ಬೆಂಗಳೂರು: ರಾಜ್ಯ ಚುನಾವಣಾ ಆಯೋಗ ಗ್ರಾಮ ಪಂಚಾಯಿತಿ ಚುನಾವಣೆಯ ಎರಡನೇ ಹಂತದ ಮತದಾನಕ್ಕೆ ಸಕಲ ಸಿದ್ಧತೆ ಕೈಗೊಂಡಿದೆ.
ಮಂಗಳವಾರ ಮೊದಲ ಹಂತದ ಗ್ರಾಮ ಪಂಚಾಯಿತಿ ಚುನಾವಣಾ ಮತದಾನ ಯಶಸ್ವಿಯಾಗಿ ಪೂರ್ಣಗೊಂಡಿದೆ. ಇದೀಗ ಡಿ. 27 ರಂದು ನಡೆಯುವ ಎರಡನೇ ಹಂತದ ಮತದಾನ ಪ್ರಕ್ರಿಯೆಗೆ ಸಂಪೂರ್ಣ ಸಿದ್ಧತೆಯನ್ನು ರಾಜ್ಯ ಚುನಾವಣಾ ಆಯೋಗ ನಡೆಸಿದೆ.
ಎರಡನೇ ಹಂತದ ಮತದಾನ ಪ್ರಕ್ರಿಯೆ ಸಂಬಂಧಿತ ಅಂಕಿ - ಅಂಶಗಳು :
- ಚುನಾವಣೆ ನಡೆಯುವ ಒಟ್ಟು ತಾಲೂಕುಗಳ ಸಂಖ್ಯೆ -109
- ಗ್ರಾಮ ಪಂಚಾಯಿತಿಗಳ ಸಂಖ್ಯೆ -2709
- ಒಟ್ಟು ಸ್ಥಾನಗಳ ಸಂಖ್ಯೆ- 43,291
- ಸ್ವೀಕೃತವಾದ ಒಟ್ಟು ನಾಮಪತ್ರಗಳು- 1,47,649
- ನಾಮಪತ್ರ ಸಲ್ಲಿಸದೆ ಖಾಲಿ ಉಳಿದಿರುವ ಸ್ಥಾನಗಳ ಸಂಖ್ಯೆ- 216
- ಕ್ರಮಬದ್ಧವಾಗಿ ನಾಮನಿರ್ದೇಶಿತರಾದ ಅಭ್ಯರ್ಥಿಗಳ ಸಂಖ್ಯೆ- 1,39,546
- ಉಮೇದುವಾರಿಕೆಗಳನ್ನು ಹಿಂಪಡೆದ ಅಭ್ಯರ್ಥಿಗಳ ಸಂಖ್ಯೆ -34,115
- ಅವಿರೋಧವಾಗಿ ಆಯ್ಕೆಯಾದ ಅಭ್ಯರ್ಥಿಗಳ ಸಂಖ್ಯೆ -3697
- ಚುನಾವಣೆ ನಡೆಯಲಿರುವ ಸ್ಥಾನಗಳ ಸಂಖ್ಯೆ -39, 378
- ಅಂತಿಮವಾಗಿ ಚುನಾವಣಾ ಕಣದಲ್ಲಿರುವ ಅಭ್ಯರ್ಥಿಗಳ ಸಂಖ್ಯೆ- 1,05,431 ಆಗಿದೆ.