಸೋದ್ಯಮ ಹಾಗೂ ಉದ್ಯೋಗ ಸರ್ವರಿಗೂ ಉಜ್ವಲ ಭವಿಷ್ಯ' ಎಂಬ ಘೋಷ ವಾಕ್ಯದೊಂದಿಗೆ ಇದೇ ಸೆಪ್ಟಂಬರ್ 27ರಂದು ವಿಶ್ವ ಪ್ರವಾಸೋದ್ಯಮ ದಿನ ಆಚರಿಸಲಾಗುತ್ತಿದ್ದು, ಈ ಮೂಲಕ ಜಗತ್ತಿನಲ್ಲಿ ಎಲ್ಲಾ ಪ್ರವಾಸಿ ತಾಣಗಳನ್ನು ಪರಿಚಯಿಸಲಾಗುತ್ತಿದೆ ಎಂದು ಪ್ರವಾಸೋದ್ಯಮ ಸಚಿವ ಸಿ.ಟಿ. ರವಿ ಹೇಳಿದ್ರು.
ಸೆ. 27ರಂದು ವಿಶ್ವ ಪ್ರವಾಸೋದ್ಯಮ ದಿನಾಚರಣೆ: ಪಾರಂಪರಿಕ ಕಟ್ಟಡಗಳಿಗೆ ದೀಪಾಲಂಕಾರ - ಪ್ರವಾಸಿ ತಾಣ
ಸೆಪ್ಟಂಬರ್ 27ರಂದು ವಿಶ್ವ ಪ್ರವಾಸೋದ್ಯಮ ದಿನ ಆಚರಿಸಲಾಗುತ್ತಿದ್ದು, ಈ ಮೂಲಕ ಜಗತ್ತಿನಲ್ಲಿ ಎಲ್ಲಾ ತಾಣಗಳನ್ನು ಪರಿಚಯಿಸಲಾಗುತ್ತಿದೆ ಎಂದು ಪ್ರವಾಸೋದ್ಯಮ ಸಚಿವ ಸಿ.ಟಿ. ರವಿ ತಿಳಿಸಿದ್ದಾರೆ.
ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ದೆಹಲಿಯಲ್ಲಿ ಕೇಂದ್ರ ಪ್ರವಾಸೋದ್ಯಮ ಸಚಿವರು ಪ್ರವಾಸೋದ್ಯಮ ದಿನದ ಉದ್ಘಾಟನೆ ಮಾಡುತ್ತಾರೆ. ಇನ್ನು ಕರ್ನಾಟಕದಲ್ಲಿ ಗುರುತಿಸಿರುವ 319 ಪ್ರವಾಸಿ ಕೇಂದ್ರಗಳನ್ನು ಪ್ರಚಾರ ಮಾಡಲಾಗುವುದು. ಹಂಪಿ ಹಾಗೂ ಪಶ್ಚಿಮ ಘಟ್ಟಗಳು ನಮ್ಮ ಜಾಗತಿಕ ಪಾರಂಪರಿಕ ತಾಣಗಳಾಗಿವೆ. ವಿಶ್ವ ಪ್ರವಾಸೋದ್ಯಮ ದಿನದ ಅಂಗವಾಗಿ ಜಿಲ್ಲಾ ಮಟ್ಟದಲ್ಲಿ ತಲಾ 30 ಸಾವಿರ ರೂಪಾಯಿ ಹಣ ಬಿಡುಗಡೆ ಮಾಡಲಾಗ್ತಿದೆ ಎಂದು ತಿಳಿಸಿದರು.
ಬೆಂಗಳೂರಿನಲ್ಲಿಯೂ ಹಲವು ಕಾರ್ಯಕ್ರಮಗಳನ್ನು ಆಯೋಜಿಸಿದ್ದು, ಎಂ ಎಸ್ ರಾಮಯ್ಯ ಸಂಸ್ಥೆಯ ಸಹಯೋಗದೊಂದಿಗೆ, ಫೋಟೋಗ್ರಫಿ ಸ್ಪರ್ಧೆ, ರಸಪ್ರಶ್ನೆ ಕಾರ್ಯಕ್ರಮದ ಜೊತೆಗೆ ಅಂದು ಬೆಂಗಳೂರು, ಮೈಸೂರಿನಲ್ಲಿರುವ ಪಾರಂಪರಿಕ ಕಟ್ಟಡಗಳಿಗೆ ದೀಪಾಲಂಕಾರ ಹಾಗೂ ಸೈಕಲ್ ಜಾಥ, ಯೋಗವನ್ನ ಹಮ್ಮಿಕೊಳ್ಳಲಾಗುತ್ತೆ ಸಚಿವರು ಮಾಹಿತಿ ನೀಡಿದರು.