ಬೆಂಗಳೂರು: ರಾಜ್ಯದ ಜಿಲ್ಲಾ ಪಂಚಾಯಿತಿ ಹಾಗೂ ತಾಲೂಕು ಪಂಚಾಯಿತಿ ಸ್ಥಾನಗಳಿಗೆ ವರ್ಗವಾರು ಮೀಸಲು ನಿಗದಿಪಡಿಸಿ ರಾಜ್ಯ ಚುನಾವಣಾ ಆಯೋಗ ಅಧಿಸೂಚನೆ ಹೊರಡಿಸಿದೆ.
ಜಿ.ಪಂ, ತಾ.ಪಂ. ಮೀಸಲು ನಿಗದಿಗೊಳಿಸಿದ ರಾಜ್ಯ ಚುನಾವಣಾ ಆಯೋಗ - karnataka GP election
ರಾಜ್ಯದ 1,191 ಜಿಲ್ಲಾ ಪಂಚಾಯಿತಿ ಹಾಗೂ 3,285 ತಾಲೂಕು ಪಂಚಾಯಿತಿ ಸ್ಥಾನಗಳಿಗೆ ವರ್ಗವಾರು ಮೀಸಲಾತಿ ನಿಗದಿಪಡಿಸಲಾಗಿದೆ.
ಮೀಸಲು ನಿಗದಿಗೊಳಿಸಿದ ರಾಜ್ಯ ಚುನಾವಣಾ ಆಯೋಗ
ರಾಜ್ಯದ 1,191 ಜಿಲ್ಲಾ ಪಂಚಾಯಿತಿ ಹಾಗೂ 3,285 ತಾಲೂಕು ಪಂಚಾಯಿತಿ ಸ್ಥಾನಗಳಿಗೆ ಅನುಸೂಚಿತ ಜಾತಿ, ಅನುಸೂಚಿತ ಪಂಗಡ, ಹಿಂದುಳಿದ ವರ್ಗ-ಎ, ಹಿಂದುಳಿದ ವರ್ಗ-ಬಿ ಹಾಗೂ ಸಾಮಾನ್ಯ ವರ್ಗಗಳು ಹಾಗೂ ಈ ವರ್ಗಗಳಲ್ಲಿ ಮಹಿಳೆಯರಿಗೆ ಮೀಸಲಿಟ್ಟ ಸ್ಥಾನಗಳ ವರ್ಗವಾರು ಮೀಸಲಾತಿ ನಿಗದಿಪಡಿಸಲಾಗಿದೆ.
ಕ್ಷೇತ್ರ ಪುನರ್ ವಿಂಗಡಣೆ ಬಳಿಕ ಜಿ.ಪಂ ಹಾಗೂ ತಾ.ಪಂ ಗಳಿಗೆ ಕ್ಷೇತ್ರಗಳನ್ನು ಮಾರ್ಚ್ ಕೊನೆಯಲ್ಲಿ ಅಧಿಸೂಚನೆ ಹೊರಡಿಸಲಾಗಿತ್ತು. ಇದೀಗ ಎಲ್ಲಾ ಕ್ಷೇತ್ರಗಳಿಗೆ ವರ್ಗವಾರು ಮೀಸಲಾತಿ ನಿಗದಿಪಡಿಸಲಾಗಿದೆ.