ಕರ್ನಾಟಕ

karnataka

ETV Bharat / state

SSLC EXAM : ನಾಳೆ ಎಸ್​ಎಸ್​ಎಲ್​ಸಿಯ ಭಾಷಾ ವಿಷಯದ ಕೊನೆಯ ಪರೀಕ್ಷೆ - ಎಸ್​ಎಸ್​ಎಲ್​ಸಿ ಪರೀಕ್ಷೆ

ರಾಜ್ಯಾದ್ಯಂತ ನಾಳೆ 4,885 ಕೇಂದ್ರಗಳಲ್ಲಿ ಪರೀಕ್ಷೆ ನಡೆಯಲಿದೆ. ಪ್ರಥಮ ಭಾಷೆಯಲ್ಲಿ 8,19,694 ವಿದ್ಯಾರ್ಥಿಗಳಲ್ಲಿ ಹೊಸಬರು 7,83,881, ಖಾಸಗಿ ಅಭ್ಯರ್ಥಿಗಳು 21,803 ಹಾಗೂ 14,010 ಪುನರಾವರ್ತಿತ ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ..

ನಾಳೆ ಎಸ್​ಎಸ್​ಎಲ್​ಸಿಯ ಭಾಷಾ ವಿಷಯದ ಕೊನೆಯ ಪರೀಕ್ಷೆ
ನಾಳೆ ಎಸ್​ಎಸ್​ಎಲ್​ಸಿಯ ಭಾಷಾ ವಿಷಯದ ಕೊನೆಯ ಪರೀಕ್ಷೆ

By

Published : Jul 21, 2021, 5:45 PM IST

ಬೆಂಗಳೂರು :ಕೊರೊನಾ ಸಾಂಕ್ರಾಮಿಕ ರೋಗದ ಕಾರಣಕ್ಕೆ ಎಸ್ಎಸ್ಎಲ್​ಸಿ ಪರೀಕ್ಷೆಯು ಇದೇ ಮೊದಲ ಬಾರಿಗೆ ಆರು ದಿನದ ಬದಲಿಗೆ ಎರಡು ದಿನ ನಡೆಯುತ್ತಿದೆ. ಈಗಾಗಲೇ ಮೊದಲ ದಿನದ ಕೋರ್ ವಿಷಯಗಳ ಪರೀಕ್ಷೆಯು ಯಶಸ್ವಿಯಾಗಿದ್ದು, ನಾಳೆ ಭಾಷಾ ವಿಷಯಗಳ ಪರೀಕ್ಷೆ ನಡೆಯಲಿದೆ.‌

ಭಾಷಾ ವಿಷಯಗಳು- ಪೇಪರ್ 2 ನಾಳೆ ನಡೆಯಲಿದೆ. 22-7-2021 ರಂದು ಬೆಳಗ್ಗೆ: 10-30 ರಿಂದ 1-30ರವರೆಗೆ ಪರೀಕ್ಷೆ ನಡೆಯಲಿದೆ.

  • ಪ್ರಥಮ ಭಾಷೆ: ಕನ್ನಡ, ತೆಲುಗು, ಹಿಂದಿ, ಮರಾಠಿ, ತಮಿಳು, ಉರ್ದು, ಇಂಗ್ಲಿಷ್, ಸಂಸ್ಕೃತ
  • ದ್ವಿತೀಯ ಭಾಷೆ : ಇಂಗ್ಲಿಷ್, ಕನ್ನಡ
  • ತೃತೀಯ ಭಾಷೆ : ಹಿಂದಿ, ಕನ್ನಡ, ಇಂಗ್ಲಿಷ್ ಅರೇಬಿಕ್, ಪರ್ಷಿಯನ್, ಉರ್ದು, ಸಂಸ್ಕೃತ, ಕೊಂಕಣಿ, ತುಳು
  • ಎನ್​ಎಸ್​ಕ್ಯೂಎಫ್ : ಮಾಹಿತಿ ತಂತ್ರಜ್ಞಾನ, ರಿಟೇಲ್, ಆಟೋಮೊಬೈಲ್, ಹೆಲ್ತ್ ಕೇರ್, ಬ್ಯುಟಿ ಅಂಡ್ ವೆಲ್ ನೆಸ್

ರಾಜ್ಯಾದ್ಯಂತ ನಾಳೆ 4,885 ಕೇಂದ್ರಗಳಲ್ಲಿ ಪರೀಕ್ಷೆ ನಡೆಯಲಿದೆ. ಪ್ರಥಮ ಭಾಷೆಯಲ್ಲಿ 8,19,694 ವಿದ್ಯಾರ್ಥಿಗಳಲ್ಲಿ ಹೊಸಬರು 7,83,881, ಖಾಸಗಿ ಅಭ್ಯರ್ಥಿಗಳು 21,803 ಹಾಗೂ 14,010 ಪುನರಾವರ್ತಿತ ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ.

ದ್ವಿತೀಯ ಭಾಷೆಯನ್ನ 8,27,988 ಇದರಲ್ಲಿ ಹೊಸಬರು 7,83,881, ಖಾಸಗಿ ಅಭ್ಯರ್ಥಿಗಳು 21,803 ಹಾಗೂ 22,304 ಪುನರಾವರ್ತಿತ ವಿದ್ಯಾರ್ಥಿಗಳು ಪರೀಕ್ಷೆಯನ್ನ ಬರೆಯಲಿದ್ದಾರೆ.

ತೃತೀಯ ಭಾಷೆಯನ್ನ 8,17,640 ವಿದ್ಯಾರ್ಥಿಗಳು ಪರೀಕ್ಷೆಗೆ ನೊಂದಣಿ ಮಾಡಿಕೊಂಡಿದ್ದಾರೆ. ಇದರಲ್ಲಿ ಹೊಸಬರು 7,83,881, ಖಾಸಗಿ ಅಭ್ಯರ್ಥಿಗಳು 21,803 ಹಾಗೂ 11,956 ಪುನರಾವರ್ತಿತ ವಿದ್ಯಾರ್ಥಿಗಳು ಪರೀಕ್ಷೆಯನ್ನ ಬರೆಯಲಿದ್ದಾರೆ.

ABOUT THE AUTHOR

...view details