ಕರ್ನಾಟಕ

karnataka

ETV Bharat / state

ಪದ್ಮಭೂಷಣ ಪ್ರಶಸ್ತಿ ಪಡೆದ ಹಿರಿಯ ಸಾಹಿತಿ ಡಾ. ಚಂದ್ರಶೇಖರ ಕಂಬಾರರಿಗೆ ಸನ್ಮಾನ - ಬೆಂಗಳೂರು

ಪದ್ಮಭೂಷಣ ಪ್ರಶಸ್ತಿಗೆ ಭಾಜನರಾದ ಹಿರಿಯ ಸಾಹಿತಿ ಡಾ. ಚಂದ್ರಶೇಖರ ಕಂಬಾರರಿಗೆ ಸಮಾಜದ ಗಣ್ಯರಿಂದ ಸನ್ಮಾನ ಮಾಡಲಾಯಿತು.

Dr. Chandrasekhar Kambara
ಹಿರಿಯ ಸಾಹಿತಿ ಡಾ. ಚಂದ್ರಶೇಖರ ಕಂಬಾರರಿಗೆ ಸನ್ಮಾನ

By

Published : Jan 27, 2021, 6:27 AM IST

ಬೆಂಗಳೂರು: 2021ನೇ ಸಾಲಿನ ಪದ್ಮಭೂಷಣ ಪ್ರಶಸ್ತಿಗೆ ಭಾಜನರಾದ ಹಿರಿಯ ಸಾಹಿತಿ ಡಾ. ಚಂದ್ರಶೇಖರ ಕಂಬಾರರಿಗೆ ಸಮಾಜದ ಗಣ್ಯರಿಂದ ಸನ್ಮಾನ ಕಾರ್ಯಕ್ರಮ ನಡೆಯಿತು.

ಈ ಸಂದರ್ಭದಲ್ಲಿ ನಿವೃತ್ತ ಐಎಎಸ್ ಅಧಿಕಾರಿ, ವೈದ್ಯಕೀಯ ಕಾರ್ಯದರ್ಶಿಯಾಗಿದ್ದ ಪ್ರಭಾಕರ್​, ಆರ್ಥಿಕ ಇಲಾಖೆಯ ಜಂಟಿ ಕಾರ್ಯದರ್ಶಿಯಾದ ಕೆ.ಆರ್ ಬಡಿಗೇರ, ವಿಶ್ವಕರ್ಮ ಅಭಿವೃದ್ಧಿ ನಿಗಮಮಂಡಳಿ ಅಧ್ಯಕ್ಷ ಬಾಬು ಪತ್ತಾರ, ಉತ್ತರ ಕರ್ನಾಟಕ ವಿಶ್ವಕರ್ಮ ಸಮಾಜದ ಪ್ರಧಾನ ಕಾರ್ಯದರ್ಶಿ ಜ್ಞಾನೇಶ, ಮುಖಂಡರಾದ ಅನಿಲ್​, ದ್ಯಾಮಣ್ಣ ಹಲಗೇರಿ ವಕೀಲರಾದ ಮಹೇಶ ಇನ್ನಿತರ ಸಮಾಜದ ಮುಖಂಡರು ಭಾಗಿಯಾಗಿದ್ದರು.

72ನೇ ಗಣರಾಜ್ಯೋತ್ಸವದ ಮುನ್ನಾದಿನ ಘೋಷಣೆ ಮಾಡಿದ್ದ ವಿವಿಧ ಗಣ್ಯರಿಗೆ ಪದ್ಮ ಪ್ರಶಸ್ತಿ ಘೋಷಣೆ ಮಾಡಲಾಗಿತ್ತು. ಇನ್ನು ಚಂದ್ರಶೇಖರ ಕಂಬಾರರಿಗೆ ಸಿಎಂ ಯಡಿಯೂರಪ್ಪ ಅಭಿನಂದನೆ ಸಲ್ಲಿಸಿದ್ದರು.

ABOUT THE AUTHOR

...view details