ಕರ್ನಾಟಕ

karnataka

ETV Bharat / state

ಪಾಕ್ ಪರ ಘೋಷಣೆ ಕೂಗಿದ ಅಮೂಲ್ಯಾ ಪ್ರಕರಣ: ವಿಚಾರಣೆಗೆ ಹಾಜರಾಗುವಂತೆ ಆಯೋಜಕರಿಗೆ ನೋಟಿಸ್ - Corporator Ibran Pasha

ಸಿಎಎ ವಿರೋಧಿಸಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಪಾಕ್ ಪರ ಘೋಷಣೆ ಕೂಗಿದ ಹಿನ್ನೆಲೆ ಕಾರ್ಯಕ್ರಮದ ಆಯೋಜಕರಿಗೆ ಉಪ್ಪಾರಪೇಟೆ ಪೊಲೀಸ್ ಠಾಣೆ ಪೊಲೀಸರು ನೋಟಿಸ್ ನೀಡಿದ್ದಾರೆ.

Ibran Pasha
ಇಬ್ರಾನ್ ಪಾಷ

By

Published : Feb 21, 2020, 12:29 PM IST

Updated : Feb 22, 2020, 10:47 AM IST

ಬೆಂಗಳೂರು: ಪಾಕ್ ಪರ ಅಮೂಲ್ಯಾ ಘೋಷಣೆ ಕೂಗಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾರ್ಯಕ್ರಮದ ಆಯೋಜಕರಾದ ಇಮ್ರಾನ್ ಪಾಷ ಹಾಗೂ ಎಂಐಎಂ ಪಕ್ಷದ ಸ್ಥಳೀಯ ಮುಖಂಡ ಇಬ್ರಾಹಿಂಗೆ ವಿಚಾರಣೆಗೆ ಹಾಜರಾಗುವಂತೆ ಉಪ್ಪಾರಪೇಟೆ ಪೊಲೀಸರು ನೋಟಿಸ್ ನೀಡಿದ್ದಾರೆ.

ಇಂದು ವಿಚಾರಣೆಗೆ ಹಾಜರಾಗುವಂತೆ ಇಬ್ಬರಿಗೂ ಶುಕ್ರವಾರ ನೋಟಿಸ್ ನೀಡಿದ್ದರು. ಎರಡು ದಿನಗಳ ಹಿಂದೆ ಫ್ರೀಡಂ ಪಾರ್ಕ್​ನಲ್ಲಿ ಸಿಎಎ ವಿರೋಧಿಸಿ ಇಮ್ರಾನ್ ಪಾಷ ಪ್ರತಿಭಟನೆ ಆಯೋಜಿಸಿದ್ದರು. ಇದೇ ವೇದಿಕೆಯಲ್ಲಿ ಅಮೂಲ್ಯ ಪಾಕ್ ಪರ ಘೋಷಣೆ ಕೂಗಿದ್ದರು. ಇದು ವಿವಾದಕ್ಕೀಡಾಗಿದ್ದು, ಆಯೋಜಕರ ವಿರುದ್ಧ ಪೊಲೀಸರು ಕ್ರಮಕೈಗೊಳ್ಳೋ ಸಾಧ್ಯತೆಯಿದೆ.

ಉಪ್ಪಾರಪೇಟೆ ಪೊಲೀಸ್ ಠಾಣೆಯಲ್ಲಿ ಅಮೂಲ್ಯ ವಿರುದ್ಧ ದೇಶದ್ರೋಹದ ಕೇಸ್ ದಾಖಲಾಗಿದೆ. ಸದ್ಯ ಅಮೂಲ್ಯ ನ್ಯಾಯಾಂಗ ಬಂಧನದಲ್ಲಿದ್ದಾರೆ. ‌

ಅಮೂಲ್ಯ ಅವರನ್ನು ನಾವು ಕಾರ್ಯಕ್ರಮಕ್ಕೆ ಆಹ್ವಾನವೇ ನೀಡಿಲ್ಲ. ನನ್ನ ಮೊಬೈಲ್ ಹಾಗೂ ಕಾಲ್ ರೆರ್ಕಾಡ್ ಚೆಕ್ ಮಾಡಿಕೊಳ್ಳಿ ಎಂದು ಪಾಷ ಹೇಳಿದ್ದಾರೆ.

Last Updated : Feb 22, 2020, 10:47 AM IST

ABOUT THE AUTHOR

...view details