ಕರ್ನಾಟಕ

karnataka

ETV Bharat / state

ವಿದೇಶಿ ಪುಟ್ಬಾಲ್ ಆಟಗಾರನ‌ ಮನೆಯಲ್ಲಿ ವಜ್ರದ ಉಂಗುರ ಕದ್ದಿದ್ದ ಸೆಕ್ಯೂರಿಟಿ ಗಾರ್ಡ್ ಬಂಧನ - ಸೆಕ್ಯೂರಿಟಿ ಗಾರ್ಡ್ ಬಂಧನ

ಆರೋಪಿ ಅನ್ನಪೂರ್ಣೇಶ್ವರಿ ನಗರದಲ್ಲಿ ಮೊಬೈಲ್ ಅಂಗಡಿಯಲ್ಲಿ ಕಳ್ಳತನ ಮಾಡಿದ್ದ. ಪ್ರಕರಣ ದಾಖಲಿಸಿಕೊಂಡು ಆರೋಪಿಗಾಗಿ ಶೋಧ ನಡೆಸುತ್ತಿದ್ದರು. ಆದರೆ ಕದ್ದಿದ್ದ ಮೊಬೈಲ್​ಗಳನ್ನು ಮಾರಾಟ ಮಾಡುವಾಗ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದು, ವಜ್ರದ ಉಂಗುರವನ್ನು ಈತನೆ ಕದ್ದಿರುವುದಾಗಿ ವಿಚಾರಣೆ ವೇಳೆ ಒಪ್ಪಿಕೊಂಡಿದ್ದಾರೆ.

Security guard arrested
ಸೆಕ್ಯೂರಿಟಿ ಗಾರ್ಡ್ ಬಂಧನ

By

Published : Nov 15, 2021, 3:19 AM IST

ಬೆಂಗಳೂರು: ನಗರದಲ್ಲಿ ವಾಸಿಸುತ್ತಿದ್ದ ವಿದೇಶಿ ಪುಟ್ಬಾಲ್ ಆಟಗಾರನ(foreign player) ಮನೆಗೆ ನುಗ್ಗಿ 25 ಲಕ್ಷ ಮೌಲ್ಯದ ವಜ್ರದ ಉಂಗುರ ಕದ್ದಿದ್ದ(diamond ring) ಸೆಕ್ಯೂರಿಟಿ ಗಾರ್ಡ್(Security guard) ನನ್ನು ಅನ್ನಪೂರ್ಣೇಶ್ವರಿ ನಗರ ಪೊಲೀಸರು ಬಂಧಿಸಿದ್ದಾರೆ.‌

ಬೆಂಗಳೂರು ಗ್ರಾಮಾಂತರ ಜಿಲ್ಲೆ ವಿಶ್ವನಾಥಪುರ ಪೊಲೀಸ್ ಠಾಣೆ ವ್ಯಾಪ್ತಿಯ, ನಂದಿ ರಸ್ತೆಯ ಪ್ರೆಸ್ಟಿಜ್ ಗಾಲ್ಫ್ ಶೈರ್​ನಲ್ಲಿ ವಿಲ್ಲಾ ಹೊಂದರಲ್ಲಿ ವಾಸವಾಗಿದ್ದ ವಿದೇಶಿ ಫುಟ್​ಬಾಲ್​ ಆಟಗಾರ ವಾಸವಾಗಿದ್ದರು. ಇದೇ ವಿಲ್ಲಾಗೆ ಸೆಕ್ಯೂರಿಟಿ ಗಾರ್ಡ್​ಆಗಿ ಕೆಲಸ ಮಾಡುತ್ತಿದ್ದ ಆರೋಪಿ ಮಂಜುನಾಥ ಕಳೆದ ಆ.28 ಕ್ಕೆ ವಿಲ್ಲಾ ನುಗ್ಗಿ 25 ಲಕ್ಷ ಮೌಲ್ಯದ ಮೂರು ವಜ್ರದುಂಗುರ ಕದ್ದು ಪರಾರಿಯಾಗಿದ್ದ. ಈ ಸಂಬಂಧ ವಿಶ್ವನಾಥಪುರ ಪೊಲೀಸ್ ಠಾಣೆಯಲ್ಲಿ ಕಳ್ಳತನ ಪ್ರಕರಣ ದಾಖಲಾಗಿತ್ತು‌.

ನಂತರ ಆರೋಪಿ ಮತ್ತೊಂದೆಡೆ ಅನ್ನಪೂರ್ಣೇಶ್ವರಿ ನಗರದಲ್ಲಿ ಮೊಬೈಲ್ ಅಂಗಡಿಯಲ್ಲಿ ಕಳ್ಳತನ ಮಾಡಿದ್ದ. ಪ್ರಕರಣ ದಾಖಲಿಸಿಕೊಂಡು ಆರೋಪಿಗಾಗಿ ಶೋಧ ನಡೆಸುತ್ತಿದ್ದರು. ಆದರೆ ಕದ್ದಿದ್ದ ಮೊಬೈಲ್​ ಫೋನ್​ಗಳನ್ನು ಮಾರಾಟ ಮಾಡುವಾಗ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾನೆ. ನಂತರ ವಿಚಾರಣಗೆ ಒಳಪಡಿಸಿದಾಗ ಈತನೇ 3 ತಿಂಗಳ ಹಿಂದೆ ಫುಟ್​ಬಾಲ್ ಆಟಗಾರನ ಮನೆಯಲ್ಲಿ ವಜ್ರದುಂಗುರಗಳನ್ನು ಕದ್ದಿರುವುದನ್ನು ಬಾಯಿಬಿಟ್ಟಿದ್ದು, ಅವುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ನಗರ ಪಶ್ಚಿಮ ವಿಭಾಗದ ಡಿಸಿಪಿ ಸಂಜೀವ ಪಾಟೀಲ್ ತಿಳಿಸಿದ್ದಾರೆ.

ಕಳ್ಳಕಾಕರಿಂದ ರಕ್ಷಣೆ ಸಿಗಲೆಂದು ಸೆಕ್ಯೂರಿಟಿ ಗಾರ್ಡ್ ನೇಮಕ ಮಾಡಿಕೊಳ್ಳುತ್ತಾರೆ. ಆದರೆ ಈ ಪ್ರಕರಣದಲ್ಲಿ ರಕ್ಷಣೆ ಮಾಡಲೆಂದು ನೇಮಕ ಮಾಡಿಕೊಂಡಿದ್ದ ಸೆಕ್ಯುರಿಟಿ ಗಾರ್ಡ್​ ಮನೆಗೆ ಕನ್ನ ಹಾಕಿರುವುದು ಬೇಲಿಯೇ ಎದ್ದು ಹೊಲ ಮೇಯ್ದ ಆಗಿದೆ.

ಇದನ್ನು ಓದಿ:ಒಂದೇ ಕುಟುಂಬದ ನಾಲ್ವರನ್ನು ನೇಣಿಗೇರಿಸಿದ ನಕ್ಸಲರು.. ಪೊಲೀಸರಿಗೆ ಮಾಹಿತಿ ನೀಡಿದ್ದಕ್ಕೆ ಪ್ರತೀಕಾರ!

ABOUT THE AUTHOR

...view details