ಕರ್ನಾಟಕ

karnataka

ETV Bharat / state

ಬೆಂಗಳೂರಿನಲ್ಲಿ ಕೊವಿಡ್ ಸ್ಫೋಟ: ಒಂದು ತಿಂಗಳವರೆಗೆ ನಗರದಲ್ಲಿ ನಿಷೇಧಾಜ್ಞೆ - ಪ್ರತಿಬಂಧಕಾಜ್ಞೆ ಜಾರಿ ನ್ಯೂಸ್​

ಬೆಂಗಳೂರನ್ನು ಬಿಡದೆ ಬಾಧಿಸುತ್ತಿರುವ ಕೊರೊನಾ ಮಹಾಮಾರಿಯನ್ನು ನಿಯಂತ್ರಿಸಲು ರಾಜ್ಯ ಪೊಲೀಸ್​ ಇಲಾಖೆ ಮುಂದಾಗಿದೆ. ಅದಕ್ಕಾಗಿ 26/06/2020 ರಿಂದ 26/07/2020 ರ ಮಧ್ಯರಾತ್ರಿ 12 ರವರೆಗೂ ಒಟ್ಟು 30 ದಿನಗಳಿಗೆ ಅನ್ವಯ ಆಗುವಂತೆ ಪ್ರತಿಬಂಧಕಾಜ್ಞೆ ಹೊರಡಿಸಲಾಗಿದೆ.

bengaluru
ಸೆ. 144 ಜಾರಿಗೊಳಿಸಿದ ಪೊಲೀಸ್​ ಇಲಾಖೆ

By

Published : Jun 28, 2020, 1:52 PM IST

ಬೆಂಗಳೂರು: ಕೋವಿಡ್ ಮಹಾಮಾರಿ ತಲ್ಲಣ ಸೃಷ್ಟಿಸಿರುವ ಕಾರಣ ಬೆಂಗಳೂರಿನಾದ್ಯಂತ ಒಂದು ತಿಂಗಳ ಕಾಲ ನಿಷೇಧಾಜ್ಞೆ ಹೇರಲಾಗಿದೆ.

ದಿನಾಂಕ 26/06/2020 ರಿಂದ 26/07/2020 ರ ಮಧ್ಯರಾತ್ರಿ 12 ರವರೆಗೂ ಒಟ್ಟು 30 ದಿನಗಳಿಗೆ ಅನ್ವಯ ಆಗುವಂತೆ ಪ್ರತಿಬಂಧಕಾಜ್ಞೆಯನ್ನು ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಜಾರಿ ಮಾಡಿದ್ದಾರೆ.

ಈ ಸಂದರ್ಭದಲ್ಲಿ ಸಾರ್ವಜನಿಕರು ಈ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು:

1. ಸಾರ್ವಜನಿಕರು ಕಡ್ಡಾಯವಾಗಿ ಬಾಯಿ ಹಾಗೂ ‌ಮೂಗು ಮುಚ್ಚಿಕೊಳ್ಳುವಂತೆ ಮಾಸ್ಕ್ ಧರಿಸಬೇಕು.

2. ಪ್ರತಿಯೊಬ್ಬ ವ್ಯಕ್ತಿಯು ಮತ್ತೊಬ್ಬ ವ್ಯಕ್ತಿಯ ಜೊತೆ ಕನಿಷ್ಠ ಒಂದು ಮೀಟರ್ ನಷ್ಟು ಸಮಾಜಿಕ ಅಂತರ ಕಾಯ್ದುಕೊಳ್ಳಬೇಕು.
3. ಯಾವುದೇ ಒಳಾಂಗಣ ಕಾರ್ಯಕ್ರಮಗಳಲ್ಲಿ 20ಕ್ಕೂ ಮೀರಿ ಜನ ಸೇರುವಂತಿಲ್ಲ. ಒಂದು ವೇಳೆ‌ ನಿಯಮ ಉಲ್ಲಂಘನೆಯಾದಲ್ಲಿ ಕಾನೂನು ರೀತಿ ಅಂದ್ರೆ ಎ.ನ್.ಡಿ.ಎಂ.ಎ (ರಾಷ್ಟ್ರಿಯ ವಿಪತ್ತು ನಿರ್ವಹಣಾ ಕಾಯ್ದೆ ) ಅಡಿ ಹಾಗೂ ಐಪಿಸಿ ಸೆಕ್ಷನ್ 188 ರ ಅಡಿಯಲ್ಲಿ ಕ್ರಮ ಕೈಗೊಳ್ಳಲು ಪೊಲೀಸರು ಮುಂದಾಗಿದ್ದಾರೆ.

ABOUT THE AUTHOR

...view details