ಲೇಡಿ ಕಾನ್ಸ್ಟೇಬಲ್ ಕೋವಿಡ್ ವರದಿ ನೆಗೆಟಿವ್: ಸಹಜ ಸ್ಥಿತಿಗೆ ಗೃಹ ಕಚೇರಿ ಕೃಷ್ಣಾ! - sealdown revoked in krishna
ಗೃಹ ಕಚೇರಿ ಕೃಷ್ಣಾದಲ್ಲಿ ನಿಯೋಜಿಸಿದ್ದ ಮಹಿಳಾ ಕಾನ್ಸ್ಟೇಬಲ್ ಕೊರೊನಾ ವರದಿ ನೆಗೆಟಿವ್ ಬಂದ ಹಿನ್ನೆಲೆ ಸೀಲ್ಡೌನ್ ತೆರವುಗೊಳಿಸಲಾಗಿದ್ದು, ಇದೀಗ ಸಿಎಂ ಗೃಹಕಚೇರಿಯಲ್ಲಿ ಎಲ್ಲ ಚಟುವಟಿಕೆಗಳು ಸಹಜವಾಗಿ ನಡೆಯುತ್ತಿವೆ.
![ಲೇಡಿ ಕಾನ್ಸ್ಟೇಬಲ್ ಕೋವಿಡ್ ವರದಿ ನೆಗೆಟಿವ್: ಸಹಜ ಸ್ಥಿತಿಗೆ ಗೃಹ ಕಚೇರಿ ಕೃಷ್ಣಾ! sealdown-revoked-in-krishna](https://etvbharatimages.akamaized.net/etvbharat/prod-images/768-512-7693515-thumbnail-3x2-negative.jpg)
ಸಹಜ ಸ್ಥಿತಿಗೆ ಗೃಹ ಕಚೇರಿ ಕೃಷ್ಣಾ!
ಬೆಂಗಳೂರು:ಗೃಹ ಕಚೇರಿ ಕೃಷ್ಣಾದಲ್ಲಿ ನಿಯೋಜಿಸಿದ್ದ ಮಹಿಳಾ ಕಾನ್ಸ್ಟೇಬಲ್ ಕೊರೊನಾ ವರದಿ ನೆಗೆಟಿವ್ ಬಂದ ಹಿನ್ನೆಲೆ ಇದೀಗ ಸಿಎಂ ಗೃಹಕಚೇರಿ ಸಹಜ ಸ್ಥಿತಿಗೆ ಬಂದಿದೆ. ಗೃಹ ಕಚೇರಿ ಕೃಷ್ಣಾದ ಸೀಲ್ಡೌನ್ ತೆರವು ಮಾಡಲಾಗಿದ್ದು, ಎಂದಿನಂತೆ ರಾಜಕೀಯ ಚಟುವಟಿಕೆಗಳು ಮುಂದುವರೆದಿವೆ.
ಸಹಜ ಸ್ಥಿತಿಗೆ ಗೃಹ ಕಚೇರಿ ಕೃಷ್ಣಾ!
ಸಿಎಂ ಗೃಹ ಕಚೇರಿ ಕೃಷ್ಣಾದಲ್ಲಿ ಕೆಲಸ ನಿರ್ವಹಿಸುವ ಲೇಡಿ ಕಾನ್ಸ್ಟೇಬಲ್ ಪತಿಗೆ ಕೊರೊನಾ ಪಾಸಿಟಿವ್ ಬಂದಿತ್ತು. ಈ ಹಿನ್ನೆಲೆಯಲ್ಲಿ ಲೇಡಿ ಕಾನ್ಸ್ಟೇಬಲ್ಗೂ ಕೊರೊನಾ ಟೆಸ್ಟ್ ಮಾಡಲಾಗಿತ್ತು. ಇತ್ತ ನಿನ್ನೆ ಗೃಹ ಕಚೇರಿ ಕೃಷ್ಣಾ ಬಂದ್ ಮಾಡಿ ಸಂಪೂರ್ಣ ಸ್ಯಾನಿಟೈಸಿಂಗ್ ಮಾಡಲಾಗಿತ್ತು. ಈ ಹಿನ್ನೆಲೆ ಗೃಹ ಕಚೇರಿ ಕೃಷ್ಣಾದಲ್ಲಿದ್ದ ಮುಖ್ಯಮಂತ್ರಿಗಳ ಎಲ್ಲ ಸಭೆಗಳನ್ನು ನಿನ್ನೆ ವಿಧಾನಸೌಧಕ್ಕೆ ಶಿಫ್ಟ್ ಮಾಡಲಾಗಿತ್ತು.ಇದೀಗ ಮಹಿಳಾ ಕಾನ್ಸ್ಟೇಬಲ್ ಕೋವಿಡ್-19 ಟೆಸ್ಟ್ ವರದಿ ನೆಗೆಟಿವ್ ಬಂದಿದ್ದು, ಗೃಹ ಕಚೇರಿ ಕೃಷ್ಣಾ ಅಧಿಕಾರಿಗಳು, ಸಿಬ್ಬಂದಿಗೆ ಆತಂಕ ದೂರವಾಗಿದೆ.
TAGGED:
sealdown revoked in krishna