ಕರ್ನಾಟಕ

karnataka

ETV Bharat / state

ಬಿಎಂಟಿಸಿ ಬಸ್ ಮೇಲೆ ಬಿದ್ದ ರೈಲ್ವೆ ಅಂಡರ್ ಪಾಸ್​ಗೆ ಹಾಕಿದ್ದ ಕಬ್ಬಿಣದ ಸೆಕ್ಯೂರ್ ಪ್ಲೇಟ್: ತಪ್ಪಿದ ದುರಂತ - Anand Rao Circle

ಸೆಕ್ಯೂರ್ ಪ್ಲೇಟ್​​ಗೆ ಬಿಎಂಟಿಸಿ ವೋಲ್ವೊ ಬಸ್ ಗುದ್ದಿ ಅದು ಕಳಚಿ ಬಿದ್ದಿರುವ ಶಂಕೆ ವ್ಯಕ್ತವಾಗಿದೆ. ಈಗಲೂ ವಾಹನ ಸವಾರರು ಅದೇ ರಸ್ತೆ ಮಾರ್ಗವಾಗಿ ಓಡಾಡುತ್ತಿದ್ದಾರೆ. ಸ್ಥಳಕ್ಕೆ ಪೊಲೀಸ್ ಹಾಗೂ ಅಧಿಕಾರಿಗಳ ತಂಡ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.

secure-plate-of-railway-underpass-iron-fell-on-a-bmtc-bus
ಕಬ್ಬಿಣದ ಸೆಕ್ಯೂರ್ ಪ್ಲೇಟ್

By

Published : Oct 24, 2021, 7:47 PM IST

ಬೆಂಗಳೂರು: ಶೇಷಾದ್ರಿಪುರಂ ರೈಲ್ವೆ ಅಂಡರ್ ಪಾಸ್​ನಲ್ಲಿ ರೈಲ್ವೆ ಬ್ರಿಡ್ಜ್ ಕೆಳಗೆ ಹಾಕಿರುವ ಕಬ್ಬಿಣದ ಶೀಟ್ ಏಕಾಏಕಿ ಕುಸಿದು ಬಿದ್ದಿದೆ. ಅದೃಷ್ಟವಶಾತ್ ಭಾರಿ ದುರಂತ ತಪ್ಪಿದೆ.

ನಗರದ ಆನಂದ್ ರಾವ್ ಸರ್ಕಲ್ ಹಾಗೂ ಶೇಷದ್ರಿಪುರಂಗೆ ಹೋಗುವ ರೈಲ್ವೆ ಅಂಡರ್ ಪಾಸ್​ನಲ್ಲಿ ಘಟನೆ ಜರುಗಿದೆ. ಚಲಿಸುವ ರೈಲಿನಿಂದ ಮಲಮೂತ್ರ ರಸ್ತೆಗೆ ಬೀಳದಂತೆ ತಡೆಯಲು ಹಾಕಿದ್ದ ಸೆಕ್ಯೂರ್ ಪ್ಲೇಟ್ ಕಳಚಿಕೊಂಡು ಬಿಎಂಟಿಸಿ ಬಸ್ ಮೇಲೆ ಬಿದ್ದಿದೆ. ಈ ವೇಳೆ ಅದೃಷ್ಟವಶಾತ್ ವಾಹನ ಸವಾರರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಯಾವುದೇ ದುರ್ಘಟನೆ ಸಂಭವಿಸಿಲ್ಲ ಎಂದು ಸ್ಥಳಕ್ಕೆ ಭೇಟಿ ನೀಡಿದ ಪೊಲೀಸರು ತಿಳಿಸಿದ್ದಾರೆ.

ಬಿಎಂಟಿಸಿ ಬಸ್ ಮೇಲೆ ಬಿದ್ದ ರೈಲ್ವೆ ಅಂಡರ್ ಪಾಸ್​ಗೆ ಹಾಕಿದ್ದ ಕಬ್ಬಿಣದ ಸೆಕ್ಯೂರ್ ಪ್ಲೇಟ್

ಸೆಕ್ಯೂರ್ ಪ್ಲೇಟ್​​ಗೆ ಬಿಎಂಟಿಸಿ ವೋಲ್ವೊ ಬಸ್ ಗುದ್ದಿ ಅದು ಕಳಚಿ ಬಿದ್ದಿರುವ ಶಂಕೆ ವ್ಯಕ್ತವಾಗಿದೆ. ಈಗಲೂ ವಾಹನ ಸವಾರರು ಅದೇ ರಸ್ತೆ ಮಾರ್ಗವಾಗಿ ಓಡಾಡುತ್ತಿದ್ದಾರೆ. ಸ್ಥಳಕ್ಕೆ ಪೊಲೀಸ್ ಹಾಗೂ ಅಧಿಕಾರಿಗಳ ತಂಡ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.

ಸಾರ್ವಜನಿಕರ ಆಕ್ರೋಶ: ದಿನಕ್ಕೆ ಸಾವಿರಾರು ಜನರು ಓಡಾಡುವ ಮುಖ್ಯ ರಸ್ತೆಯಲ್ಲಿ ಅಧಿಕಾರಿಗಳು ಈ ರೀತಿ ನಿರ್ಲಕ್ಷ್ಯ ತೋರುವುದು ಸರಿಯಲ್ಲ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಓದಿ:ನಿಗಮ ಮಂಡಳಿ ಜೇನುಗೂಡಿಗೆ ಕೈಹಾಕಲು ಮುಂದಾದ ಸಿಎಂ: ಉಪ ಸಮರದ ನಂತರ ಮೇಜರ್ ಸರ್ಜರಿ!

ABOUT THE AUTHOR

...view details