ಕರ್ನಾಟಕ

karnataka

ETV Bharat / state

ಲೋಕಾಯುಕ್ತ ವರದಿ ಹೈಕಮಾಂಡ್​​​ಗೆ ಕಳಿಸುತ್ತೇವೆ, ಹೈ- ಕಮಾಂಡ್ ತೀರ್ಮಾನ ಮಾಡಲಿದೆ: ಕಟೀಲ್

ಬಿಜೆಪಿ ಪಕ್ಷ ಯಾರೇ ಭ್ರಷ್ಟಾಚಾರ ಮಾಡಿದರೂ ಸಹಿಸಲ್ಲ. ಲೋಕಾಯುಕ್ತಕ್ಕೆ ಸಂಪೂರ್ಣ ಅಧಿಕಾರ ನೀಡಿದ್ದೇವೆ‌. ಹಿಂದೆ ಕಾಂಗ್ರೆಸ್ ಇದ್ದಾಗ ಲೋಕಾಯುಕ್ತ ಮುಚ್ಚಿದರೂ, ACB ಕಟ್ಟಿಹಾಕಿ ಕೆಲಸ ಮಾಡ್ತಿದ್ದರು: ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಆರೋಪ.

BJP State President Nalin Kumar Kateel
ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್

By

Published : Mar 7, 2023, 4:10 PM IST

Updated : Mar 7, 2023, 11:08 PM IST

ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್


ಬೆಂಗಳೂರು:ಲೋಕಾಯುಕ್ತ ವರದಿ ಪಡೆದು ಹೈಕಮಾಂಡ್​​ಗೆ ಕಳಿಸುತ್ತೇವೆ. ಹೈಕಮಾಂಡ್ ತೀರ್ಮಾನ ಮಾಡಲಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಸ್ಪಷ್ಟಪಡಿಸಿದರು. ಮಲ್ಲೇಶ್ವರಂ ಬಿಜೆಪಿ ಕಚೇರಿಯಲ್ಲಿ ಮಾತನಾಡಿದ ಅವರು, ಮಾಡಾಳ್ ವಿರೂಪಾಕ್ಷಪ್ಪ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ನಮ್ಮ ಪಕ್ಷ ಯಾರೇ ಭ್ರಷ್ಟಾಚಾರ ಮಾಡಿದ್ರೂ ಸಹಿಸಲ್ಲ. ಲೋಕಾಯುಕ್ತಕ್ಕೂ ಸಂಪೂರ್ಣ ಅಧಿಕಾರ ನೀಡಿದ್ದೇವೆ‌. ಹಿಂದೆ ಕಾಂಗ್ರೆಸ್ ಇದ್ದಾಗ ಲೋಕಾಯುಕ್ತ ಮುಚ್ಚಿದರು. ACB ಕಟ್ಟಿ ಹಾಕಿ ಕೆಲಸ ಮಾಡ್ತಿದ್ರು. ನಮ್ಮ ಸರ್ಕಾರ ಲೋಕಾಯುಕ್ತಕ್ಕೆ ಸಂಪೂರ್ಣ ಅಧಿಕಾರ ನೀಡಿದ್ದೇವೆ ಎಂದು ತಿಳಿಸಿದರು.


ಕೆಪಿಸಿಸಿ ಅಧ್ಯಕ್ಷ ತಿಹಾರ್ ಜೈಲಿಗೆ ಹೋಗಿ ಬಂದವರು: ನಮ್ಮ ಪಾರ್ಟಿ ಯಾರೇ ಭ್ರಷ್ಟಾಚಾರ ಮಾಡಿದರೂ ಸಹಿಸಲ್ಲ. ನಾವು ಲೋಕಾಯುಕ್ತಕ್ಕೆ ಬಲ ನೀಡಿದ್ದೇವೆ. ಲೋಕಾಯುಕ್ತ ತನಿಖೆ ಮಾಡುತ್ತದೆ.ಕಾಂಗ್ರೆಸ್ ಪಾರ್ಟಿ ಅಧ್ಯಕ್ಷ ತಿಹಾರ್ ಜೈಲಿಗೆ ಹೋಗಿ ಬಂದವರು. ಅವರನ್ನು ಯಾಕೆ ಉಚ್ಚಾಟನೆ ಮಾಡಿಲ್ಲ ಅವರಿಗೆ ಯಾವ ನೈತಿಕತೆ ಇದೆ ಎಂದು ವಾಗ್ದಾಳಿ ನಡೆಸಿದರು.

