ಬೆಂಗಳೂರು: ನಗರದ ಫ್ರೀಡಂ ಪಾರ್ಕ್ನಲ್ಲಿ ಪಾಕ್ ಪರ ಘೋಷಣೆ ಕೂಗಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಯುವತಿ ಅಮೂಲ್ಯಗೆ ಜಾಮೀನು ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಆಕೆಯ ಪರ ವಕೀಲರು ಹಿಂಪಡೆದಿದ್ದಾರೆ.
ಇದನ್ನು ಓದಿ :ದೇಶದ್ರೋಹ ಪ್ರಕರಣ: ಮಾ. 5ರವರೆಗೆ ಅಮೂಲ್ಯಗೆ ನ್ಯಾಯಾಂಗ ಬಂಧನ

ಅಮೂಲ್ಯಳ ನ್ಯಾಯಾಂಗ ಬಂಧನ ಗುರುವಾರಕ್ಕೆ ಮುಕ್ತಾಯವಾದ ಹಿನ್ನೆಲೆಯಲ್ಲಿ ಆಕೆಯನ್ನು ಪರಪ್ಪನ ಅಗ್ರಹಾರದಿಂದಲೇ ವಿಡಿಯೋ ಕಾನ್ಫರೆನ್ಸ್ ಮೂಲಕ ನಗರದ 5ನೇ ಎಸಿಎಂಎಂ ನ್ಯಾಯಾಧೀಶರ ಎದುರು ಹಾಜರುಪಡಿಸಲಾಯಿತು. ಈ ವೇಳೆ ಅಮೂಲ್ಯ ಪರ ವಕೀಲರು ಜಾಮೀನು ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಹಿಂಪಡೆದಿದ್ದರಿಂದ ನ್ಯಾಯಾಲಯ ಆರೋಪಿ ಯುವತಿಗೆ ವಿಧಿಸಿದ್ದ ನ್ಯಾಯಾಂಗ ಬಂಧನವನ್ನು ಮಾ.18ರ ವರೆಗೆ ವಿಸ್ತರಿಸಿ, ವಿಚಾರಣೆ ಮುಂದೂಡಿತು.
ಇದನ್ನು ಓದಿ :ಗೌರಿ ಹತ್ಯೆ ನಂತರ ಹೇರ್ ಸ್ಟೈಲ್ ಬದಲಿಸಿಕೊಂಡಿದ್ದ ಅಮೂಲ್ಯ! 'ಫ್ಯೂಚರ್ ಗೌರಿ' ಆಗಿದ್ದು ಹೇಗೆ?
ಆರೋಪಿ ಅಮೂಲ್ಯ ಲಿಯೋನಾ ವಿರುದ್ಧ ದೇಶದ್ರೋಹ ಆರೋಪ ಪ್ರಕರಣ ದಾಖಲಿಸಿರುವುದರಿಂದ ಹಾಗೂ ಈ ಆರೋಪಕ್ಕೆ ಇರುವ ಶಿಕ್ಷೆ ಪ್ರಮಾಣ ಹೆಚ್ಚಿರುವುದರಿಂದ ಮ್ಯಾಜಿಸ್ಟ್ರೇಟ್ ಕೋರ್ಟ್ಗೆ ಜಾಮೀನು ನೀಡಲು ಅವಕಾಶ ಇಲ್ಲ. ಈ ಹಿನ್ನೆಲೆಯಲ್ಲಿ ಅಮೂಲ್ಯ ಪರ ವಕೀಲರು ಜಾಮೀನು ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಹಿಂಪಡೆದರು.