ಬೆಂಗಳೂರು:ಎಟಿಎಂನಿಂದ ದುಡ್ಡು ತೆಗೆಯುವಾಗ ಎಚ್ಚರ ಇರಲಿ, ಅರೇ ಕಳ್ಳರ ಕಾಟ ನಾ ಅಂತ ಅಂದುಕೊಳ್ಳಬೇಡಿ ಅದಕ್ಕಿಂತ ಅಪಾಯಕಾರಿ ಈ ಕೊರೊನಾ ವೈರಸ್ ಕಾಟ.
ಹೌದು, ಎಟಿಎಂಗಳಿಗೆ ಹೋಗುವ ಮುನ್ನ ಸ್ವಲ್ಪ ಹುಷಾರಾಗಿರಿ. ಯಾಕಂದರೆ ಕೊರೊನಾ ಸರ್ವರೀತಿಯಲ್ಲೂ ವ್ಯಾಪಿಸುತ್ತಿದ್ದು, ಇದೀಗ ಎಟಿಎಂ ಸೆಕ್ಯುರಿಟಿ ಗಾರ್ಡ್ಗೆ ಕೊರೊನಾ ಪಾಸಿಟಿವ್ ಬಂದಿದೆ. ನಂದಿನಿ ಲೇಔಟ್ ನಿವಾಸಿ ಆಗಿರುವ 56 ವರ್ಷದ ಸೆಕ್ಯುರಿಟಿ ಗಾರ್ಡ್ಗೆ ಕೊರೊನಾ ದೃಢವಾಗಿದೆ. ಸೋಂಕಿತರನ್ನ ವಿಕ್ಟೋರಿಯಾ ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿದೆ.
ಎಟಿಎಂ ಒಳಗೆ ಹೋದರೆ ಸ್ಯಾನಿಟೈಸರ್ ಬಳಸಿ, ಸುರಕ್ಷಿತವಾಗಿರಿ. ಬೆಂಗಳೂರಿನ ಶಿವನಗರ ವಾರ್ಡ್ನಲ್ಲಿ ನಾಲ್ಕು ಪಾಸಿಟಿವ್ ಕೇಸ್ಗಳು ದೃಢವಾಗಿವೆ. ಬಾರ್ ಶಾಪ್ ಒಂದರಲ್ಲಿ ಕೆಲಸ ಮಾಡುತ್ತಿದ್ದ 45 ವರ್ಷದ ವ್ಯಕ್ತಿಗೆ ಹಾಗೂ ಮಾರುಕಟ್ಟೆಯಲ್ಲಿ ಅಂಗಡಿ ಇಟ್ಟುಕೊಂಡಿದ್ದ 75 ವರ್ಷದ ಮತ್ತೋರ್ವ ವೃದ್ಧನಿಗೆ ಸೋಂಕು ಹರಡಿದೆ. ಇಬ್ಬರಿಗೂ ಜ್ವರ ಬಂದ ಹಿನ್ನೆಲೆ ಗಂಟಲು ದ್ರವದ ಟೆಸ್ಟ್ ಮಾಡಿಸಲಾಗಿತ್ತು. ಇದೀಗ ಸೋಂಕು ದೃಢವಾಗಿದ್ದು, ವಿಕ್ಟೋರಿಯಾಗೆ ಶಿಫ್ಟ್ ಮಾಡಲಾಗಿದೆ.
ಒಂದೇ ಮನೆಯ ಇಬ್ಬರು ಮಕ್ಕಳಿಗೆ ಸೋಂಕು ಬಂದಿದೆ. 14 ಹಾಗೂ 9 ವರ್ಷದ ಬಾಲಕಿಯರು ಜ್ವರದಿಂದ ಬಳಲುತ್ತಿದ್ದು, ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಪರೀಕ್ಷೆ ವೇಳೆ ಕೊರೊನಾ ದೃಢವಾಗಿದ್ದು, ಅವರನ್ನು ವಿಕ್ಟೋರಿಯಾ ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿದೆ.