ಬೆಂಗಳೂರು :ಬಾಣಸವಾಡಿ ಪೊಲೀಸರು ಯಶಸ್ವಿ ಕಾರ್ಯಾಚರಣೆ ನಡೆಸಿ ಮನೆ ಕಳ್ಳತನ ಮಾಡುತ್ತಿದ್ದ ಆರೋಪಿಯನ್ನು ಬಂಧಿಸಿದ್ದಾರೆ.
ಬೀರೇಂದರ್ ಕುಮಾರ್ ಬಂಧಿತ ಅರೋಪಿ. ಹಲವು ವರ್ಷಗಳಿಂದ ಅಪಾರ್ಟ್‌ಮೆಂಟ್‌ಗಳಲ್ಲಿ ಸೆಕ್ಯುರಿಟಿ ಗಾರ್ಡ್ ಆಗಿ ಕೆಲಸ ಮಾಡುತ್ತಿದ್ದ ಬೀರೇಂದರ್ ಕುಮಾರ್ ತಾನು ಕಾವಲು ಕಾಯುತ್ತಿದ್ದ ಮನೆಗಳಿಗೇ ಕನ್ನ ಹಾಕುತ್ತಿದ್ದ. ಕದ್ದ ಮಾಲುಗಳನ್ನ ಮಾರಲು ಹೋದಾಗ, ಈತನ ಮೇಲೆ ಅನುಮಾನ ಬಂದು, ಈತನನ್ನು ಬಂಧಿಸಲಾಗಿದೆ. ಇನ್ನು ಆರೋಪಿಯನ್ನು ವಿಚಾರಣೆ ನಡೆಸಿದಾಗ ಈತ ನೀಡಿದ ಸುಳಿವಿನ ಮೇರೆಗೆ ಸುಮಾರು 13 ಲಕ್ಷ ರೂ ಬೆಲೆಬಾಳುವ 265 ಗ್ರಾಂ ಚಿನ್ನದ ಒಡವೆ ಮತ್ತು 2.700 ಕೆ.ಜಿ ಬೆಳ್ಳಿ ಒಡವೆಗಳನ್ನ ವಶಕ್ಕೆ ಪಡೆಯಲಾಗಿದೆ.