ಕರ್ನಾಟಕ

karnataka

ETV Bharat / state

ಬಿಬಿಎಂಪಿ ಸ್ಥಾಯಿ ಸಮಿತಿ ಚುನಾವಣೆ: ಸೋಮವಾರ ಬಿಬಿಎಂಪಿ ಕೇಂದ್ರ ಕಚೇರಿ ಬಳಿ 144 ಸೆಕ್ಷನ್​​​ ಜಾರಿ - BBMP latest news

ಸೋಮವಾರ ಬಿಬಿಎಂಪಿಯ 12 ಸ್ಥಾಯಿ ಸಮಿತಿ ಚುನಾವಣೆ ನಿಗದಿ ಹಿನ್ನೆಲೆಯಲ್ಲಿ‌‌ ಬಿಬಿಎಂಪಿ ಕೇಂದ್ರ ಕಚೇರಿ ಬಳಿ 144 ಸೆಕ್ಷನ್ ಜಾರಿಯಾಗಲಿದೆ.

BBMP
ಬಿಬಿಎಂಪಿ

By

Published : Dec 28, 2019, 8:18 PM IST

ಬೆಂಗಳೂರು: ಇದೇ ಸೋಮವಾರ (ಡಿ. 31) ಬಿಬಿಎಂಪಿಯ 12 ಸ್ಥಾಯಿ ಸಮಿತಿಗಳಿಗೆ ಚುನಾವಣೆ ನಿಗದಿ ಹಿನ್ನೆಲೆಯಲ್ಲಿ‌‌ ಬಿಬಿಎಂಪಿ‌ ಕಚೇರಿಯ 200 ಮೀಟರ್ ವ್ಯಾಪ್ತಿಯಲ್ಲಿ 144 ಸೆಕ್ಷನ್ ಜಾರಿಯಾಗಲಿದೆ.

ಅಂದು ಬೆಳಗ್ಗೆ 7 ಗಂಟೆಯಿಂದ ಸಂಜೆ 6ರವರೆಗೆ ನಿಷೇಧಾಜ್ಞೆ ಜಾರಿಯಾಗಲಿದೆ ಎಂದು‌‌ ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಆದೇಶದಲ್ಲಿ ತಿಳಿಸಿದ್ದಾರೆ.

ನಿಷೇಧಾಜ್ಞೆ ಜಾರಿ ಹಿನ್ನೆಲೆಯಲ್ಲಿ ಐದಕ್ಕಿಂತ ಹೆಚ್ಚು‌ ಜನರು ಸೇರುವಂತಿಲ್ಲ. ಯಾವುದೇ ಆಯುಧಗಳು‌‌ ಇಟ್ಟುಕೊಳ್ಳುವಂತಿಲ್ಲ. ಅಲ್ಲದೆ ಪ್ರತಿಭಟನೆ, ಸಮಾರಂಭ, ಮೆರವಣಿಗೆ, ಧರಣಿ ಸೇರಿದಂತೆ ಯಾವುದೇ ರೀತಿಯ ಪ್ರತಿಭಟನೆಗಳು ಮಾಡುವಂತಿಲ್ಲ.‌‌ ಒಂದು ವೇಳೆ ಕಾನೂನು‌ ಉಲ್ಲಂಘಿಸಿದರೆ‌ ಕ್ರಮ ಕೈಗೊಳ್ಳಲಾಗುವುದು ಎಂದು‌ ಆಯುಕ್ತರು ಎಚ್ಚರಿಕೆ ನೀಡಿದ್ದಾರೆ.

ABOUT THE AUTHOR

...view details