ಬೆಂಗಳೂರು : ಬಣ್ಣ ಬಳಿಯಲು ಮನೆಗೆ ಬಂದು ಮಾಲೀಕನ ಮನೆಯಲ್ಲಿದ್ದ ಚಿನ್ನ ಕಳ್ಳತನ ಮಾಡಿದ್ದ ಪೇಂಟರ್‌ನನ್ನು ಬಸವನಗುಡಿ ಠಾಣೆ ಪೊಲೀಸರು ಬಂಧಿಸಿದ್ದಾರೆ. ಉತ್ತರಪ್ರದೇಶ ಮೂಲದ ಉಮೇಶ್ ಪ್ರಸಾದ್ ಜಾಧವ್ ಬಂಧಿತ ಆರೋಪಿ. ಈತನಿಂದ 6 ಲಕ್ಷ ಬೆಲೆಬಾಳುವ 100 ಗ್ರಾಂ ಚಿನ್ನವನ್ನು ಪೊಲೀಸರು ವಶಕ್ಕೆ ಪಡೆದುಕೊಂಡು ಆರೋಪಿಯನ್ನು ಜೈಲಿಗಟ್ಟಿದ್ದಾರೆ.
ವೃತ್ತಿಯಲ್ಲಿ ಪೇಂಟರ್ ಆಗಿರುವ ಉಮೇಶ್ ಕಳೆದ ನಾಲ್ಕು ವರ್ಷಗಳ ಹಿಂದೆ ಬೆಂಗಳೂರಿಗೆ ಬಂದು ಜೀವನ ಕಟ್ಟಿಕೊಂಡಿದ್ದ. ಕನಕಪುರ ರಸ್ತೆಯಲ್ಲಿ ಮನೆಯೊಂದರಲ್ಲಿ ವಾಸವಾಗಿದ್ದ. ಕಳೆದ ತಿಂಗಳು ಬಸವನಗುಡಿ ಠಾಣಾ ವ್ಯಾಪ್ತಿಯಲ್ಲಿ ವಾಸವಿರುವ ವ್ಯಕ್ತಿಯೊಬ್ಬರ ಮನೆಗೆ ಪೇಂಟಿಂಗ್ ಮಾಡಲು ಬಂದಿದ್ದ. ಈ ವೇಳೆ ಮಾಲೀಕರ ಕಣ್ತಪ್ಪಿಸಿ ಕಬೋರ್ಡ್ನಲ್ಲಿದ್ದ 100 ಗ್ರಾಂ ಚಿನ್ನ ಕಳ್ಳತನ ಮಾಡಿ ಎಸ್ಕೇಪ್ ಆಗಿದ್ದ. ಎರಡು ದಿನಗಳ ಬಳಿಕ ಚಿನ್ನಾಭರಣ ಕಳ್ಳತನವಾಗಿರುವುದು ಬೆಳಕಿಗೆ ಬಂದಿತ್ತು.
ಈ ಸಂಬಂಧ ಪೇಂಟರ್ ವಿರುದ್ಧ ಬಸವನಗುಡಿ ಪೊಲೀಸರಿಗೆ ದೂರು ಮನೆ ಮಾಲೀಕರು ದೂರು ನೀಡಿದ್ದರು. ಕಳ್ಳತನ ಮಾಡಿದ್ದ ಉಮೇಶ್, ಊರಿಗೆ ಹೋಗಿದ್ದ. ಮನೆಯೊಂದಕ್ಕೆ ಪೇಂಟಿಂಗ್ ಮಾಡಿಸಬೇಕೆಂದು ನಗರಕ್ಕೆ ಕರೆಯಿಸಿಕೊಂಡ ಪೊಲೀಸರು ಆರೋಪಿಯನ್ನು ಬಂಧಿಸಿದ್ದರು. ವಿಚಾರಣೆ ವೇಳೆ ಕಳ್ಳತನ ಮಾಡಿರುವುದನ್ನು ಒಪ್ಪಿಕೊಂಡಿದ್ದು, ಈತನಿಂದ 6 ಲಕ್ಷ ಮೌಲ್ಯದ ಚಿನ್ನಾಭರಣ ವಶಕ್ಕೆ ಪಡೆದುಕೊಂಡಿದ್ದಾರೆ.
ಯೂಟ್ಯೂಬ್ ನೋಡಿ ಬೈಕ್ ಕಳ್ಳತನ :ಯೂಟ್ಯೂಬ್ನಲ್ಲಿ ನೋಡಿ ನಗರದಲ್ಲಿ ಬೈಕ್ ಕಳ್ಳತನ ಮಾಡುತ್ತಿದ್ದ ಆಂಧ್ರ ಪ್ರದೇಶ ಮೂಲದ ಇಬ್ಬರನ್ನು ಹನುಮಂತನಗರ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬಂಧಿತ ಆರೋಪಿಗಳಾದ ಹೇಮಾದ್ರಿ ಹಾಗೂ ಪವನ್ ಆಂಧ್ರದ ಬಾಲಯ್ಯಪಲ್ಲಿ ಮೂಲದವರಾಗಿದ್ದಾರೆ.