ಕರ್ನಾಟಕ

karnataka

ETV Bharat / state

ಬಿ.ಇಡಿ ದಾಖಲಾತಿಯ ಎರಡನೇ ಸುತ್ತಿನ ಕೌನ್ಸೆಲಿಂಗ್ ಜನವರಿ 6 ರಿಂದ ಶುರು - ಬಿ.ಇಡಿ ಸಂಸ್ಥೆಗಳಲ್ಲಿ ಲಭ್ಯವಿರುವ ಪ್ರವರ್ಗವಾರು ಸೀಟುಗಳು

ಪ್ರಥಮ ಸುತ್ತಿನ ಬಿ.ಇಡಿ ಕೌನ್ಸೆಲಿಂಗ್​​ ಕಳೆದ ಡಿಸೆಂಬರ್ 21‌ರಿಂದ ಶುರುವಾಗಿದ್ದು, ಜನವರಿ 05 ರವರೆಗೆ ಆಯೋಜಿಸಿದೆ. ಎರಡನೇ ಸುತ್ತಿನ ಕೌನ್ಸಿಲಿಂಗ್‌ ಅನ್ನು ಜನವರಿ 6 ರಿಂದ 12 ರ ವರೆಗೆ ಕೇಂದ್ರೀಕೃತ ದಾಖಲಾತಿ ಘಟಕದಲ್ಲಿ ಆಯೋಜಿಸಲಾಗಿದೆ.

ಎರಡನೇ ಸುತ್ತಿನ ಕೌನ್ಸಿಲಿಂಗ್ ಆರಂಭ
ಎರಡನೇ ಸುತ್ತಿನ ಕೌನ್ಸಿಲಿಂಗ್ ಆರಂಭ

By

Published : Jan 3, 2022, 6:59 PM IST

ಬೆಂಗಳೂರು: 2021-22ರ ಬಿ.ಇಡಿ ದಾಖಲಾತಿಗೆ ಸಂಬಂಧಿಸಿದಂತೆ ಎರಡನೇ ಸುತ್ತಿನ ಸೀಟು ಹಂಚಿಕೆಯ ಕೌನ್ಸೆಲಿಂಗ್ ಅನ್ನು ಜನವರಿ 6 ರಿಂದ ನಡೆಸಲಾಗುತ್ತಿದೆ.

ಪ್ರಥಮ ಸುತ್ತಿನ ಬಿ.ಇಡಿ ಕೌನ್ಸೆಲಿಂಗ್​​ ಕಳೆದ ಡಿಸೆಂಬರ್ 21‌ರಿಂದ ಶುರುವಾಗಿದ್ದು, ಜನವರಿ 05 ರವರೆಗೆ ಆಯೋಜಿಸಿದೆ. ಬಳಿಕ ಎರಡನೇ ಸುತ್ತಿನ ಕೌನ್ಸೆಲಿಂಗ್‌ ಅನ್ನು ಜನವರಿ 6 ರಿಂದ 12 ರವರೆಗೆ ಕೇಂದ್ರೀಕೃತ ದಾಖಲಾತಿ ಘಟಕದಲ್ಲಿ ಆಯೋಜಿಸಲಾಗಿದೆ.