ಬಿಎಸ್ ವೈ ಹೇಳಿಕೆ ವಿರೋಧಿಸಲ್ಲ: ಕೆಲವು ಶಾಸಕರಿಗೆ ಟಿಕೆಟ್ ಸಿಗಲ್ಲ ಎಂಬ ಯಡಿಯೂರಪ್ಪ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಹೇಳಿಕೆಯನ್ನು ನಾನು ವಿರೋಧಿಸಲ್ಲ. ಆದರೆ ನಮ್ಮಲ್ಲಿ ಟಿಕೆಟ್ ಫೈನಲ್ ಆಗೋದು ಪಾರ್ಲಿಮೆಂಟರಿ ಬೋರ್ಡ್ ನಲ್ಲಿ. ಈಗ ಚರ್ಚೆ ಬೇಡ , ಎಲ್ಲವೂ ಸಂಸದಿಯ ಮಂಡಳಿ ಸಭೆಯಲ್ಲಿ ತೀರ್ಮಾನ ಆಗಲಿದೆ ಎಂದರು. ಯಡಿಯೂರಪ್ಪ ಸಹ ಸದಸ್ಯರಾಗಿದ್ದಾರೆ ಅನ್ನೋ ಪ್ರಶ್ನೆಗೆ ಅದಕ್ಕೆ ಅವರ ಹೇಳಿಕೆ ನಾನು ವಿರೋಧಿಸುತ್ತಿಲ್ಲ ಎಂದು ಪರೋಕ್ಷವಾಗಿ ಬಿಎಸ್​​​ವೈ ಹೇಳಿಕೆಯನ್ನು ಬೆಂಬಲಿಸಿದರು. ಪಕ್ಷಕ್ಕೆ ಮುಜುಗರ ತಂದವರಿಗೆ ಟಿಕೆಟ್ ಇಲ್ವಾ ಅನ್ನೋ ಪ್ರಶ್ನೆಗೆ ಅವರವರ ಭಾವ ಭಕುತಿಗೆ ಅರ್ಥೈಯಿಸಿಕೊಳ್ಳಬಹುದು ಎಂದು ತಿಳಿಸಿದರು.

ಕಾಂಗ್ರೆಸ್​ಗೆ ನೆಲೆಯಿಲ್ಲ: ಬಿಜೆಪಿ ಒಂದು ಮನುವಾದಿ ಪಾರ್ಟಿ ಎನ್ನುವ ಸಿದ್ದರಾಮಯ್ಯ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯೆಸಿದ ಅವರು, ಜನರಿಗೆ ಯಾರನ್ನು ಎಲ್ಲಿ ಕೂರಿಸಬೇಕು ಕೂರಿಸಬಾರದು ಗೊತ್ತಿದೆ. ಬಿಜೆಪಿಯನ್ನು ರಾಜ್ಯದಿಂದ ಅಲ್ಲ ದೇಶದಿಂದ ಸಹ ಓಡಿಸಬೇಕು ಎಂಬ ಸಿದ್ದರಾಮಯ್ಯ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಸದ್ಯ ಕಾಂಗ್ರೆಸ್​ಗೆ ಎಲ್ಲೂ ನೆಲೆಯಿಲ್ಲ. ಕಳೆದ ವಾರ ಬಂದ ಫಲಿತಾಂಶದಲ್ಲಿ ಸಹ ಕಾಂಗ್ರೆಸ್ ಗೆ ಜನ ಏನು ಮಾಡಿದ್ದಾರೆ ಅನ್ನೋದು ಗೊತ್ತು. ಹೀಗಾಗಿ ಕಾಂಗ್ರೆಸ್ ಎಲ್ಲೂ ನೆಲೆ ಇಲ್ಲ ಎಂದು ಹೇಳಿದರು.

