ಬೆಂಗಳೂರು: ಸಾಂಕ್ರಾಮಿಕ ಕೊರೊನಾ ರೋಗದಿಂದಾಗಿ ಇದೇ ಮೊದಲು ದ್ವಿತೀಯ ಪಿಯುಸಿ ಪರೀಕ್ಷೆ ರದ್ದು ಮಾಡಿ ಎಲ್ಲರನ್ನು ಪಾಸ್ ಮಾಡಲಾಗಿತ್ತು. ಇತ್ತ ಫಲಿತಾಂಶ ತೃಪ್ತಿ ನೀಡದೇ ಇದ್ದರೆ ಪರೀಕ್ಷೆಯನ್ನ ಬರೆಯಬಹುದು ಅಂತ ಪಿಯು ಬೋರ್ಡ್ ತಿಳಿಸಿತ್ತು. ಅದರಂತೆ ಫಲಿತಾಂಶ ತಿರಸ್ಕರಿಸಿದವರಿಗೆ ಆಗಸ್ಟ್ 19ರಿಂದ ಸೆಪ್ಟೆಂಬರ್ 3ರವರೆಗೆ ದ್ವಿತೀಯ ಪಿಯುಸಿ ಪರೀಕ್ಷೆ ನಡೆಸಲಾಗಿತ್ತು.
ರಾಜ್ಯದಲ್ಲಿ ಒಟ್ಟಾರೆ 18,414 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು, ಅದರಲ್ಲಿ 17,469 ಖಾಸಗಿ ವಿದ್ಯಾರ್ಥಿಗಳು ಪರೀಕ್ಷೆಯನ್ನು ಬರೆದಿದ್ದರು. 352 ಪುನರಾವರ್ತಿತ, 593 ಫ್ರೆಶರ್ಸ್ ಪರೀಕ್ಷೆಯನ್ನ ಎದುರಿಸಿದ್ದರು. ತಾಲೂಕಿಗೆ ಒಂದರಂತೆ ಹಾಗೂ ಜಿಲ್ಲಾ ಕೇಂದ್ರಗಳಲ್ಲಿ ಒಂದಕ್ಕಿಂತ ಹೆಚ್ಚು ಪರೀಕ್ಷಾ ಕೇಂದ್ರ ಮಾಡಿ, ಒಟ್ಟು 187 ಕೇಂದ್ರಗಳಲ್ಲಿ ಪರೀಕ್ಷೆ ನಡೆಸಲಾಗಿತ್ತು.