ಬೆಂಗಳೂರು: ನಿನ್ನೆ ರಾತ್ರಿ ನಿಧನರಾದ ಸ್ಯಾಂಡಲ್ವುಡ್ನ ಹಿರಿಯ ನಟಿ ಜಯಂತಿ ಪಾರ್ಥಿವ ಶರೀರವನ್ನು ರವೀಂದ್ರ ಕಲಾಕ್ಷೇತ್ರಕ್ಕೆ ತರಲಾಗಿದೆ. ಇಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದ್ದು, ಸಚಿವರುಗಳಾದ ಆರ್, ಅಶೋಕ್, ಎಸ್ ಟಿ ಸೋಮಶೇಖರ್, ಭೈರತಿ ಬಸವರಾಜ್ ಜಯಂತಿ ಅವರ ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆದರು.
ಜಯಂತಿಯವರ ಮಗ ಕೃಷ್ಣಕುಮಾರ್ ಸೇರಿದಂತೆ ಇಡೀ ಅವರ ಕುಟುಂಬ ವರ್ಗ, ಚಿತ್ರರಂಗದ ತಾರೆಯರು ಉಪಸ್ಥಿತರಿದ್ದು, ಅಂತಿಮ ಯಾತ್ರೆಯಲ್ಲಿ ಭಾಗಿಯಾಗಿದ್ದಾರೆ.
ರವೀಂದ್ರ ಕ್ಷೇತ್ರದಲ್ಲಿನಟಿ ಜಯಂತಿ ಅವರ ಪಾರ್ಥಿವ ಶರೀರ.. ಅಂತಿಮ ದರ್ಶನಕ್ಕೆ ನಟಿ ತಾರಾ ಸಹಾಯ :ಹಿರಿಯ ನಟಿ ಜಯಂತಿ ನಿನ್ನೆ ರಾತ್ರಿ ಇಹಲೋಕ ತ್ಯಜಿಸಿದ ವಿಷಯ ತಿಳಿಯುತ್ತಿದಂತೆ,ಬೆಳ್ಳಗ್ಗೆಯಿಂದ ಮನೆಗೆ ಸಾಕಷ್ಟು ಜನ ಆಗಮಿಸಿದ್ದಾರೆ. ಈ ಹಿನ್ನೆಲೆ ರವೀಂದ್ರ ಕಲಾಕ್ಷೇತ್ರದಲ್ಲಿ ಜಯಂತಿಯವರ ಅಂತಿಮ ದರ್ಶನಕ್ಕೆ, ನಟಿ ತಾರಾ ವ್ಯವಸ್ಥೆ ಮಾಡಿಸಿದರು ಎಂದು ಹಿರಿಯ ರಂಗಕರ್ಮಿ ಶ್ರೀನಿವಾಸ್ ಬಿ ಕಪ್ಪಣ್ಣ ತಿಳಿಸಿದ್ದಾರೆ.
ನಾವು ಕನ್ನಡ ಸಂಸ್ಕೃತಿ ಇಲಾಖೆ ಮೊರೆ ಹೋದ್ವಿ. ಅವ್ರು ಹಣಕಾಸಿನ ಸಮಸ್ಯೆ ಇದೆ ಎಂದ್ರು. ಆಗ ತಾರಾ ಅವರಿಗೆ ಕರೆ ಮಾಡಿದೆ, ತಾರಾ ಅವರು ಎಲ್ಲಾ ವ್ಯವಸ್ಥೆ ಮಾಡಿದ್ರು. ಮಧ್ಯಾಹ್ನ ಒಂದು ಗಂಟೆ ಸುಮಾರಿಗೆ ಜಯಂತಿ ಪಾರ್ಥಿವ ಶರೀರವನ್ನ ರವೀಂದ್ರ ಕಲಾಕ್ಷೇತ್ರಕ್ಕೆ ತರಲಾಗಿದೆ. 2 ಗಂಟೆಯಿಂದ 4 ಗಂಟೆವರೆಗೂ ಸಾರ್ವಜನಿಕರ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ ಎಂದು ತಿಳಿಸಿದ್ರು.
ರವೀಂದ್ರ ಕಲಾಕ್ಷೇತ್ರಕ್ಕೆ ಪೊಲೀಸರ ನಿಯೋಜನೆ :ರವೀಂದ್ರ ಕಲಾಕ್ಷೇತ್ರಕ್ಕೆ SJ ಪಾರ್ಕ್ ಪೊಲೀಸರ ನೇತೃತ್ವದಲ್ಲಿ ಭದ್ರತೆ ಕಲ್ಪಿಸಲಾಗಿದೆ. ಓರ್ವ ಎಸಿಪಿ, 3 ಇನ್ಸ್ಪೆಕ್ಟರ್, 8 ಸಬ್ ಇನ್ಸ್ಪೆಕ್ಟರ್ ಸೇರಿದಂತೆ 90ಕ್ಕೂ ಹೆಚ್ಚು ಸಿಬ್ಬಂದಿಯಿಂದ ಭದ್ರತೆಗಾಗಿ ನಿಯೋಜಿಸಲಾಗಿದೆ.
ಸ್ಮಾರಕ ನಿರ್ಮಾಣ ಕುರಿತು ಸರ್ಕಾರದ ಜತೆ ಮಾತು :ಹಿರಿಯ ನಟಿ ಜಯಂತಿ ಅಗಲಿಕೆಯಿಂದ ಇಡೀ ಚಿತ್ರರಂಗವೇ ಶೋಕ ಸಾಗರದಲ್ಲಿ ಮುಳುಗಿದೆ. ಅಂತಿಮ ದರ್ಶನಕ್ಕೆ ಬೇಕಾಗಿರುವ ವ್ಯವಸ್ಥೆ ಮಾಡೋ ಹೊಣೆಯನ್ನನಟಿ ತಾರಾ ಅನುರಾಧಾ ಹೊತ್ತಿದ್ದಾರೆ. ಇನ್ನು, ಸ್ಮಾರಕ ನಿರ್ಮಾಣ ಕುರಿತು ಸರ್ಕಾರದ ಜೊತೆ ಮಾತುಕತೆ ಮಾಡಿದ್ದಾರೆ ಎನ್ನಲಾಗಿದೆ. ಜೊತೆಗೆ ಜಯಂತಿ ಅವರಿಗೆ ಸರ್ಕಾರಿ ಗೌರವ ಸಲ್ಲಿಸಲು ನಟಿ ತಾರಾ ವ್ಯವಸ್ಥೆ ಮಾಡಿದ್ದಾರೆ.
ಇನ್ನು, ಸಾರ್ವಜನಿಕ ದರ್ಶನ ಮುಗಿದ ಬಳಿಕ ಸಂಜೆ 6 ಗಂಟೆಗೆ ಬನಶಂಕರಿ ಚಿತಾಗಾರದಲ್ಲಿ ಅಂತಿಮ ವಿಧಿವಿಧಾನ ಮಾಡಲು ಕುಟುಂಬ ವರ್ಗ ತೀರ್ಮಾನಿಸಿದೆ ಅಂತಾ ಹಿರಿಯ ರಂಗಕರ್ಮಿ ಕಪ್ಪಣ್ಣ ಹೇಳಿದ್ದಾರೆ.