ಕರ್ನಾಟಕ

karnataka

ದ್ವಿತೀಯ ಪಿಯು ಫಲಿತಾಂಶ ತಿರಸ್ಕರಿಸಿ ಪರೀಕ್ಷೆ ಬರೆದಿದ್ದ ವಿದ್ಯಾರ್ಥಿಗಳ ರಿಸಲ್ಟ್​ ಇಂದು ಪ್ರಕಟ

By

Published : Sep 20, 2021, 7:03 AM IST

ದ್ವಿತೀಯ ಪಿಯುಸಿ ಪರೀಕ್ಷೆ ಫಲಿತಾಂಶ ತಿರಸ್ಕರಿಸಿದ್ದ ವಿದ್ಯಾರ್ಥಿಗಳ ರಿಸಲ್ಟ್​ ಇಂದು ಪ್ರಕಟವಾಗಲಿದೆ.‌ ಸಚಿವ ನಾಗೇಶ್ ವಿಧಾನಸೌಧದಲ್ಲಿ ಬೆಳಗ್ಗೆ 10:30ಕ್ಕೆ ಪ್ರಕಟಿಸಲಿದ್ದಾರೆ.‌ ಇಲಾಖೆಯ http:/karresults.nic.in ಈ ಲಿಂಕ್ ಮೂಲಕ ದ್ವಿತೀಯ ಪಿಯುಸಿ ಫಲಿತಾಂಶವನ್ನು ಪಡೆಯಬಹುದಾಗಿದೆ.

second-puc-students-result-will-out-on-september-20th
second-puc-students-result-will-out-on-september-20th

ಬೆಂಗಳೂರು:ಸಾಂಕ್ರಾಮಿಕ ಕೊರೊನಾ ರೋಗದಿಂದಾಗಿ ಇದೇ ಮೊದಲು ದ್ವಿತೀಯ ಪಿಯುಸಿ ಪರೀಕ್ಷೆ ರದ್ದು ಮಾಡಿ ಎಲ್ಲರನ್ನು ಪಾಸ್ ಮಾಡಲಾಗಿತ್ತು. ಇತ್ತ ಫಲಿತಾಂಶ ತೃಪ್ತಿ ನೀಡದೇ ಇದ್ದರೆ ಪರೀಕ್ಷೆಯನ್ನ ಬರೆಯಬಹುದು ಅಂತ ಪಿಯು ಬೋರ್ಡ್ ತಿಳಿಸಿತ್ತು. ಅದರಂತೆ ಫಲಿತಾಂಶ ತಿರಸ್ಕರಿಸಿದವರಿಗೆ ಆಗಸ್ಟ್ 19ರಿಂದ ಸೆಪ್ಟೆಂಬರ್ 3ರವರೆಗೆ ದ್ವಿತೀಯ ಪಿಯುಸಿ ಪರೀಕ್ಷೆ ನಡೆಸಲಾಗಿತ್ತು.

ರಾಜ್ಯದಲ್ಲಿ ಒಟ್ಟಾರೆ 18,414 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು, ಅದರಲ್ಲಿ 17,469 ಖಾಸಗಿ ವಿದ್ಯಾರ್ಥಿಗಳು ಪರೀಕ್ಷೆಯನ್ನು ಬರೆದಿದ್ದರು. 352 ಪುನರಾವರ್ತಿತ, 593 ಫ್ರೆಶರ್ಸ್ ಪರೀಕ್ಷೆಯನ್ನ ಎದುರಿಸಿದ್ದರು. ತಾಲೂಕಿಗೆ ಒಂದರಂತೆ ಹಾಗೂ ಜಿಲ್ಲಾ ಕೇಂದ್ರಗಳಲ್ಲಿ ಒಂದಕ್ಕಿಂತ ಹೆಚ್ಚು ಪರೀಕ್ಷಾ ಕೇಂದ್ರ ಮಾಡಿ, ಒಟ್ಟು 187 ಕೇಂದ್ರಗಳಲ್ಲಿ ಪರೀಕ್ಷೆ ನಡೆಸಲಾಗಿತ್ತು.

ಇದೀಗ ಫಲಿತಾಂಶ ತಿರಸ್ಕರಿಸಿದ್ದ ವಿದ್ಯಾರ್ಥಿಗಳ ರಿಸಲ್ಟ್​ ಇಂದು ಪ್ರಕಟವಾಗಲಿದೆ.‌ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ನಾಗೇಶ್ ವಿಧಾನಸೌಧದಲ್ಲಿ ಸೋಮವಾರ ಬೆಳಗ್ಗೆ 10:30ಕ್ಕೆ ಪ್ರಕಟಿಸಲಿದ್ದಾರೆ.‌ ಇಲಾಖೆಯ http:/karresults.nic.in ಈ ಲಿಂಕ್ ಮೂಲಕ ದ್ವಿತೀಯ ಪಿಯುಸಿ ಫಲಿತಾಂಶವನ್ನು ಪಡೆಯಬಹುದಾಗಿದೆ

ಈ ಬಾರಿಯ ಪರೀಕ್ಷೆಗೆ ನೋಂದಾಯಿಸಿದ್ದ ಹೊಸ ವಿದ್ಯಾರ್ಥಿಗಳು, ಪುನರಾವರ್ತಿತ ಹಾಗೂ ಖಾಸಗಿ ಅಭ್ಯರ್ಥಿಗಳಿಗೆ ವಾರ್ಷಿಕ ಪರೀಕ್ಷೆ ಕ್ರಮವಾಗಿ ನಡೆಸಲಾಗಿದೆ. ಹಳೆಯ ಪದ್ಧತಿಯಂತೆ ಪ್ರಶ್ನೆ ಪತ್ರಿಕೆ ಮಾದರಿಯಲ್ಲಿ ಯಾವುದೇ ಬದಲಾವಣೆಗಳು ಇಲ್ಲದೇ ಪರೀಕ್ಷೆ ನಡೆದಿದೆ. ಪರೀಕ್ಷೆಗೆ ಹಾಜರಾದ ಅಭ್ಯರ್ಥಿಗಳನ್ನ ಫ್ರೆಷರ್ ಎಂದು ಪರಿಗಣಿಸಲಾಗುತ್ತದೆ.

ಇದನ್ನೂ ಓದಿ: ಇಂದು ಸಿಇಟಿ ಫಲಿತಾಂಶ ಪ್ರಕಟ.. ಸಂಜೆ 4ಕ್ಕೆ ರಿಸಲ್ಟ್​ ಲಭ್ಯ

ABOUT THE AUTHOR

...view details