ಕರ್ನಾಟಕ

karnataka

ETV Bharat / state

ನವೆಂಬರ್ 29ರಿಂದ ದ್ವಿತೀಯ ಪಿಯುಸಿ ಮಧ್ಯ ವಾರ್ಷಿಕ ಪರೀಕ್ಷೆ : ವೇಳಾಪಟ್ಟಿ ಪ್ರಕಟ - ಪಿಯುಸಿ ಮಧ್ಯ ವಾರ್ಷಿಕ ಪರೀಕ್ಷೆ ವೇಳಾಪಟ್ಟಿ ಪ್ರಕಟ

ನವೆಂಬರ್ 29ರಿಂದ ಡಿಸೆಂಬರ್ 10ರವರೆಗೆ ಪರೀಕ್ಷೆ ನಡೆಯಲಿದೆ. ಪಿಯು ಬೋರ್ಡ್ ವೇಳಾಪಟ್ಟಿಯನ್ನು ಪ್ರಕಟಿಸಿದೆ. ಎರಡು ಸೆಷನ್‌ಗಳಲ್ಲಿ ಪರೀಕ್ಷೆ ನಡೆಯಲಿದೆ. ಬೆಳಗ್ಗೆ 9 ರಿಂದ ಮಧ್ಯಾಹ್ನ 12.15ರವರೆಗೂ ಹಾಗೂ ಮಧ್ಯಾಹ್ನ 2 ರಿಂದ 5.15ರವರೆಗೂ ಪರೀಕ್ಷೆಗಳು ನಡೆಯಲಿವೆ..

ಪಿಯು ಬೋರ್ಡ್
ಪಿಯು ಬೋರ್ಡ್

By

Published : Nov 12, 2021, 7:42 PM IST

ಬೆಂಗಳೂರು :ಪದವಿ ಪೂರ್ವ ಶಿಕ್ಷಣ ಇಲಾಖೆಯ 2021-22ನೇ ಸಾಲಿನ ದ್ವಿತೀಯ ಪಿಯುಸಿಯ ಮಧ್ಯ-ವಾರ್ಷಿಕ ಪರೀಕ್ಷೆಯನ್ನು ರಾಜ್ಯಾದ್ಯಂತ ಏಕಕಾಲದಲ್ಲಿ ನಡೆಸಲು ತೀರ್ಮಾನಿಸಲಾಗಿದೆ.

ನವೆಂಬರ್ 29ರಿಂದ ಡಿಸೆಂಬರ್ 10ರವರೆಗೆ ಪರೀಕ್ಷೆ ನಡೆಯಲಿದೆ. ಪಿಯು ಬೋರ್ಡ್ ವೇಳಾಪಟ್ಟಿಯನ್ನು ಪ್ರಕಟಿಸಿದೆ. ಎರಡು ಸೆಷನ್‌ಗಳಲ್ಲಿ ಪರೀಕ್ಷೆ ನಡೆಯಲಿದೆ.

ಬೆಳಗ್ಗೆ 9 ರಿಂದ ಮಧ್ಯಾಹ್ನ 12.15ರವರೆಗೂ ಹಾಗೂ ಮಧ್ಯಾಹ್ನ 2 ರಿಂದ 5.15ರವರೆಗೂ ಪರೀಕ್ಷೆಗಳು ನಡೆಯಲಿವೆ. ಎಲ್ಲಾ ಪೋಷಕರು ಹಾಗೂ ವಿದ್ಯಾರ್ಥಿಗಳು ಇಲಾಖಾ ವೆಬ್​ಸೈಟ್​​ನಲ್ಲಿ ಅಳವಡಿಸಿರುವ ವೇಳಾಪಟ್ಟಿ ವೀಕ್ಷಿಸಬಹುದಾಗಿದೆ.

ದ್ವಿತೀಯ ಪಿಯುಸಿ ಮಧ್ಯ ವಾರ್ಷಿಕ ಪರೀಕ್ಷೆ ವೇಳಾಪಟ್ಟಿ

ವೇಳಾಪಟ್ಟಿ :

  • ನವೆಂಬರ್ -29 ಕನ್ನಡ, ತಮಿಳು, ತೆಲುಗು, ಮಲಯಾಳಂ, ಮರಾಠಿ, ಅರಬಿಕ್, ಫ್ರೆಂಚ್​.
  • ನವೆಂಬರ್ -30 ಇಂಗ್ಲಿಷ್
  • ಡಿಸೆಂಬರ್ -1ಭೌತಶಾಸ್ತ್ರ ಮತ್ತು ಇತಿಹಾಸ
  • ಡಿಸೆಂಬರ್ -2ಅರ್ಥಶಾಸ್ತ್ರ ಮತ್ತು ರಾಸಾಯನ ಶಾಸ್ತ್ರ
  • ಡಿಸೆಂಬರ್ -3 ರಾಜ್ಯಶಾಸ್ತ್ರ, ಜೀವಶಾಸ್ತ್ರ, ಎಲೆಕ್ಟ್ರಾನಿಕ್, ಕಂಪ್ಯೂಟರ್ ಸೈನ್ಸ್, ಭೂ ವಿಜ್ಞಾನ, ಕರ್ನಾಟಕ ಸಂಗೀತ, ಹಿಂದುಸ್ತಾನಿ ಸಂಗೀತ
  • ಡಿಸೆಂಬರ್ -6 ಸಮಾಜಶಾಸ್ತ್ರ, ಗಣಿತ,
  • ಡಿಸೆಂಬರ್- 7 ಅಕೌಂಟೆನ್ಸಿ ,ಎಜುಕೇಶನ್, ಹೋಮ್ ಸೈನ್ಸ್
  • ಡಿಸೆಂಬರ್-8 ಬಿಸಿನೆಸ್ ಸ್ಟಡೀಸ್, ಲಾಜಿಕ್, ಒಪ್ಷನಲ್ ಕನ್ನಡ
  • ಡಿಸೆಂಬರ್-9 ಜಿಯೋಗ್ರಫಿ ,ಫಿಸ್ಯಾಲಜಿ,
  • ಡಿಸೆಂಬರ್-10 ಹಿಂದಿ

ABOUT THE AUTHOR

...view details