ಕರ್ನಾಟಕ

karnataka

ETV Bharat / state

ಕೊರೊನಾ ಎಫೆಕ್ಟ್​​: ಬೆಂಗಳೂರಿನ ಪಶ್ಚಿಮ ವಿಭಾಗದ 10 ಪೊಲೀಸ್​ ಠಾಣೆಗಳು ಸೀಲ್​ ಡೌನ್...!​ - ಕೊರೊನಾ ಸುದ್ದಿ

ಪಶ್ಚಿಮ ವಿಭಾಗ ಡಿಸಿಪಿ‌ ರಮೇಶ್ ‌ಬಾನೋತ್ ‌ಕಚೇರಿ, ಚಿಕ್ಕಪೇಟೆ, ಜೆ.ಜೆ ನಗರ, ಕಾಮಾಕ್ಷಿಪಾಳ್ಯ, ಕೆಂಗೇರಿ, ಕಲಾಸಿಪಾಳ್ಯ, ಅನ್ನಪೂರ್ಣೇಶ್ವರಿ ನಗರ, ಕಾಟನ್ ಪೇಟೆಯಲ್ಲಿ ಕೊರೊನಾ ಸೋಂಕು ಪತ್ತೆಯಾಗಿದ್ದು, ಮುಂಜಾಗ್ರತಾ ಕ್ರಮವಾಗಿ ಠಾಣೆಗಳನ್ನ ಸೀಲ್ ಡೌನ್ ಮಾಡಲಾಗಿದೆ.

10 ಪೊಲೀಸ್​ ಠಾಣೆ ಸೀಲ್​ ಡೌನ್​
10 ಪೊಲೀಸ್​ ಠಾಣೆ ಸೀಲ್​ ಡೌನ್​

By

Published : Jul 2, 2020, 1:06 PM IST

ಬೆಂಗಳೂರು: ಕೊರೊನಾ ವಾರಿಯರ್ಸ್​ ಆಗಿರುವ ಪೊಲೀಸರಲ್ಲಿ ಮಹಾಮಾರಿ ಸೋಂಕು ವ್ಯಾಪಕವಾಗಿ ಹರಡುತ್ತಿದ್ದು, ನಗರದ ಪಶ್ಚಿಮ ವಿಭಾಗದಲ್ಲಿ 10 ಠಾಣೆಗಳನ್ನ ಸೀಲ್ ಡೌನ್ ಮಾಡಲಾಗಿದೆ.

ಪಶ್ಚಿಮ ವಿಭಾಗ ಡಿಸಿಪಿ‌ ರಮೇಶ್ ‌ಬಾನೋತ್ ‌ಕಚೇರಿ, ಚಿಕ್ಕಪೇಟೆ, ಜೆ.ಜೆ ನಗರ, ಕಾಮಾಕ್ಷಿಪಾಳ್ಯ, ಕೆಂಗೇರಿ, ಕಲಾಸಿಪಾಳ್ಯ, ಅನ್ನಪೂರ್ಣೇಶ್ವರಿ ನಗರ, ಕಾಟನ್ ಪೇಟೆಯಲ್ಲಿ ಕೊರೊನಾ ಸೋಂಕು ಪತ್ತೆಯಾಗಿದ್ದು, ಮುಂಜಾಗ್ರತಾ ಕ್ರಮವಾಗಿ ಠಾಣೆಗಳನ್ನ ಸೀಲ್ ಡೌನ್ ಮಾಡಲಾಗಿದೆ.

ಅನ್ನಪೂರ್ಣೇಶ್ವರಿ ನಗರ ಪೊಲೀಸರು 9 ಜನ ಕೊಲೆ ‌ಆರೋಪಿಗಳನ್ನ ಬಂಧಿಸಿದ್ದರು. 9 ಜನರ ಪೈಕಿ ‌ಮೂವರು ಆರೋಪಿಗಳಿಗೆ ಕೊರೊನಾ ಪಾಸಿಟಿವ್ ಬಂದಿದ್ದು, ಸೋಂಕಿತರ ಸಂಪರ್ಕದಲ್ಲಿದ್ದವರನ್ನೆಲ್ಲಾ ಕ್ವಾರಂಟೈನ್ ಮಾಡಲಾಗಿದೆ. ಸಿಟಿಯಲ್ಲಿ ಇದೇ ಮೊದಲ‌ ಬಾರಿಗೆ 10 ಠಾಣೆಗಳು ಸೀಲ್ ಡೌನ್ ಆಗಿದ್ದು, ಸಾರ್ವಜನಿಕರಿಗೆ ಹೆಚ್ಚು ತೊಂದರೆಯಾದರೆ 100ಗೆ ಕರೆ ಮಾಡಿ ತಿಳಿಸುವಂತೆ ಹಿರಿಯ ಅಧಿಕಾರಿಗಳು ಸೂಚಿಸಿದ್ದಾರೆ.

ABOUT THE AUTHOR

...view details