ಕರ್ನಾಟಕ

karnataka

ETV Bharat / state

ಬೆಂಗಳೂರಿನಲ್ಲಿ ಪೌರಕಾರ್ಮಿಕರಿಗೆ ಸ್ಕ್ರೀನಿಂಗ್: ಮಾಸ್ಕ್, ಗ್ಲೌಸ್ ವಿತರಣೆ - ಬೆಂಗಳೂರಿನಲ್ಲಿ ಕೊರೊನಾ ಎಫೆಕ್ಟ್

ಬೆಂಗಳೂರು ಪೂರ್ವ ತಾಲೂಕು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಬಿಬಿಎಂಪಿ ಸಹಯೋಗದೊಂದಿಗೆ ಬಸವನಪುರ ವಾರ್ಡ್​​ನ ಸ್ವಾತಂತ್ರ್ಯ ನಗರದಲ್ಲಿ ಪೌರಕಾರ್ಮಿಕರಿಗೆ ಕೋವಿಡ್ -19 ಸ್ಕ್ರೀನಿಂಗ್ ನಡೆಸಲಾಯಿತು.

dswdd
ಬೆಂಗಳೂರಿನಲ್ಲಿ ಪೌರ ಕಾರ್ಮಿಕರಿಗೆ ಸ್ಕ್ರೀನಿಂಗ್,ಮಾಸ್ಕ್,ಗ್ಲೌಸ್ ವಿತರಣೆ

By

Published : Apr 18, 2020, 3:51 PM IST

ಬೆಂಗಳೂರು: ಪೂರ್ವ ತಾಲೂಕು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಬಿಬಿಎಂಪಿ ಸಹಯೋಗದೊಂದಿಗೆ ಬಸವನಪುರ ವಾರ್ಡ್​​ನ ಸ್ವಾತಂತ್ರ್ಯ ನಗರದಲ್ಲಿ ಪೌರಕಾರ್ಮಿಕರಿಗೆ ಕೋವಿಡ್ -19 ಸ್ಕ್ರೀನಿಂಗ್ ಮಾಡಲಾಯಿತು.

ಬೆಂಗಳೂರಿನಲ್ಲಿ ಪೌರಕಾರ್ಮಿಕರಿಗೆ ಸ್ಕ್ರೀನಿಂಗ್: ಮಾಸ್ಕ್, ಗ್ಲೌಸ್ ವಿತರಣೆ

ನಂತರ ಎಲ್ಲಾ ಪೌರಕಾರ್ಮಿಕರಿಗೆ ಉಚಿತವಾಗಿ ಎನ್-95 ಮಾಸ್ಕ್ ಹಾಗೂ ಗ್ಲೌಸ್ ವಿತರಿಸಲಾಯಿತು. ಈ ಭಾಗದ ಗರ್ಭಿಣಿಯರು, ಮಹಿಳೆಯರು, ಮಕ್ಕಳು ಹಾಗೂ ತಾಯಂದಿರಿಗೆ ದೇಹದ ಉಷ್ಣತೆ ಪರೀಕ್ಷೆ ಮಾಡಲಾಯಿತು.

ಈ ವೇಳೆ ಮಾತನಾಡಿದ ಆರೋಗ್ಯ ನಿರೀಕ್ಷಕ ಗುರುರಾಜ್, ಬಸವನಪುರ ವಾರ್ಡ್​ನ ಎಲ್ಲಾ ಪೌರಕಾರ್ಮಿಕರಿಗೆ ಸ್ವಚ್ಛತೆಗೆ ಹೆಚ್ಚು ಮಹತ್ವ ನೀಡಲು ಸಲಹೆ ನೀಡಿದರು. ಮುಖ್ಯವಾಗಿ ಕೊರೊನಾ ವೈರಸ್ ಹರಡುವಿಕೆ ಹಾಗೂ ಅದರಿಂದ ಉಂಟಾಗುವ ಪರಿಣಾಮದ ಬಗ್ಗೆ ಮಾಹಿತಿ ನೀಡಿದರು. ಎಲ್ಲರೂ ಸಾಮಾಜಿಕ ಅಂತರ ಕಾಪಾಡಿಕೊಂಡು ಹೆಮ್ಮಾರಿ ಕೊರೊನಾ ಓಡಿಸಲು ಸಹಕರಿಸೋಣ ಎಂದರು.

ABOUT THE AUTHOR

...view details