ಈ ದಿನಗಳಲ್ಲಿ ಕೌನ್ಸೆಲಿಂಗ್‌ಗೆ ಭಾಗವಹಿಸಲು ಆಯ್ಕೆಯಾಗಿರುವ ಅಭ್ಯರ್ಥಿಗಳ ಪಟ್ಟಿಯನ್ನು ಇಲಾಖಾ ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾಗಿದೆ. ಅರ್ಹತಾ ಪಟ್ಟಿಯಲ್ಲಿದ್ದು, ಸಂಬಂಧಪಟ್ಟ ವ್ಯವಸ್ಥಾಪಕ ಕೇಂದ್ರಗಳಲ್ಲಿ ನಿಗದಿತ ದಿನಾಂಕದೊಳಗೆ ಮೂಲ ದಾಖಲೆಗಳ ಪರಿಶೀಲನೆಗೆ ಗೈರುಹಾಜರಾದ ಅಭ್ಯರ್ಥಿಗಳಿಗೂ ಸಹ ಕೇಂದ್ರೀಕೃತ ದಾಖಲಾತಿ ಘಟಕದಲ್ಲೇ ಮೂಲದಾಖಲೆಗಳ ಪರಿಶೀಲನೆಗೆ ಅವಕಾಶ ಕಲ್ಪಿಸಲಾಗುತ್ತದೆ. ಅಲ್ಲೇ ಕೌನ್ಸೆಲಿಂಗ್ ನೀಡಲಾಗುತ್ತೆ, ಆದರೆ ಈ ಅಭ್ಯರ್ಥಿಗಳಿಗೆ ವೇಳಾಪಟ್ಟಿಯಲ್ಲಿ ನಿಗದಿಪಡಿಸಿರುವ ದಿನಾಂಕಗಳಂದು ಪರಿಶೀಲನೆಗೆ ಹಾಜರಾದಲ್ಲಿ ಮಾತ್ರ ಪರಿಗಣಿಸಲಾಗುತ್ತದೆ ಎಂದು ಆದೇಶ ಹೊರಡಿಸಲಾಗಿದೆ.

ಇದನ್ನೂ ಓದಿ: ಮಾಜಿ ಶಾಸಕ ಬಿ.ಎಂ.ಇದಿನಬ್ಬ ಪುತ್ರನ ಮನೆ ಮೇಲೆ NIA ದಾಳಿ; ಮೊಮ್ಮಗನ ಪತ್ನಿ ದೀಪ್ತಿ ಮರಿಯಂ ಬಂಧನ

ಇನ್ನು ಕೌನ್ಸೆಲಿಂಗ್‌ಗೆ ವಿವಿಧ ಜಿಲ್ಲೆಗಳ ಬಿ.ಇಡಿ ಸಂಸ್ಥೆಗಳಲ್ಲಿ ಲಭ್ಯವಿರುವ ಪ್ರವರ್ಗವಾರು ಸೀಟುಗಳ ಸಂಖ್ಯೆಯನ್ನು ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾಗುತ್ತದೆ. ಪ್ರತಿನಿತ್ಯ ಕೌನ್ಸೆಲಿಂಗ್ ಮುಗಿದ ನಂತರ ಉಳಿಕೆ ಸೀಟುಗಳ ಮಾಹಿತಿಯನ್ನು ವೆಬ್‌ಸೈಟ್‌ನಲ್ಲಿ ಹಾಗೂ ಆಯಾ ದಿನ ಬೆಳಿಗ್ಗೆ ಕೇಂದ್ರೀಕೃತ ದಾಖಲಾತಿ ಘಟಕದ ಪ್ರಕಟಣಾ ಫಲಕದಲ್ಲಿ ಪ್ರಕಟಿಸಲಾಗುತ್ತದೆ. ಇಂದು ಇಲಾಖಾ ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾದ ಪಟ್ಟಿಯಲ್ಲಿ ಹೆಸರಿರುವ ಅಭ್ಯರ್ಥಿಗಳು ಮಾತ್ರ ಕೌನ್ಸಿಲಿಂಗ್‌ಗೆ ಹಾಜರಾಗಲು ಅರ್ಹತೆ ಹೊಂದಿದ್ದು, ಅಂತಹವರು ಕೌನ್ಸೆಲಿಂಗ್‌ನಲ್ಲಿ ಭಾಗವಹಿಸುವ ಮೊದಲು ಸೀಟುಗಳು ಲಭ್ಯವಿರುವ ಜಿಲ್ಲೆ ಮತ್ತು ಕಾಲೇಜುಗಳನ್ನು ಪರಿಶೀಲಿಸಿ, ತಮ್ಮ ಸ್ವಂತ ಜವಾಬ್ದಾರಿಯ ಮೇಲೆ ಹಾಜರಾಗುವಂತೆ ಸೂಚಿಸಲಾಗಿದೆ. ಹೆಚ್ಚಿನ ಮಾಹಿತಿಗಾಗಿ ಇಲಾಖಾ ವೆಬ್‌ಸೈಟ್ www.schooleducation.kar.nic Inನ್ನು ವೀಕ್ಷಿಸುವುದು.

For All Latest Updates

TAGGED:

ABOUT THE AUTHOR

...view details