ದೊಡ್ಡಬಳ್ಳಾಪುರ:ಗ್ರಾಮ ಪಂಚಾಯತ್ ಚುನಾವಣೆ ಕಣ ರಂಗೇರಿದ್ದು ವಿಧಾನಸಭೆ ಚುನಾವಣೆಗೆ ಸಡ್ಡು ಹೊಡೆಯುವಂತಿದೆ. ನಾಮಪತ್ರ ಸಲ್ಲಿಸಲು ಬರುತ್ತಿರುವ ಅಭ್ಯರ್ಥಿಗಳ ಅಬ್ಬರ ಜೋರಾಗಿದೆ.
ಎರಡನೇ ಹಂತದ ಗ್ರಾ.ಪಂ. ಚುನಾವಣೆಗೆ ನಾಮಪತ್ರ ಸಲ್ಲಿಕೆಗೆ ಕೊನೆಯ ದಿನವಾದ ಬುಧವಾರ ಚುನಾವಣೆ ಅಬ್ಬರ ಜೋರಾಗಿತ್ತು. ದೊಡ್ಡಬಳ್ಳಾಪುರ ತಾಲೂಕಿನ ಹಣಬೆ ಗ್ರಾಮ ಪಂಚಾಯತ್ ವ್ಯಾಪ್ತಿಯ ನೇರಳೆಘಟ್ಟದ ಗ್ರಾಮದ ಅಭ್ಯರ್ಥಿಗಳು ನಿನ್ನೆ ನಾಮಪತ್ರ ಸಲ್ಲಿಸಿದರು. ನಾಮಪತ್ರ ಸಲ್ಲಿಕೆಗೂ ಮುನ್ನ ಗ್ರಾಮದಲ್ಲಿ ಮೆರವಣಿಗೆ ಮಾಡಲಾಯಿತು. ಮೆರವಣಿಗೆಗೆ ಮೆರುಗು ನೀಡಲು ತಮಟೆಯ ಆರ್ಭಟ ಕಂಡು ಬಂತು. ನೇರಳೆಘಟ್ಟ ಗ್ರಾಮದಿಂದ ಹಣಬೆ ಗ್ರಾಮ ಪಂಚಾಯಿತಿವರೆಗೆ ಸುಮಾರು 5 ಕಿ.ಮೀ ವರೆಗೂ ಅಭ್ಯರ್ಥಿಗಳನ್ನು ಮೆರವಣಿಗೆಯಲ್ಲಿ ಕರೆತರಲಾಯಿತು.