ಬೆಂಗಳೂರು:ಕೆ.ಜಿ. ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರತಿಷ್ಠಿತ ಕಂಪನಿಯ ಹೆಸರುಗಳನ್ನು ಬಳಸಿ, ನಕಲಿ ಬಟ್ಟೆ ಮಾರಾಟ ಮಾಡುತ್ತಿದ್ದ ಅಂಗಡಿಯ ಮೇಲೆ ಸಿಸಿಬಿ ಪೊಲೀಸರು ದಾಳಿ ಮಾಡಿ ಸರಕನ್ನು ಜಪ್ತಿ ಮಾಡಿದ್ದಾರೆ.
ಪ್ರತಿಷ್ಠಿತ ಕಂಪನಿ ಹೆಸರಲ್ಲಿ ನಕಲಿ ಬಟ್ಟೆ ಮಾರಾಟ... ಸಿಸಿಬಿಯಿಂದ ಸರಕು ಜಪ್ತಿ - ಅಂಗಡಿ ಮೇಲೆ ಸಿಸಿಬಿ ದಾಳಿ
ಪ್ರತಿಷ್ಠಿತ ಕಂಪನಿಯ ಹೆಸರು ಬಳಸಿ ನಕಲಿ ಬಟ್ಟೆ ಮಾರುತ್ತಿದ್ದ ಅಂಗಡಿ ಮೇಲೆ ಸಿಸಿಬಿ ಪೊಲೀಸರು ದಾಳಿ ಮಾಡಿ ಆರೋಪಿಯನ್ನ ಬಂಧಿಸಿದ್ದಾರೆ.
![ಪ್ರತಿಷ್ಠಿತ ಕಂಪನಿ ಹೆಸರಲ್ಲಿ ನಕಲಿ ಬಟ್ಟೆ ಮಾರಾಟ... ಸಿಸಿಬಿಯಿಂದ ಸರಕು ಜಪ್ತಿ](https://etvbharatimages.akamaized.net/etvbharat/prod-images/768-512-4068000-thumbnail-3x2-bng.jpg)
ಸಿಸಿಬಿ ದಾಳಿ, ಸರಕು ಜಪ್ತಿ
ವೈಭವ್ ಬಂಧಿತ ಆರೋಪಿ. ಈತ 'EL _UNICO ' ಎಂಬ ಹೆಸರಿನ ಅಂಗಡಿಯೊಂದನ್ನ ಇಟ್ಟುಕೊಂಡು, ಪೆಪೆ ಜೀನ್ಸ್, ಲಿವೈಸ್, ಬೆನೊಟೊನ್, ಯು ಎಸ್ ಪೋಲೊ ಕಂಪನಿಯ ಬ್ರಾಂಡ್ಗಳ ನಕಲಿ ಬಟ್ಟೆಗಳನ್ನ ಅಕ್ರಮವಾಗಿ ಮಾರಾಟ ಮಾಡುತ್ತಿದ್ದ. ಈ ವಿಚಾರ ಸಿಸಿಬಿ ಗಮನಕ್ಕೆ ಬಂದಿದ್ದು, ಕೂಡಲೇ ಕೇಂದ್ರ ವಿಭಾಗ ಜಂಟಿ ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್, ಸಿಸಿಬಿ ಡಿಸಿಪಿ ರವಿಕುಮಾರ್ ನೇತೃತ್ವದಲ್ಲಿ ದಾಳಿ ಮಾಡಿ ಆರೋಪಿಯನ್ನ ಬಂಧಿಸಲಾಗಿದೆ.
ಆರೋಪಿಯಿಂದ 40 ಲಕ್ಷ ಮೌಲ್ಯದ ಬಟ್ಟೆಗಳು, ನಕಲಿ ಲೇಬಲ್ಗಳನ್ನು ಜಪ್ತಿ ಮಾಡಿದ್ದು, ತನಿಖೆ ಮುಂದುವರೆದಿದೆ.
Last Updated : Aug 7, 2019, 5:05 PM IST