ಬೆಂಗಳೂರು: ಖಾಸಗಿ ಆಸ್ಪತ್ರೆಯ ನಂತರ ಇದೀಗ ಪಾಲಿಕೆಯ ಆಸ್ಪತ್ರೆಗೂ ಬೀಗ ಬಿದ್ದಿದ್ದು, ಮೂಡಲ ಪಾಳ್ಯದ ಬಿಬಿಎಂಪಿ ಹೆರಿಗೆ ಆಸ್ಪತ್ರೆಯನ್ನು ಇದೀಗ ಸೀಲ್ಡೌನ್ ಮಾಡಲಾಗಿದೆ. ಆಸ್ಪತ್ರೆಯನ್ನು ತಾತ್ಕಾಲಿಕವಾಗಿ ಬಿಬಿಎಂಪಿ ಬಂದ್ ಮಾಡಿದ್ದು, ಹಂಪಿನಗರದ ರೋಗಿ ನಂ. 465 ಮಹಿಳೆ ಬಿಬಿಎಂಪಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದ ಹಿನ್ನೆಲೆ ಆಸ್ಪತ್ರೆಗೆ ಬೀಗ ಹಾಕಲಾಗಿದೆ.
ಖಾಸಗಿ ಆಸ್ಪತ್ರೆಯ ನಂತರ ಇದೀಗ ಬಿಬಿಎಂಪಿಯ ಆಸ್ಪತ್ರೆಗೂ ಸೀಲ್ಡೌನ್! - Seal Down BBMP Maternity Hospital in Moodalapal
ಮೂಡಲ ಪಾಳ್ಯದ ಬಿಬಿಎಂಪಿ ಹೆರಿಗೆ ಆಸ್ಪತ್ರೆಯನ್ನು ಇದೀಗ ಸೀಲ್ಡೌನ್ ಮಾಡಲಾಗಿದ್ದು, ಆಸ್ಪತ್ರೆಯಲ್ಲಿ ಕೆಲಸ ನಿರ್ವಹಿಸಿದ್ದ ಡಾಕ್ಟರ್ಗಳು ಹಾಗೂ ನರ್ಸ್ಗಳಿಗೆ ಕ್ವಾರಂಟೈನ್ ಮಾಡಲಾಗಿದೆ.
ಇದು ಕೊರೊನಾ ವೈರಸ್ನಿಂದಾಗಿ ಸೀಲ್ಡೌನ್ಗೆ ಒಳಗಾದ ಮೊದಲ ಬಿಬಿಎಂಪಿ ಆಸ್ಪತ್ರೆಯಾಗಿದ್ದು, ಆಸ್ಪತ್ರೆಯಲ್ಲಿ ಕೆಲಸ ನಿರ್ವಹಿಸಿದ್ದ ಡಾಕ್ಟರ್ಗಳು ಹಾಗೂ ನರ್ಸ್ಗಳಿಗೆ ಕ್ವಾರಂಟೈನ್ ಮಾಡಲಾಗಿದೆ.
P-465 ಬೇಜವಾಬ್ದಾರಿಗೆ ಬಿಬಿಎಂಪಿ ಆಸ್ಪತ್ರೆ ಬಂದ್ ಆಗಿದೆ. ಉಸಿರಾಟದ ತೊಂದರೆ ಬಗ್ಗೆ ಮಾಹಿತಿ ನೀಡದೆ 22 ರಂದು ಅವರು ರಕ್ತಸ್ರಾವವಿದೆ ಎಂದು ಮೂಡಲಪಾಳ್ಯ ಹೆರಿಗೆ ಆಸ್ಪತ್ರೆಗೆ ಬಂದಿದ್ರು. ಅಲ್ಲದೇ 23 ರಂದು ಕೂಡ ಆಸ್ಪತ್ರೆಗೆ ಬಂದಿದ್ರು. ಇದರಿಂದ ಅನುಮಾನಗೊಂಡ ಅವರನ್ನು ರಾಜೀವ್ ಗಾಂಧಿ ಆಸ್ಪತ್ರೆಗೆ ಕಳಿಸಲಾಯ್ತು. ಆಗ ಆ ಮಹಿಳೆಗೆ ಕೊರೊನಾ ಪಾಸಿಟಿವ್ ಇರುವುದು ದೃಢಪಟ್ಟಿದೆ. ಇದೀಗ ಹೆರಿಗೆ ಆಸ್ಪತ್ರೆಯನ್ನು ಬಂದ್ ಮಾಡಲಾಗಿದ್ದು, ಇಬ್ಬರು ವೈದ್ಯರು ಸೇರಿದಂತೆ ಎಂಟು ಮಂದಿಯನ್ನ ಹೋಟೆಲ್ ಕ್ವಾರಂಟೈನ್ಗೆ ಕಳುಹಿಸಲಾಗಿದೆ.