ರಾಷ್ಟ್ರದ ಧರ್ಮ ಪಾಲಿಸಿಲ್ಲ: ರಾಹುಲ್ ಗಾಂಧಿ ದೇಶ ವಿರೋಧಿ ಹೇಳಿಕೆ ವಿಚಾರವಾಗಿ ಮಾತನಾಡಿದ ಅವರು, ಕಾಂಗ್ರೆಸ್ ಹಿಂದಿನಿಂದಲೂ ಇದೇ ಕೆಲಸ ಮಾಡಿಕೊಂಡು ಬಂದಿದೆ. ಇಂದು ವಿಪಕ್ಷವಾಗಿ ರಾಷ್ಟ್ರದ ಧರ್ಮ ಪಾಲಿಸಬೇಕಾದ ನಾಯಕರು. ವಿದೇಶದಲ್ಲಿ ಹೋಗಿ ಭಾರತವನ್ನು ನಿಂದಿಸುತ್ತಿದ್ದಾರೆ. ಅಧಿಕಾರ ಇಲ್ಲದಾಗ ರಾಷ್ಟ್ರ ವಿರೋಧಿ ಕೆಲಸ ಮಾಡ್ತಿದ್ದಾರೆ. ಕೆಲವೊಮ್ಮೆ ಚೀನಾ ಹೊಗಳೋದು, ಪಾಕಿಸ್ತಾನ ಪರ ಮಾತನಾಡೋ ಕೆಲಸ ಮಾಡ್ತಿದ್ದಾರೆ ಎಂದು ಆರೋಪಿಸಿದರು.

ಈ ದೇಶದಲ್ಲಿ ರಾಜ್ಯದಲ್ಲಿ ಭಯೋತ್ಪಾದಕರ ಪರವಾಗಿದ್ದಾರೆ. ಕಾಂಗ್ರೆಸ್ ಕಾರಣಕ್ಕೆ ಈ ದೇಶದಲ್ಲಿ ಭಯೋತ್ಪಾದನೆ ಹೆಚ್ಚಾಗಿದೆ. ನಿರಂತರವಾಗಿ ಬಾಂಬ್ ಬ್ಲಾಸ್ಟ್ ಆಗ್ತಿತ್ತು. ಈಗ ಅದನ್ನ ಕಡಿಮೆ ಮಾಡಿದ್ದೇವೆ. ಮಂಗಳೂರಿನಲ್ಲಿ ಕುಕ್ಕರ್ ಬ್ಲಾಸ್ಟ್ ಆದಾಗ ಅವನನ್ನು ಅಮಾಯಕ ಅಂದ್ರು, ಕ್ರಮ ಕೈಗೊಂಡ್ರೆ ಇದಕ್ಕೆ ಕಾಂಗ್ರೆಸ್ ವಿರೋಧಿಸಿತ್ತು. ಮೂಲಭೂತವಾದಿ ಸಂಘಟನೆಗಳ ಪರವಾಗಿದೆಯಾ ಕಾಂಗ್ರೆಸ್ ? ಎಂದು ಪ್ರಶ್ನಿಸಿದರು.

ಇದನ್ನೂಓದಿ:ಮಾಡಾಳ್ ವಿರುಪಾಕ್ಷಪ್ಪಗೆ ನಿರೀಕ್ಷಣಾ ಜಾಮೀನು ಮಂಜೂರು

Last Updated : Mar 7, 2023, 11:08 PM IST

ABOUT THE AUTHOR

...view details