ಬೆಂಗಳೂರು: ಬಾಬರಿ ಮಸೀದಿ ಧ್ವಂಸ ಪ್ರಕರಣಕ್ಕೆ ಸಂಬಂಧಿಸಿದಂತೆ ಲಖನೌ ಸಿಬಿಐ ವಿಶೇಷ ನ್ಯಾಯಾಲಯದ ತೀರ್ಪು ನ್ಯಾಯಾಂಗದ ಮೇಲಿನ ಸಾಮಾನ್ಯ ಜನರ ಭರವಸೆಯನ್ನು ಕಳೆದುಕೊಳ್ಳುವಂತೆ ಮಾಡಿದೆ ಎಂದು ಎಸ್ಡಿಪಿಐ ಸಂಘಟನೆ ಆರೋಪಿಸಿದೆ.
ತೀರ್ಪು ವಿರೋಧಿಸಿ ಪ್ರತಿಭಟಿಸಬೇಕಾಗಿದೆ. ಸುಪ್ರೀಂಕೋರ್ಟ್ ಮೆಟ್ಟಿಲೇರಬೇಕಿದೆ ಎಂದು ತೀರ್ಪು ಕುರಿತು ಎಸ್ಡಿಪಿಐ ಪಕ್ಷದ ರಾಜ್ಯಾಧ್ಯಕ್ಷ ಇಲ್ಯಾಜ್ ಮಹಮ್ಮದ್ ತುಂಬೆ ಪ್ರತಿಕ್ರಿಯೆ ನೀಡಿದ್ದಾರೆ.
ಈ ಕುರಿತು ಮಾತನಾಡಿದ ಅವರು, ಇದು ಘೋರವಾದ ತೀರ್ಪು. 28 ವರ್ಷದ ಬಳಿಕ ಕೊಟ್ಟ ತೀರ್ಪು ಅನ್ಯಾಯದ ತೀರ್ಪು. ಎಲ್ಲಾ ಸಾಕ್ಷಿಗಳು ಇವೆ. ಲಕ್ಷಾಂತರ ಜನರನ್ನು ಸೇರಿಸಿ ಪ್ರೇರಣೆ ಕೊಟ್ಟ ಬಗ್ಗೆಯೂ ಎಲ್ಲರಿಗೂ ತಿಳಿದಿದೆ. ಆದರೂ ಈ ರೀತಿಯ ತೀರ್ಪು ನಮ್ಮ ದೇಶ ತಲೆ ತಗ್ಗಿಸುವಂತಹ ತೀರ್ಪಾಗಿದೆ ಎಂದರು.
ಹಾಗಾದರೆ ಮಸೀದಿ ಧ್ವಂಸ ಮಾಡಿದವರು ಯಾರು? ನ್ಯಾಯಾಲಯ ಈ ರೀತಿ ರಾಜಕೀಯ ಪ್ರೇರಿತ, ಕೋಮು ಪ್ರೇರಿತ ತೀರ್ಪು ಕೊಟ್ಟಿದೆ ಎಂದು ಆರೋಪಿಸಿದ್ದಾರೆ.