ಬೆಂಗಳೂರು:ಚೀನಾ ಮೂಲದ ಲೋನ್ ಆ್ಯಪ್ಗಳ ಹಾವಳಿಯಿಂದ ಈಗಾಗಲೇ ಸಾಕಷ್ಟು ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಹೀಗಾಗಿ ಸಾಲ ಕೊಡುವ ಈ ಚೈನೀಸ್ ಲೋನ್ ಆ್ಯಪ್ಗಳ ಹಾವಳಿ ನಿಯಂತ್ರಿಸಲು ಬೆಂಗಳೂರು ನಗರ ಪೊಲೀಸರು ಪಣ ತೊಟ್ಟಿದ್ದು, ಒಂದು ವರ್ಷದಲ್ಲಿ ಅಂದಾಜು 100 ಕೋಟಿ ಹಣ ಫ್ರೀಜ್ ಮಾಡಿದ್ದಾರೆ.
2 ರಿಂದ 7 ಸಾವಿರದವರೆಗೆ ಸಾಲ ಕೊಟ್ಟು, ಅದನ್ನು ಮರುಪಾವತಿ ಮಾಡದ ಗ್ರಾಹಕರಿಗೆ ಅಶ್ಲೀಲ ಸಂದೇಶ ಹಾಗೂ ಬೈಗುಳ ಕಿರುಕುಳ ಕೊಡುತ್ತಿದ್ದ ಆನ್ಲೈನ್ ಲೋನ್ ಆ್ಯಪ್ಗಳ ಉಪಟಳಕ್ಕೆ ಈಗಾಗಲೇ ದೇಶದಾದ್ಯಂತ ಸಾಕಷ್ಟು ಮಂದಿ ಮೋಸ ಹೋಗಿದ್ದಾರೆ. ಇದಕ್ಕೆ ಸಿಲಿಕಾನ್ ಸಿಟಿ ಸಹ ಹೊರತಾಗಿಲ್ಲ. ಹೀಗಾಗಿಯೇ ಬೆಂಗಳೂರು ನಗರ ಪೊಲೀಸರು ಅಂದರೆ ಸಿಸಿಬಿ ಹಾಗೂ ನಗರದ ಸೆನ್ ಪೊಲೀಸ್ ಠಾಣೆಯ ಅಧಿಕಾರಿಗಳು ಕಳೆದ ಒಂದು ವರ್ಷದಿಂದ ಲೋನ್ ಆ್ಯಪ್ಗಳ ಕೇಸ್ಗಳಲ್ಲಿ ನಿರಂತರ ಕಾರ್ಯಾಚರಣೆ ನಡೆಸುತ್ತಿದ್ದಾರೆ.
ಚೈನೀಸ್ ಲೋನ್ ಆ್ಯಪ್ಗಳ ಬೆನ್ನು ಬಿದ್ದಿರುವ ನಗರ ಪೊಲೀಸರು, ಕಳೆದ ಒಂದು ವರ್ಷದಲ್ಲಿ ಸುಮಾರು ನೂರು ಕೋಟಿ ಹಣ ಪ್ರೀಜ್ ಮಾಡಿದ್ದಾರೆ. ಚೈನೀಸ್ ಲೋನ್ ಆ್ಯಪ್ ಸೇರಿದಂತೆ ಸೈಬರ್ ಚೋರರ ಪ್ರಕರಣಗಳಿಗೆ ಸಂಬಂಧಿಸಿದಂತೆ ನಗರದ ಸೆನ್ ಠಾಣೆಯ ಪೊಲೀಸರು ಸಾಕಷ್ಟು ಪ್ರಕರಣಗಳನ್ನು ದಾಖಲಿಸಿಕೊಂಡು ತನಿಖೆ ನಡೆಸಿದ್ದು, ಈಗಾಗಲೇ ಹಲವು ಮಂದಿ ಆರೋಪಿಗಳನ್ನ ಬಂಧಿಸಿ, ಕೋಟ್ಯಂತರ ರೂಪಾಯಿ ಫ್ರೀಜ್ ಮಾಡಿದ್ದಾರೆ.