ಬೆಂಗಳೂರು:ಮುಂದಿನ ದಿನಗಳಲ್ಲಿಲವ್ ಜಿಹಾದ್ ವಿರುದ್ಧ ಪ್ರತ್ಯೇಕ ಕಾನೂನು ತರುವ ಬಗ್ಗೆ ತೀರ್ಮಾನ ಮಾಡಲಾಗುವುದು ಎಂದು ಡಿಸಿಎಂ ಅಶ್ವತ್ಥ ನಾರಾಯಣ ಹೇಳಿದರು.
ಮುಂದಿನ ದಿನಗಳಲ್ಲಿ ಲವ್ ಜಿಹಾದ್ ವಿರುದ್ಧ ಪ್ರತ್ಯೇಕ ಕಾನೂನು: ಡಿಸಿಎಂ ಅಶ್ವತ್ಥ ನಾರಾಯಣ - Separate Law Against Love Jihad DCM
ಲವ್ ಜಿಹಾದ್ ವಿರುದ್ಧ ಇತರೆ ರಾಜ್ಯಗಳಲ್ಲಿ ತರುವ ಕಾನೂನನ್ನು ನೋಡಿ ಸರ್ಕಾರ ತಿರ್ಮಾನ ತೆಗೆದುಕೊಳ್ಳಲಿದೆ. ಈ ಬಗ್ಗೆ ಮುಂದಿನ ದಿನಗಳಲ್ಲಿ ಪ್ರತ್ಯೇಕ ಕಾನೂನು ತರಲಾಗುವುದು ಎಂದು ಡಿಸಿಎಂ ಅಶ್ವತ್ಥ ನಾರಾಯಣ ಹೇಳಿದರು.
ಡಿಸಿಎಂ
ಈ ಕುರಿತು ಮಾತನಾಡಿದ ಅವರು, ಲವ್ ಜಿಹಾದ್ ವಿರುದ್ಧ ಇತರೆ ರಾಜ್ಯಗಳಲ್ಲಿ ತರುವ ಕಾನೂನನ್ನು ನೋಡಿ ಸರ್ಕಾರ ತಿರ್ಮಾನ ತೆಗೆದುಕೊಳ್ಳಲಿದೆ. ಈ ಬಗ್ಗೆ ಮುಂದಿನ ದಿನಗಳಲ್ಲಿ ಪ್ರತ್ಯೇಕ ಕಾನೂನು ತರಲಾಗುವುದು ಎಂದರು.
ಆರ್ಆರ್ ನಗರ ಉಪಚುನಾವಣೆ ಫಲಿತಾಂಶದ ಲೆಕ್ಕಾಚಾರದ ಬಗ್ಗೆ ಮಾತನಾಡಿದ ಡಿಸಿಎಂ, ಈ ಬಾರಿ ಮತದಾನ ಕಡಿಮೆಯಾಗಿದೆ. ಶೇ. 25ರಷ್ಟು ಕಾಂಗ್ರೆಸ್ಗೆ, ಶೇ. 10 ಜೆಡಿಎಸ್ಗೆ ಹಾಗೂ ಶೇ. 65ರಷ್ಟು ಮತಗಳನ್ನು ಪಡೆಯುವ ಮೂಲಕ ಮುನಿರತ್ನ ಗೆಲ್ಲಲಿದ್ದಾರೆ. ಎರಡೂ ಕ್ಷೇತ್ರಗಳಲ್ಲಿ ಬಿಜೆಪಿ ಗೆಲ್ಲಲಿದೆ ಎಂದು ಭವಿಷ್ಯ ನುಡಿದರು.