ಬೆಂಗಳೂರು:ಎರಡನೇ ಹಂತದಲ್ಲಿ ನಡೆಯಲಿರುವ ರಾಜ್ಯದ 14 ಲೋಕಸಭಾ ಕ್ಷೇತ್ರದ ಚುನಾವಣೆಗೆ ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಆರಂಭಗೊಂಡಿದ್ದು, ಎರಡನೇ ದಿನ 17 ಅಭ್ಯರ್ಥಿಗಳು ಉಮೇದುವಾರಿಕೆ ಸಲ್ಲಿಸಿದ್ದಾರೆ.
ಲೋಕ ಸಮರ: ಎರಡನೇ ದಿನ 17 ಅಭ್ಯರ್ಥಿಗಳಿಂದ ನಾಮಪತ್ರ ಸಲ್ಲಿಕೆ - undefined
ಎರಡನೇ ಹಂತದ ಲೋಕ ಸಮರ ಆರಂಭಗೊಂಡಿದ್ದು,ಎರಡನೇ ದಿನ ಒಟ್ಟು 17 ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ಧಾರೆ.
![ಲೋಕ ಸಮರ: ಎರಡನೇ ದಿನ 17 ಅಭ್ಯರ್ಥಿಗಳಿಂದ ನಾಮಪತ್ರ ಸಲ್ಲಿಕೆ](https://etvbharatimages.akamaized.net/etvbharat/images/768-512-2847131-261-9b3d6cc6-c4a3-47e6-a48e-98f725e99832.jpg)
ಕಾಂಗ್ರೆಸ್
ಕಾಂಗ್ರೆಸ್ನಿಂದ ಇಬ್ಬರು,ಉತ್ತಮ ಪ್ರಜಾಕೀಯ ಪಕ್ಷದಿಂದ ನಾಲ್ವರು ಅಭ್ಯರ್ಥಿಗಳು ಸೇರಿ ಒಟ್ಟು 17 ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದಾರೆ. ಗುಲ್ಬರ್ಗಾ, ಧಾರವಾಡದಿಂದ ತಲಾ ಮೂರು ಅಭ್ಯರ್ಥಿಗಳು, ಶಿವಮೊಗ್ಗ, ಬಾಗಲಕೋಟೆಯಿಂದ ತಲಾ ಇಬ್ಬರ ಅಭ್ಯರ್ಥಿಗಳು, ಬೆಳಗಾವಿ, ರಾಯಚೂರು, ಬೀದರ್,ಬಳ್ಳಾರಿ, ಹಾವೇರಿ, ಉತ್ತರ ಕನ್ನಡ ಹಾಗೂ ಹಾವೇರಿಯಿಂದ ತಲಾ ಒಬ್ಬರು ಅಭ್ಯರ್ಥಿಗಳು ನಾಮಪತ್ರ ಸಲ್ಲಿಕೆ ಮಾಡಿದ್ದಾರೆ.
ನಾಮಪತ್ರ ಸಲ್ಲಿಕೆಯ ಮೊದಲ ದಿನ 15 ಅಭ್ಯರ್ಥಿಗಳು ಎರಡನೆ ದಿನವಾದ ಇಂದು 17 ಅಭ್ಯರ್ಥಿಗಳು ಸೇರಿ ಒಟ್ಟು ಈವರೆಗೆ 32 ಅಭ್ಯರ್ಥಿಗಳು ನಾಮಪತ್ರ ಸಲ್ಲಿಕೆ ಮಾಡಿದಂತಾಗಿದೆ.
Last Updated : Mar 30, 2019, 12:38 PM IST