ಬೆಂಗಳೂರು:ಮಾರ್ಚ್ 4 ರಿಂದ ದ್ವಿತೀಯ ಪಿಯುಸಿ ಪರೀಕ್ಷೆ ಆರಂಭವಾಗಿದ್ದು, ಇಂದು ನಿಗದಿಯಂತೆ ಸೈಕಾಲಜಿ, ಎಲೆಕ್ಟ್ರಾನಿಕ್ಸ್, ಕಂಪ್ಯೂಟರ್ ಸೈನ್ಸ್ ಪರೀಕ್ಷೆಗಳು ನಡೆಯುತ್ತಿವೆ.
ನಿಗದಿಯಂತೆ ನಡೆಯುತ್ತಿದೆ ದ್ವಿತೀಯ ಪಿಯು ಪರೀಕ್ಷೆ.. ಪರೀಕ್ಷಾ ಕೇಂದ್ರಗಳಿಗೆ ಈಗಾಗಲೇ ವಿದ್ಯಾರ್ಥಿಗಳು ಆಗಮಿಸಿದ್ದಾರೆ. ಪರೀಕ್ಷೆಯು 10:15ಕ್ಕೆ ಶುರುವಾಗಿದ್ದು, ವಿವಿಪುರಂನ ಜೈನ್ ಕಾಲೇಜ್ ಎಕ್ಸಾಂ ಸೆಂಟರ್ನಲ್ಲಿ ಪಿಯು ಪರೀಕ್ಷೆ ಹೊರತುಪಡಿಸಿ ಬೇರೆ ಯಾವ ತರಗತಿಯೂ ನಡೆಯುತ್ತಿಲ್ಲ.
ಇನ್ನು ಪರೀಕ್ಷೆಗೆ ಬರುವ ಎಲ್ಲಾ ವಿದ್ಯಾರ್ಥಿಗಳಿಗೂ ಗೇಟ್ ಬಳಿಯೇ ಭದ್ರತಾ ಸಿಬ್ಬಂದಿ ಸ್ಯಾನಿಟೈಸರ್ ನೀಡಿ ಕಳಿಹಿಸಿದ್ದಾರೆ. ಕೊರೊನಾದಿಂದ ರಜೆ ಹಿನ್ನೆಲೆ, ಬಿಎಂಎಸ್ ವಾಣಿಜ್ಯ ಮತ್ತು ನಿರ್ವಹಣಾ ಕಾಲೇಜಿಗೆ ಸಂಪೂರ್ಣ ರಜೆ ಘೋಷಣೆ ಮಾಡಲಾಗಿದೆ. ಸುಮಾರು 500ಕ್ಕೂ ಹೆಚ್ಚು ವಿದ್ಯಾರ್ಥಿಗಳು ಬಿಬಿಎಂ, ಬಿಕಾಂ, ಬಿಸಿಎ ಸೇರಿದಂತೆ ನಾನಾ ಕೋರ್ಸ್ಗಳ ವಿದ್ಯಾರ್ಥಿಗಳು ಇಲ್ಲಿ ಅಭ್ಯಾಸ ಮಾಡುತ್ತಿದ್ದಾರೆ.
ದಿಢೀರ್ ರಜೆಯ ವಿಚಾರವನ್ನ ಎಲ್ಲಾ ವಿದ್ಯಾರ್ಥಿಗಳು ಮತ್ತು ಪೋಷಕರಿಗೆ ಕಾಲೇಜು ಆಡಳಿತ ಮಂಡಳಿ ಮಾಹಿತಿ ನೀಡಿದೆ. ಸಾಮಾನ್ಯವಾಗಿ ಮೇ ತಿಂಗಳಲ್ಲಿ ಪರೀಕ್ಷೆ ನಡೆಯಲಿದೆ. ಇನ್ನು ಕಾಲೇಜಿನಲ್ಲಿ ಸ್ವಚ್ಛತೆ ಮತ್ತು ಭದ್ರತಾ ಸಿಬ್ಬಂದಿ ಹೊರತುಪಡಿಸಿ ಇಡೀ ಕಾಲೇಜಿನಲ್ಲಿ ಬೇರ್ಯಾರೂ ಇಲ್ಲದೇ ಇರುವುದು ಕಂಡು ಬಂದಿದೆ.