ಕರ್ನಾಟಕ

karnataka

ETV Bharat / state

ಆರೋಗ್ಯ ಸಚಿವ ಶ್ರೀರಾಮುಲು ಅಧಿಕೃತ ನಿವಾಸವೇ ಸೀಲ್​ಡೌನ್​! - ಸೀಲ್​ಡೌನ್​ ಆದ ಶ್ರೀರಾಮುಲು

ಸಿಎಂ ಕಚೇರಿಯಲ್ಲಿ ಕೆಲಸ ಮಾಡುವ ಲೇಡಿ ಕಾನ್ಸ್​ಟೆಬಲ್ ಪತಿಗೆ ಕೊರೊನಾ ದೃಢಪಟ್ಟ ಹಿನ್ನೆಲೆ ಅಂದು ಗುತ್ತಿಗೆ ವೈದ್ಯರ ನಿಯೋಗವೂ ಆ ಮಹಿಳಾ ಸಿಬ್ಬಂದಿ ಸಂಪರ್ಕಕ್ಕೆ ಬಂದಿರುವ ಸಾಧ್ಯತೆ ಇರುವುದರಿಂದ ಮುಂಜಾಗ್ರತಾ ಕ್ರಮವಾಗಿ ಆರೋಗ್ಯ ಸಚಿವರ ನಿವಾಸವನ್ನು ಸೀಲ್ ಡೌನ್ ಮಾಡಲಾಗಿದೆ.

seal down of Ramulu house
ಆರೋಗ್ಯ ಸಚಿವರ ಅಧಿಕೃತ ನಿವಾಸವೇ ಸೀಲ್​ಡೌನ್​

By

Published : Jun 19, 2020, 2:05 PM IST

ಬೆಂಗಳೂರು: ರಾಜ್ಯದಲ್ಲಿ ಮೊದಲ ಬಾರಿಗೆ ಸಚಿವರೊಬ್ಬರ ಅಧಿಕೃತ ನಿವಾಸ ಕೊರೊನಾ ಭೀತಿಯಿಂದ ಸೀಲ್ ಡೌನ್ ಆಗಿದೆ.

ಮುಖ್ಯಮಂತ್ರಿಗಳ ಗೃಹ ಕಚೇರಿ ಕೃಷ್ಣಾ ಸೀಲ್ ಡೌನ್ ಭೀತಿಗೆ ಸಿಲುಕಿರುವ ನಡುವೆಯೇ ಆರೋಗ್ಯ ಸಚಿವ ಬಿ. ಶ್ರೀರಾಮುಲು ಅವರ ಸರ್ಕಾರಿ ನಿವಾಸ ಸೀಲ್​ಡೌನ್ ಆಗಿದೆ. ಸವೆನ್ ಮಿನಿಸ್ಟರ್ಸ್ ಕ್ವಾಟ್ರಸ್ ನಲ್ಲಿರುವ ಶ್ರೀರಾಮುಲು ನಿವಾಸವನ್ನು ಸೀಲ್​ಡೌನ್ ಮಾಡಿದ್ದು, ಏಳು ದಿನಗಳ ಕಾಲ ನಿವಾಸದ ಪ್ರವೇಶಕ್ಕೆ ನಿರ್ಬಂಧ ವಿಧಿಸಲಾಗಿದೆ.

ಮೊನ್ನೆ ಗುತ್ತಿಗೆ ವೈದ್ಯರ ಜೊತೆ ಸಚಿವ ಶ್ರೀರಾಮುಲು ಸಭೆ ನಡೆಸಿದ್ದರು. ಸಭೆಗೂ ಮುನ್ನ ಗುತ್ತಿಗೆ ವೈದ್ಯರ ನಿಯೋಗ ಸಿಎಂ ಕಚೇರಿಗೆ ಭೇಟಿ ನೀಡಿತ್ತು. ಸಿಎಂ ಕಚೇರಿಯಲ್ಲಿ ಕೆಲಸ ಮಾಡುವ ಲೇಡಿ ಕಾನ್ಸ್​ಟೆಬಲ್ ಅವರ ಪತಿಗೆ ಕೊರೊನಾ ದೃಢಪಟ್ಟ ಹಿನ್ನೆಲೆ ಅಂದು ಗುತ್ತಿಗೆ ವೈದ್ಯರ ನಿಯೋಗವೂ ಆ ಮಹಿಳಾ ಸಿಬ್ಬಂದಿ ಸಂಪರ್ಕಕ್ಕೆ ಬಂದಿರುವ ಶಂಕೆ ಇರುವುದರಿಂದ ಮುಂಜಾಗ್ರತಾ ಕ್ರಮವಾಗಿ ಆರೋಗ್ಯ ಸಚಿವರ ನಿವಾಸವನ್ನು ಸೀಲ್ ಡೌನ್ ಮಾಡಲಾಗಿದೆ.

ಯಂತ್ರವಿದ್ದರೂ ಸೀಲ್​ಡೌನ್ ತಪ್ಪಲಿಲ್ಲ:

ಸಚಿವ ಶ್ರೀರಾಮುಲು ನಿವಾಸದಲ್ಲಿ ಕೊರೊನಾ ಸೋಂಕಿತ ವ್ಯಕ್ತಿಗಳ ಸಂಚಾರವನ್ನು ಪತ್ತೆ ಮಾಡಲು‌ ಯಂತ್ರವನ್ನು ಅಳವಡಿಸಲಾಗಿದೆ. ಸೋಂಕಿತರು ಆ ಯಂತ್ರದ ವ್ಯಾಪ್ತಿಯಲ್ಲಿ ಸಂಚರಿಸಿದರೆ ಈ ಬಗ್ಗೆ ಅದು ಎಚ್ಚರಿಸುತ್ತದೆ.

ABOUT THE AUTHOR

...view details