ಬೆಂಗಳೂರು: ರೂಪಾಂತರ ಕೊರೊನಾ ವೈರಸ್ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಸರ್ಕಾರ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿದೆ. ಇನ್ನು ಈ ವಿಚಾರದಿಂದಲೇ ಹೊಸ ವರ್ಷಾಚರಣೆಗೆ ಬ್ರೇಕ್ ಹಾಕಲಾಗಿದೆ. ನಗರದೆಲ್ಲೆಡೆ 144 ಸೆಕ್ಷನ್ ಜಾರಿ ಮಾಡಲಾಗಿದ್ದು, ವಿನಾಕಾರಣ ಜನ ಓಡಾಡಿದರೆ ಶಿಕ್ಷೆ ಖಚಿತ ಎಂದು ಪೊಲೀಸರು ಸಾರಿ ಸಾರಿ ಹೇಳುತ್ತಿದ್ದಾರೆ.
ಈಗಾಗಲೇ ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ಅವರು ನಿಷೇಧಾಜ್ಞೆ ಜಾರಿ ಮಾಡಿ ಆದೇಶ ಹೊರಡಿಸಿದ್ದಾರೆ. ಹೊಸ ವರ್ಷದ ಸಂಭ್ರಮಕ್ಕೆ ನಿಷೇಧಾಜ್ಞೆ ಇರುವ ಕಾರಣ ಏನು ಮಾಡಬೇಕು, ಮಾಡಬಾರದು ಎಂಬುದರ ಬಗ್ಗೆ ಸ್ಪೀಕರ್ ಮೈಕ್ ಮೂಲಕ ತಿಳಿಸುತ್ತಿದ್ದಾರೆ.