ಕರ್ನಾಟಕ

karnataka

ETV Bharat / state

ಮೇ 24ರಿಂದ ಜೂನ್​​​ 10ರವರೆಗೆ ದ್ವಿತೀಯ ಪಿಯುಸಿ ಪರೀಕ್ಷೆ.. - ಸಚಿವ ಸುರೇಶ್ ಕುಮಾರ್

Published
ಪಿಯುಸಿ ಪರೀಕ್ಷೆ

By

Published : Jan 29, 2021, 4:19 PM IST

Updated : Jan 29, 2021, 6:35 PM IST

16:16 January 29

ದ್ವಿತೀಯ ಪಿಯುಸಿ ಪರೀಕ್ಷಾ ವೇಳಾಪಟ್ಟಿ ಪ್ರಕಟ ಮಾಡಿದ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಸುರೇಶ್‌ಕುಮಾರ್‌..

ಶಿಕ್ಷಣ ಸಚಿವ ಸುರೇಶ್​ ಕುಮಾರ್ ಸುದ್ದಿಗೋಷ್ಠಿ

ಬೆಂಗಳೂರು :ದ್ವಿತೀಯ ಪಿಯುಸಿ ಪರೀಕ್ಷಾ ವೇಳಾಪಟ್ಟಿ ಪ್ರಕಟಗೊಂಡಿದೆ. 2021ರ ಮೇ 24ರಿಂದ ಜೂನ್​​​ 10ರವರೆಗೆ ಪರೀಕ್ಷೆ ನಡೆಯಲಿದೆ ಎಂದು ಶಿಕ್ಷಣ ಸಚಿವ ಸುರೇಶ್‌ಕುಮಾರ್ ಹೇಳಿದ್ದಾರೆ. 

2020-21ನೇ ಸಾಲಿನ ದ್ವಿತೀಯ ಪಿಯುಸಿ ವೇಳಾಪಟ್ಟಿ‌ ಹೀಗಿದೆ..

ಮೇ - 24 : ಭೌತಶಾಸ್ತ್ರ ಮತ್ತು ಇತಿಹಾಸ
ಮೇ- 25 :ಮೈನಾರಿಟಿ ಲಾಂಗ್ವೇಜ್
ಮೇ -26:ಜಿಯಾಲಜಿ, ಲಾಜಿಕ್, ಹೋಮ್ ಸೈನ್ಸ್, ಬೇಸಿಕ್ ಮ್ಯಾತ್ಸ್
ಮೇ -27: ಐಚ್ಛಿಕ ಕನ್ನಡ, ಗಣಿತ, ಅಕೌಂಟೆನ್ಸಿ
ಮೇ-28 : ಉರ್ದು ಮತ್ತೆ ಸಂಸ್ಕೃತ
ಮೇ -29: ರಾಜ್ಯಶಾಸ್ತ್ರ
ಮೇ- 31: ರಾಸಾಯನ ಶಾಸ್ತ್ರ, ಬಿಸಿನೆಸ್ ಸ್ಟಡೀಸ್ ಎಜುಕೇಶನ್
ಜೂನ್ -1: ಕರ್ನಾಟಕ ಮ್ಯೂಸಿಕ್, ಹಿಂದೂಸ್ತಾನಿ ಮ್ಯೂಸಿಕ್
ಜೂನ್- 2 :ಸೈಕಾಲಜಿ, ಬಯಾಲಜಿ, ಎಲೆಕ್ಟ್ರಾನಿಕ್ಸ್, ಕಂಪ್ಯೂಟರ್ ಸೈನ್ಸ್
ಜೂನ್- 3: ಹಿಂದಿ
ಜೂನ್- 4 : ಅರ್ಥಶಾಸ್ತ್ರ
ಜೂನ್- 5 : ಕನ್ನಡ
ಜೂನ್- 7 :ಇಂಗ್ಲಿಷ್
ಜೂನ್- 8: ಬ್ಯೂಟಿ ಅಂಡ್ ವೆಲ್ ನೆಸ್, ಹೆಲ್ತ್ ಕೇರ್, ರಿಟೈಲ್ ಆಟೋ ಮೊಬೈಲ್, ಇನ್ಫಾರ್ಮೇಶನ್ ಟೆಕ್ನಾಲಜಿ
ಜೂನ್- 9 :ಸಮಾಜಶಾಸ್ತ್ರ,ಸ್ಟಾಟಿಸ್ಟಿಕ್ಸ್
ಜೂನ್- 10: ಜಿಯೋಗ್ರಫಿ

ನಗರದಲ್ಲಿ ಮಾತನಾಡಿದ ಅವರು, ಜುಲೈ 1ರಿಂದ ಶೈಕ್ಷಣಿಕ ವರ್ಷ ಶುರುವಾಗಲಿದೆ. ಕೋವಿಡ್​ನಿಂದಾಗಿ ಒಂದು ವರ್ಷದ ಹಿಂದಿದ್ದ ಆರ್ಥಿಕ ಪರಿಸ್ಥಿತಿ ಈಗಿಲ್ಲ. ಸಮಾಜದ ಎಲ್ಲಾ ಸ್ತರದ ಜನರು ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ. ಹಾಗಾಗಿ ಈ ವರ್ಷ ಯಾವ ಶಾಲೆಯೂ ಶುಲ್ಕ ಹೆಚ್ಚಳ ಮಾಡಬಾರದು. 

ಶಾಲೆಗೆ ದಾಖಲಾಗುವಾಗ ಒಂದನೇ ಕಂತಿನ ಶುಲ್ಕ ಪಾವತಿಸಿದ್ದು, ಈಗ ಎರಡನೇ ಕಂತಿನ ಬಗ್ಗೆ ಚರ್ಚೆಯಾಗುತ್ತಿದೆ. ಪೋಷಕರು ಶಾಲೆಯೇ ನಡೆದಿಲ್ಲ ಶುಲ್ಕ ಯಾಕೆ ಅಂತಾರೆ. ಶಾಲಾ ಆಡಳಿತ ಮಂಡಳಿ ಶುಲ್ಕವಿಲ್ಲದೆ ಶಿಕ್ಷಕರಿಗೆ ಸಂಬಳ ಹೇಗೆ ಕೊಡೆೋದು ಅಂತಾ ಕೇಳ್ತಾರೆ. 

ಹಾಗಾಗಿ, ರಾಜ್ಯದ ಎಲ್ಲಾ ಮಾದರಿ ಶಾಲೆಗಳ ಶುಲ್ಕ ಕಡಿತಕ್ಕೆ ಸರ್ಕಾರ ನಿರ್ಧರಿಸಿದೆ. 2019-20ರ ಬೋಧನಾ ಶುಲ್ಕದ ಶೇ. 70ರಷ್ಟನ್ನು ಮಾತ್ರ ಶಾಲೆಗಳು ಪಡೆಯಬೇಕು. ಇನ್ನಿತರ ಯಾವುದೇ ಅಭಿವೃದ್ಧಿ ಶುಲ್ಕ ಪಡೆಯುವಂತಿಲ್ಲ. ಈಗಾಗಲೇ ಹೆಚ್ಚುವರಿ ಶುಲ್ಕ ಪಾವತಿಸಿದ್ರೆ, ಮುಂದಿನ ವರ್ಷಕ್ಕೆ ಆ ಹಣ ಸರಿದೂಗಿಸಿಕೊಳ್ಳಬಹುದು. ಇದೇ ವೇಳೆ ನಾನು ಖಾಸಗಿ ಶಿಕ್ಷಣ ಸಂಸ್ಥೆಗಳ ಲಾಬಿಗೆ ಮಣಿದಿಲ್ಲ ಎಂದೂ ಸ್ಪಷ್ಟಪಡಿಸಿದರು.

ಶುಲ್ಕ ರಿಯಾಯಿತಿ ಕುರಿತಂತೆ ಪೋಷಕರು ಅಥವಾ ಶಾಲೆಗಳು ಯಾವುದೇ ತಕರಾರು ಹೊಂದಿದ್ದಲ್ಲಿ ಅದನ್ನು ಪರಿಹರಿಸುವ ನಿಟ್ಟಿನಲ್ಲಿ ಅಧಿಕಾರಯುಕ್ತ ಸಮಿತಿ ರಚಿಸಿ, ಅದರ ಮೂಲಕ ಇಂತಹ ದೂರು, ಪ್ರಕರಣಗಳನ್ನು ನಿರ್ವಹಿಸಲಾಗುವುದು ಎಂದಿದ್ದಾರೆ.

Last Updated : Jan 29, 2021, 6:35 PM IST

ABOUT THE AUTHOR

...view details